ಬಾಂಬ್‌ ಹಾಕೋದು, ರಕ್ತಕ್ರಾಂತಿ ಮಾಡೋದು ಜನರಿಗೆ ಬೇಕಾಗಿಲ್ಲ: ಸಂತೋಷ್

ಬಾಂಬ್ ಹಾಕುವುದು, ರಕ್ತಕ್ರಾಂತಿ ಮಾಡುವುದು ಜನರಿಗೆ ಬೇಕಾಗಿಲ್ಲ. ಜಲಕ್ರಾಂತಿ ಆಗಬೇಕಾಗಿದೆ. ಈಕ್ಷೇತ್ರ ನೀರಾವರಿಯಿಂದ ವಂಚಿತವಾಗಿದೆ. ಹೇಮಾವತಿ ನದಿ ಹುಟ್ಟಿದ ಜಿಲ್ಲೆಯಲ್ಲಿ ಇದ್ದರೂ ಕೂಡ ಕಾವೇರಿ, ಕೃಷ್ಣ ಬೇಸಿಕ್ ಕಥೆ ಕೇಳಿಕೊಂಡು ಇಷ್ಟು ವರ್ಷ ಬರಗಾಲದ ಬೆಂಗಾಡಲ್ಲಿ ನಮ್ಮ ಜನರು ನರಳುತ್ತಿದ್ದಾರೆ ಎಂದ  ಜೆಡಿಎಸ್ ಮುಖಂಡ ಸಂತೋಷ್

JDS Leader Santosh Slams MLA KM Shivalingegowda grg

ಹಾಸನ(ಜ.01):  ಅರಸೀಕೆರೆ ತಾಲೂಕಿನ ಜನರಿಗೆ ಅವಶ್ಯಕತೆ ಇರುವುದು ನೀರು. ಅದನ್ನು ಬಿಟ್ಟು ನೀವು ಸಚಿವರಾಗಬೇಕು ಎನ್ನುವ ಆತುರದಲ್ಲಿ ಏನೇನೋ ಮಾತನಾಡಬೇಡಿ ಎಂದು ಜೆಡಿಎಸ್ ಮುಖಂಡ ಸಂತೋಷ್ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಸಲಹೆ ನೀಡಿದ್ದಾರೆ. 

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಈ ಸರ್ಕಾರಕ್ಕೆ ಏನಾದರೂ ತೊಂದರೆ ಆದರೆ ರಕ್ತ ಕ್ರಾಂತಿ ಆಗುತ್ತದೆ ಎಂದುಶಾಸಕ ಶಿವಲಿಂಗೇ ಗೌಡರು ಹಿಂದೆ ಹೇಳಿಕೆ ನೀಡಿದ್ದು, ಎತ್ತಿನಹೊಳೆ ಯೋಜನೆಯಲ್ಲಿ ಬಾಂಬ್ ಹಾಕಿ ಜಮೀನು ಬಿಡಿಸಿ ಕೊಳ್ಳುವುದಾಗಿ ಕೆಲ ದಿನಗಳ ಹಿಂದೆ ಕೆಡಿಪಿ ಸಭೆಯಲ್ಲಿ ಹೇಳಿದ್ದು, ತಮಟೆ ಬಡಿಯು ತೀನಿ ಗೋಪಾಲಸ್ವಾಮಿ ಅವರೆ ಎಂದು ಚಿನ್ನರಾಯಪಟ್ಟಣದ ಕಾರ್ಯಕ್ರಮ ವೊಂದರಲ್ಲಿ ಗೋಗರೆಯುತ್ತಿದ್ದರು. ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ ಅದಕ್ಕೆ ನಮ್ಮ ಸಹಾನುಭೂತಿ ಇದೆ. ಮಂತ್ರಿ ಆಗಲೇಬೇಕೆನ್ನುವ ಉದ್ದೇಶದಿಂದ ಇಷ್ಟೆಲ್ಲಾ ಹೇಳಿಕೆ ಮತ್ತು ದಂಬರಾಟಗಳನ್ನು ನಡೆಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು. 

ಪೊಲೀಸರು ಕೆಲವರ ನಿರ್ದೇಶನದಂತೆ ಕುಣಿತಾರೆ: ಕೇಂದ್ರ ಸಚಿವ ಕುಮಾರಸ್ವಾಮಿ

ಬಾಂಬ್ ಹಾಕುವುದು, ರಕ್ತಕ್ರಾಂತಿ ಮಾಡುವುದು ಜನರಿಗೆ ಬೇಕಾಗಿಲ್ಲ. ಜಲಕ್ರಾಂತಿ ಆಗಬೇಕಾಗಿದೆ. ಈಕ್ಷೇತ್ರ ನೀರಾವರಿಯಿಂದ ವಂಚಿತವಾಗಿದೆ. ಹೇಮಾವತಿ ನದಿ ಹುಟ್ಟಿದ ಜಿಲ್ಲೆಯಲ್ಲಿ ಇದ್ದರೂ ಕೂಡ ಕಾವೇರಿ, ಕೃಷ್ಣ ಬೇಸಿಕ್ ಕಥೆ ಕೇಳಿಕೊಂಡು ಇಷ್ಟು ವರ್ಷ ಬರಗಾಲದ ಬೆಂಗಾಡಲ್ಲಿ ನಮ್ಮ ಜನರು ನರಳುತ್ತಿದ್ದಾರೆ ಎಂದರು. 

ನಾನು ವಿರೋಧ ಪಕ್ಷದಲ್ಲಿದ್ದ ಒಬ್ಬ ಶಾಸಕನಾಗಿ ಕೆಲಸ ಹೆಚ್ಚು ಮಾಡುವುದಕ್ಕೆ ಆಗಿರಲಿಲ್ಲ ಎಂದು ಹೇಳಲಾಗಿತ್ತು. ಕ್ಯಾಬಿನೆಟ್ ದರ್ಜೆಯ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೀರಿ, ಮುಂದಾದರೂ ರಕ್ತ ಕ್ರಾಂತಿ ಬಿಟ್ಟು ಜಲಕ್ರಾಂತಿ ಮಾಡಿ. ಅರಸೀಕೆರೆ ಕಸಬಾಜಾಜೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 70 ಮತ್ತು 71 ರ ಮದ್ಯೆ ಕಾಮಗಾರಿಯ ಮಾರ್ಗ ಸೂಚನೆಗಳನ್ನು ಪಾಲಿಸದೆ ಎಂಬ ಇಲಾಖೆಯಿಂದ ಅಕ್ರಮವಾಗಿ ಸುಮಾರು ಒಂದು ಕೋಟಿ ವೆಚ್ಚದ ಸೇತುವೆಯನ್ನು ನಿರ್ಮಾಣ ಮಾಡಿದ್ದು, ಹಳ್ಳಿಗಳ ಮಧ್ಯೆ ಸಂಪರ್ಕ ರಸ್ತೆ ಇಲ್ಲದಿದ್ದರು ಸೇತುವೆ ಮಾಡಿದ್ದಾರೆ. ಇದರ ಉದ್ದೇಶ ಪ್ರಸ್ತುತ ಅಧ್ಯಕ್ಷರಾಗಿರುವ ಸಮಿವುಲ್ಲಾ ಮತ್ತು ಅವರ ಪತ್ನಿ. ಮಕ್ಕಳು, ಆಳಿಯನ ಹೆಸರಿನಲ್ಲಿ  ಹಾಗೂ ರಿಯಲ್ ಎಸ್ಟೇ ಟ್ ಉದ್ಯಮಿ ವೆಂಕಟೇಶ್ ಮತ್ತು ಅವರ ಪತ್ನಿ, ತಂದೆ ಹೆಸರಿನಲ್ಲಿ ಜಮೀನು ಇದೆ. ಒಟ್ಟಾರೆಯಾಗಿ ಸುಮಾರು 14 ಎಕರೆ ಜಮೀನು ಇದ್ದು ಶಾಸಕರ ಅಧಿಕಾರ ದುರುಪಯೋಗಮಾಡಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬಡಾವಣೆ ಮಾಡಲು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು. 

ಪೊಲೀಸರನ್ನು ಬಳಸಿ ವಿರೋಧಿಗಳ ದಮನಕ್ಕೆ ಕಾಂಗ್ರೆಸ್‌ ಹುನ್ನಾರ: ಕುಮಾರಸ್ವಾಮಿ ಕಿಡಿ

ಸಮಿವುಲ್ಲಾ ಮತ್ತು ಅವರ ಅಪ್ತರು ಹೊಸ ಬಡಾವಣೆಗಳನ್ನು ಮಾಡಲು ಹೊರಟಿರುವ ಜಾಗಗಳ ಹತ್ತಿರ ರಸ್ತೆ ನಿರ್ಮಾಣ ಮಾಡುತ್ತಿರುವುದು. ಉದಾಹರಣೆಗೆ ಕೆ.ಎಸ್.ಆರ್.ಟಿ.ಸಿ. ಡಿಪೋ ಹಿಂಭಾಗ ಟಾರ್‌ ರಸ್ತೆ ನಿರ್ಮಾಣ ಹಾಗೂ ವಾರ್ಡ್ ಸಂಖ್ಯೆ 30 ಮಾರುತಿ ನಗರದ ಟಮೋಟೊ ಗೋಡೌನ್ ಹತ್ತಿ ಸಿಸಿ ರಸ್ತೆ ನಿರ್ಮಾಣ ಮಾಡಿರುವುದು. ಇದರಿಂದ ಸಾರ್ವಜನಿಕರ ತೆರಿಗೆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವುದು. ಯಾವ ಸದಸ್ಯ ಇವರ ಜೊತೆ ಹೊಂದಾಣಿಕೆ ಮಾಡಿ ಕೊಳ್ಳವುದಿಲ್ಲ ಅವರ ವಾರ್ಡಿನಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗದಂತೆ ನೋಡಿಕೊಳ್ಳುವುದರ ಜೊತೆಗೆ ಅಧಿಕಾರಿಗಳನ್ನು ತನ್ನ ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದರು. 

ನಗರಸಭೆಯಲ್ಲಿ ಸಾರ್ವಜನಿಕರ ಭೇಟಿಯನ್ನು ಮಧ್ಯಾಹ್ನ 3-30ರ ನಂತರ ಅವಕಾಶ ಮಾಡಿಕೊಡ ಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸರ್ಕಾರಿ ಸೇವೆಯಿಂದ ಸಾರ್ವಜನಿಕರನ್ನು ದೂರ ಇಡುವುದಾಗಿದೆ. ಈ ಹಿಂದಿನ ಅಧ್ಯಕ್ಷ ಗಿರೀಶ್ ಅವಧಿಯಲ್ಲಿ ಅಂತಿಮವಾಗಿದ್ದ ಕೆಲವು ಕಾಮಗಾರಿಗಳನ್ನು ಶಾಸಕರ ಪ್ರಭಾವದಿಂದ ತಡೆಯಿಡಿದು ಇವಾಗ ಅದಕ್ಕೆ ಚಾಲನೆ ಕೊಟ್ಟು ನಾನೇ ಮಾಡಿದ್ದು ಎಂದು ಅಧ್ಯಕ್ಷ ಸಮೀವುಲ್ಲಾ ಬಂಡತನದ ಆಡಳಿತ ಮಾಡುತ್ತಿದ್ದಾರೆ. ಗಿರೀಶ್ ರವರ ಅವಧಿಯಲ್ಲಿ ಅಂತಿಮವಾಗಿರು ವಿದ್ಯಾರ್ಥಿ ವೇತನ ವನ್ನು ಸಹ ನಾನೇ ಕೊಡಿಸಿದ್ದು ಅಂತ ಹೇಳಿಕೊಳ್ಳುತ್ತಾ ಬರಿ ಪ್ರಚಾರ ತೆಗೆದುಕೊಳ್ಳುವುದಕ್ಕೆ ಮಾತ್ರ ಇವರ ಆಡಳಿತ ಸಿಮಿತವಾಗಿದೆ. ಕಾಟೀಕೆರೆ ಮೋಹನ್, ಮೇಲಗಿರಿ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ರಮೇಶ್, ರಮೇಶ್ ನಾಯ್ಡ್ ಇದ್ದರು.

Latest Videos
Follow Us:
Download App:
  • android
  • ios