Asianet Suvarna News Asianet Suvarna News

Karnataka Politics: ಜೆಡಿಎಸ್‌ ಬೆನ್ನಲ್ಲೇ ಕಾಂಗ್ರೆಸ್‌ಗೂ ಶಾಕ್ ಕೊಟ್ಟ ಜಿಟಿ ದೇವೇಗೌಡ

* ಜೆಡಿಎಸ್‌ ಬೆನ್ನಲ್ಲೇ ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಜಿಟಿ ದೇವೇಗೌಡ
* ತಮಗೆ ಹಾಗೂ ತಮ್ಮ ಪುತ್ರನಿಗೆ ಟಿಕೆಟ್ ಕೊಡಬೇಕೆಂದ ಜಿಟಿಡಿ
* ಇಬ್ಬರಿಗೆ ಟಿಕೆಟ್ ಕೊಟ್ರೆ ಮಾತ್ರ ಕಾಂಗ್ರೆಸ್ ಸೇರ್ಪಡೆ

JDS MLA GT Devegowda demands Congress for ticket to his Son rbj
Author
Bengaluru, First Published Nov 14, 2021, 8:35 PM IST

ಬೆಂಗಳೂರು, (ನ.14): ಜೆಡಿಎಸ್ (JDS) ಶಾಸಕ ಜಿಟಿ ದೇವೇಗೌಡ (GT Devegowda) ಅವರು ಈಗಾಗಲೇ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನು ಮತ್ತೊಂದೆಡೆ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ರಣತಂತ್ರ ರೂಪಿಸಿದೆ ಜಿಟಿಡಿ ಪತ್ನಿ ಲಲಿತಾ ದೇವೇಗೌಡ ಅವರನ್ನ ವಿಧಾನಪರಿಷತ್‌ ಚುನಾವಣೆಗೆ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಆದ್ರೆ, ಜಿಟಿ ದೇವೇಗೌಡ ಮಾತ್ರ ಜೆಡಿಎಸ್‌ ಟಿಕೆಟ್ ಆಫರ್‌ ಅನ್ನು ತಿರಸ್ಕರಿಸಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್‌ಗೆ (Congress) ಒಂದು ಸಿಂಪಲ್‌ ಆಗಿ ಒಂದು ಶಾಕ್ ಕೊಟ್ಟಿದ್ದಾರೆ.ತಮಗೆ ಹಾಗೂ ತಮ್ಮ ಪುತ್ರನಿಗೆ ಟಿಕೆಟ್ ನೀಡಿದ್ರೆ ಮಾತ್ರ ಕಾಂಗ್ರೆಸ್ ಸೇರುವುದಾಗಿ ಜಿಟಿಡಿ ಹೇಳಿದ್ದು, ಟಿಕೆಟ್ ಕೊಡದಿದ್ದರೆ ಕಾಂಗ್ರೆಸ್ ಸೇರಲ್ಲ ಎಂದಿದ್ದಾರೆ.

ಜೆಡಿಎಸ್ ಆಫರ್ ನಿರಾಕರಿಸಿದ ಜಿಟಿ ದೇವೇಗೌಡ, ದಳಪತಿಗಳ ಪ್ಲಾನ್ ಫೇಲ್

ಹೌದು.... ಈ ಬಗ್ಗೆ ಮೈಸೂರಿನಲ್ಲಿ (Mysuru) ಇಮದು (ಭಾನುವಾರ) ಪ್ರತಿಕ್ರಿಯಿಸಿರುವ ಜಿಟಿಡಿ, ಕಾಂಗ್ರೆಸ್​ನಿಂದ ನನಗೂ, ನನ್ನ ಮಗ ಹರೀಶ್​​ ಗೌಡಗೆ ಟಿಕೆಟ್​​ ಕೇಳಿದ್ದೇನೆ. ಎರಡು ಕ್ಷೇತ್ರಗಳಲ್ಲಿ ಟಿಕೆಟ್​​ ನೀಡಿದರೆ, ಕಾಂಗ್ರೆಸ್​ ಸೇರುತ್ತೇನೆ.  ಇಬ್ಬರಿಗೆ ಟಿಕೆಟ್​​ ನೀಡದಿದ್ರೆ ಕಾಂಗ್ರೆಸ್​ ಸೇರೋದಿಲ್ಲ, ಬದಲಿಗೆ ಪಕ್ಷೇತರರಾಗಿ ಸರ್ಧೆ ಮಾಡ್ತೀವಿ. ಯಾವ ಪಾರ್ಟಿ ಬೆಂಬಲವೂ ಇಲ್ಲದೇ ಪಕ್ಷೇತರರಾಗಿ ಗೆದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾನು ಈಗಾಗಲೇ ಒಂದು ಕಾಲಲ್ಲ, ಬದಲಿಗೆ ಎರಡು ಕಾಲು ಹೊರಗಿಟ್ಟಿದ್ದೇನೆ. ಪರಿಷತ್ ಚುನಾವಣೆಗೆ ಜೆಡಿಎಸ್ ಪರ ಕೆಲಸ ಮಾಡಬೇಕೆಂಬುದನ್ನ ಇನ್ನೂ ನಿರ್ಧರಿಸಿಲ್ಲ. ಯಾವ ಪಕ್ಷ ನಮಗೆ ಬೇಕಾದವರಿಗೆ ಟಿಕೆಟ್ ನೀಡುತ್ತೋ ಅವರ ಪರ ಕೆಲಸ ಮಾಡುತ್ತೇವೆ. ನಾನು ಜೆಡಿಎಸ್ ಪಕ್ಷವನ್ನ ಗಟ್ಟಿಯಾಗಿ ಬೆಳೆಸಿದ್ದೇನೆ ಹೊರತು ತಿಂದು, ಉಂಡು ಹೋಗುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Karnataka Politics: ಒಂದೇ ವೇದಿಕೆಯಲ್ಲಿ ಸಿದ್ದು-ಜಿಟಿಡಿ: ಎದುರಾಳಿಗಳು ಒಂದಾಗುವ ಸುಳಿವು

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾಕಷ್ಟು ಅಪಮಾನ ಮಾಡಿದ್ದಾರೆ. ಸಾ.ರಾ ಮಹೇಶ್​​​ಗೆ ಯಡಿಯೂರಪ್ಪ ವಾಸವಿದ್ದ ದೊಡ್ಡ ಸರ್ಕಾರಿ ಬಂಗಲೆ ಕೊಟ್ಟಿದ್ದರು. ಆದರೆ, ನನಗೆ ಒಂದು ಸಣ್ಣ ನಿವಾಸ ಕೊಡೋದಕ್ಕೂ ಹಿಂದೆ-ಮುಂದೆ ನೋಡಿದ್ರು. ನನಗೆ ಆಪ್ತ ಕಾರ್ಯದರ್ಶಿಯನ್ನೇ ಕೊಡಲಿಲ್ಲ. ಕೊನೆಗೆ ಡಿ.ಕೆ ಶಿವಕುಮಾರ್ ಹೇಳಿದ ಮೇಲೆ ಕೊಟ್ಟರು ಎಂದು ಅಂದಿನ ಘಟನಾವಳಿಗಳನ್ನ ಬಿಚ್ಚಿಟ್ಟರು. 

ನನಗಿಂತ ಹದಿನೈದು ವರ್ಷದ ಕಿರಿಯರಿಗೆ ಬೇಕಾದ ಖಾತೆಗಳನ್ನ ಕೊಟ್ಟರು. ನಮಗೆ ಮಾತ್ರ ಬೇಡವಾದ ಖಾತೆ ಕೊಟ್ಟು ಅವಮಾನ ಮಾಡಿದ್ರು. ಇದನ್ನೆಲ್ಲಾ ಸಹಿಸಿಕೊಂಡು ಬಂದಿದ್ದೇನೆ. ನಿರಂತರವಾಗಿ ಅಪಮಾನ ಮಾಡಿದ್ರೆ ಪಕ್ಷದಲ್ಲಿ ಹೇಗೆ ಉಳಿಯಲು ಸಾಧ್ಯ. ಅದೇ ಕಾರಣಕ್ಕೆ ಎರಡೂ ಕಾಲನ್ನ ಹೊರಗೆ ಇಟ್ಟಿದ್ದೇನೆ ಎಂದು ಹೇಳಿದರು.

ಒಂದೇ ವೇದಿಕೆ ಹಂಚಿಕೊಂಡಿದ್ದ ಸಿದ್ದು-ಜಿಟಿಡಿ
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ರಾಜಕೀಯದಲ್ಲಿ ಬದ್ಧ ವೈರಿಗಳಾಗಿದ್ದ ಜಿಡಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಇದೀಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ಟ್ರಸ್ಟ್‌ ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಮೇಲೆ ಸಿದ್ದು-ಜಿಟಿಡಿ ಒಬ್ಬರಿಗೊಬ್ಬರು ಹಾಡಿ ಹೊಗಳಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ್ದ ಸಿದ್ದರಾಮಯ್ಯ,  ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಜಿಟಿಡಿಯನ್ನು ಅಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‍ಗೆ ಬರುವುದು ಬಿಡುವುದು ಜಿಟಿಡಿಗೆ ಬಿಟ್ಟಿದ್ದು. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಜಿಟಿಡಿ ಬಂದರೂ ಸ್ವಾಗತ. ಜಿಟಿಡಿ ನನ್ನ ರಾಜಕೀಯ ಎದುರಾಳಿ ಹೊರತು ವೈರಿ ಅಲ್ಲ. ನನಗೂ ಜಿಟಿಡಿಗೂ ವೈಯಕ್ತಿಕ ದ್ವೇಷ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

Follow Us:
Download App:
  • android
  • ios