ಸಿಎಂ ಸಿದ್ದರಾಮಯ್ಯರ ಒಂದು ಕೂದಲೂ ಕಿತ್ಕೊಳ್ಳೋಕಾಗೊಲ್ಲ; ಕೇಂದ್ರದ ನಾಯಕರಿಗೆ ಪ್ರದೀಪ್ ಈಶ್ವರ್ ಸವಾಲು!
ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಹೆಸರು ಸಿಲುಕಿಸಲು ಇಡಿ, ಕೇಂದ್ರ ನಾಯಕರು ವಿಚಾರಣೆ ನೆಪದಲ್ಲಿ ಒತ್ತಡ ಹಾಕುತ್ತಿದ್ದಾರೆ ಸಿಎಂ ಸಿದ್ದರಾಮಯ್ಯರ ಒಂದು ಕೂದಲು ಸಹ ಟಚ್ ಮಾಡೋಕೆ ಆಗೊಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಂಗಲ್ ಗೇಟ್
ಕೇಂದ್ರದ ಬಿಜೆಪಿಯವರು ರಾಜ್ಯಕ್ಕೆ ಕಳಂಕ ತರಲು ಹೊರಟಿದ್ದಾರೆ. ಕಲ್ಲೇಶ್ ಅವರನ್ನ ಇಡಿ ವಿಚಾರಣೆಗೆ ಕರೆದಿದ್ದಾರೆ. ಅಧಿಕಾರಿಗಳು ಅವರಿಗೆ ಸಿಎಂ ಹೆಸರು ಹೇಳುವಂತೆ ಒತ್ತಡ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಒಂದು ಕೂದಲ್ಲನ್ನೂ ಕೇಂದ್ರದ ನಾಯಕರು ಟಚ್ ಮಾಡೋದಕ್ಕು ಸಾಧ್ಯವಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.
ಇಂದು ವಿಧಾನಸೌಧ ಕೆಂಗಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಕಲ್ಲೇಶ್ ಅವರಿಗೆ 17 ಪ್ರಶ್ನೆ ತುಂಬಲು ಕೊಡ್ತಾರೆ. ಮನೋಜ್ ಮಿತ್ತಲ್, ಕಣ್ಣನ್ ಇಬ್ಬರು ಇಡಿ ಆಫೀಸರಗಳು ಒತ್ತಡ ಹಾಕಿದ್ದಾರೆ. ಇಲ್ಲದಿದ್ರೆ ಶಿಕ್ಷೆ ಆಗೋತರ ಮಾಡ್ತಿವಿ ಅಂತಾ ಧಮಕಿ ಹಾಕಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಸ್ಟೇಷನ್‌ಗೆ ದೂರು ನೀಡಲಾಗಿದೆ. ಕೇಂದ್ರದ ನಾಯಕರು ಹಿಂದುಳಿದ ವರ್ಗಗಳ ನಾಯಕನಿಗೆ ಈ ರೀತಿ ಮಾಡ್ತಿದ್ದಾರೆ. ಒಂದು ತಿಳ್ಕೊಳ್ಳಿ ಸಿಎಂ ಸಿದ್ದರಾಮಯ್ಯ ಅವರ ಒಂದು ಕೂದಲನ್ನೂ ಕೀಳಲು ಸಾಧ್ಯವಿಲ್ಲ ಎಂದು ಕೇಂದ್ರದ ನಾಯಕರಿಗೆ ಸವಾಲು ಹಾಕಿದರು.
ಅಯ್ಯೋ...! ಈ ಬಾರಿಯೂ ಶಾಸಕ ಪ್ರದೀಪ್ ಈಶ್ವರ್‌ಗೆ ಮಾತನಾಡಲು ಅವಕಾಶ ಕೊಡದ ಸ್ಪೀಕರ್!