ಜೆಡಿಎಸ್ ಆಫರ್ ನಿರಾಕರಿಸಿದ ಜಿಟಿ ದೇವೇಗೌಡ, ದಳಪತಿಗಳ ಪ್ಲಾನ್ ಫೇಲ್
* ಜಿಟಿ ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ದಳಪತಿಗಳು ಪ್ಲಾನ್
* ಜಿಟಿಡಿ ಹಿಡಿದಿಟ್ಟುಕೊಳ್ಳಲು ಜೆಡಿಎಸ್‌ನಿಂದ ಬಿಗ್ ಆಫರ್
* ಜೆಡಿಎಸ್ ಆಫರ್ ನಿರಾಕರಿಸಿದ ಜಿಟಿ ದೇವೇಗೌಡ,
ಮೈಸೂರು, (ನ.13): ಈಗಾಗಲೇ ಜಿಡಿಎಸ್‌ನಿಂದ (JDS) ಆಚೆ ಬಂದಿರುವ ಶಾಸಕ ಜಿಟಿ ದೇವೇಗೌಡರನ್ನು (GT Devegowda) ಪಕ್ಷದಲ್ಲೇ ಉಳಿಸಿಕೊಳ್ಳಲು ದಳಪತಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ (MLC Election) ಜಿಟಿಡಿ ಪತ್ನಿ ಲಲಿತಾ ದೇವೇಗೌಡ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಈ ಮೂಲಕ ಜೆಡಿಎಸ್ ಜಿಟಿ ದೇವೇಗೌಡ್ರನ್ನ ಪಕ್ಷ ಬಿಟ್ಟು ಹೋಗದಂತೆ ಹಿಡಿದಿಟ್ಟುಕೊಳ್ಳುವ ರಣತಂತ್ರ ರೂಪಿಸಿದೆ. ಆದ್ರೆ, ಜಿಟಿ ದೇವೇಗೌಡರು ಜೆಡಿಎಸ್ ಆಫರ್ ಅನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ (Mysuru) ಇಂದು (ನ.13) ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕುಟುಂಬದಿಂದ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಜೆಡಿಎಸ್ ನವರು ನನ್ನನ್ನು ಬಿಟ್ಟು ತುಂಬಾ ವರ್ಷಗಳಾಗಿದೆ. ನನ್ನನ್ನು ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಧ್ಯಕ್ಷರ ನೇಮಕ ಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ ಎಂದು ಜಿಟಿಡಿ ಮತ್ತೆ ದಳಪತಿಗಳಿಗೆ ಟಾಂಗ್ ಕೊಟ್ಟರು.
ನನ್ನ ಗಮನಕ್ಕೆ ತಾರದೆ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದು ಹೋಗಿದ್ದಾರೆ. ರಾಜಕೀಯ ಮಾಡುವ ಸಂದರ್ಭ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.
ಜಿಟಿಡಿ ಮನವೊಲಿಸುವ ಕಸರತ್ತು ವಿಫಲ
ಹೌದು....ಜಿಟಿ ದೇವೇಗೌಡರನ್ನು ಮನವೊಲಿಸಲು ಶಾಸಕ ಸಾರಾ ಮಹೇಶ್ (SaRa Mahesh) ಕಸರತ್ತು ನಡೆಸಿದ್ದಾರೆ. ಅದಕ್ಕಾಗಿಯೇ ಅವರ ಕುಟುಂಬಕ್ಕೆ ಪರಿಷತ್ ಆಫರ್ ಮುಂದಿಟ್ಟಿದ್ದಾರೆ.
ಎಂಎಲ್ಸಿ ಚುನಾವಣೆಯನ್ನು ಜಿಟಿಡಿ ನೇತೃತ್ವದಲ್ಲೇ ನಡೆಸುತ್ತೇವೆ. ಅವರ ಕುಟುಂಬದಿಂದಲೇ ಅಭ್ಯರ್ಥಿಯಾಗಬೇಕು ಅನ್ನೋದು ನಮ್ಮ ಬಯಕೆ. ಅವರು ನಮ್ಮ ಪಕ್ಷದ ನಾಯಕರು. ಇಡೀ ಕುಟುಂಬ ಸಾರ್ವಜನಿಕರ ಸೇವೆ ಮಾಡುತ್ತಿದೆ. ಅಂತಹ ಕುಟುಂಬದಿಂದ ಅಭ್ಯರ್ಥಿಯಾದರೆ ತಪ್ಪೇನಿಲ್ಲ. ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಇನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ ಎದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ. ಆದ್ರೆ, ಇದಕ್ಕೆ ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಸ್ಪಷ್ಟಪಡಿಸಿದ್ದು, ಸಾರಾ ಮಹೇಶ್ ಪ್ಲಾನ್ ವಿಫಲವಾದಂತಾಗಿದೆ.
ಜಿಟಿಡಿ ಸಿದ್ದು ಜತೆ ವೇದಿಕೆ ಹಂಚಿಕೊಂಡಾಯ್ತು
ಹೌದು...ಈಗಾಗಲೇ ಕಾಂಗ್ರೆಸ್ ಸೇರಲು ಬಯಸಿರುವ ಜಿಟಿ ದೇವೇಗೌಡ, ಪಕ್ಷದ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ರಾಜಕೀಯ ಎದುರಾಳಿಯಾಗಿದ್ದ ಸಿದ್ದರಾಮಯ್ಯನವರ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಅಲ್ಲದೇ ಕಾರ್ಯಕ್ರವೊಂದರಲ್ಲಿ ಸಿದ್ದರಾಮಯ್ಯನವರನ್ನ ಗುಣಗಾಣ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆ ಈಗಾಗಲೇ ಎರಡು ಸುತ್ತಿನ ಮಾತುಕತೆಗಳು ಮುಗಿದಿದ್ದು, ಜಿಟಿಡಿ ಅಧಿಕೃತ ಕಾಂಗ್ರೆಸ್ ಸೇರ್ಪಡೆ ಯೊಂದೇ ಬಾಕಿ ಇದೆ.
ಕುಮಾರಸ್ವಾಮಿ ಮೇಲೆಯೇ ಮುನಿಸು
ಯೆಸ್...ಎಚ್‌ಡಿ ಕುಮಾರಸ್ವಾಮಿ ಅವರ ನಡವಳಿಕೆಯಿಂದ ಜಿಟಿ ದೇವೇಗೌಡ ಜೆಡಿಎಸ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ, ಈಗಲೂ ದೇವೇಗೌಡ್ರ ಮೇಲೆ ಜಿಟಿಡಿ ಸಾಫ್ಟ್ ಕಾರ್ನರ್ ಇದೆ.
ಒಟ್ಟಿನಲ್ಲಿ ದಳಪತಿಗಳ ಎಲ್ಲಾ ಪ್ಲಾನ್‌ಗಳಿಗೂ ಜಿಟಿ ದೇವೇಗೌಡ ಬಗ್ಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಜೆಡಿಎಸ್ ತೊರೆಯಲು ಈಗಾಗಲೇ ಮನಸ್ಸು ಮಾಡಿದ್ದಾರೆ.