ಪೊಲೀಸರು ಕೆಲವರ ನಿರ್ದೇಶನದಂತೆ ಕುಣಿತಾರೆ: ಕೇಂದ್ರ ಸಚಿವ ಕುಮಾರಸ್ವಾಮಿ
ಕಲ್ಬುರ್ಗಿಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ, ಅವರ ಕೊಡುಗೆ ಏನಿದೆ, ನಾನು ಅದಕ್ಕೆ ಚಾಲನೆ ಕೊಟ್ಟೆ, ಬಿಜೆಪಿ ಸರ್ಕಾರ 128 ಕೋಟಿ ರು. ಹಣ ಬಿಡುಗಡೆ ಮಾಡಿದ್ರು ಎಂದ ಕೇಂದ್ರ ಸಚಿವ ಕುಮಾರಸ್ವಾಮಿ
ಹೊಳೆನರಸೀಪುರ(ಡಿ.24): ವಿರೋಧಿಗಳನ್ನು ಸದೆಬಡಿಯಲು ಕಾನೂನಿನ ಉಲ್ಲಂಘನೆ ಹಾಗೂ ದುರುಪಯೋಗ ಸರ್ಕಾರದಿಂದಲೇ ಆಗುತ್ತಿದೆ. ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಉತ್ತಮ ಇಲಾಖೆ ಎಂಬ ಪ್ರಶಂಸೆಗೆ ಪಾತ್ರವಾಗಿತ್ತು. ಆ ಗೌರವವನ್ನು ಮಣ್ಣುಪಾಲು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಸಂಪೂರ್ಣ ಪೊಲೀಸ್ ಇಲಾಖೆಯನ್ನು ದೂಷಿಸುವುದಿಲ್ಲ. ಆದರೆ ಕೆಲ ಪೊಲೀಸ್ ಅಧಿಕಾರಿಗಳು ಕೆಲವರ ನಿರ್ದೇಶನದಂತೆ ನಡೆದುಕೊಳ್ಳುತ್ತಿರುವುದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದರು.
ತಾ.ಹರದನಹಳ್ಳಿ ಗ್ರಾಮದಲ್ಲಿರುವ ಮನೆ ದೇವರು ಶ್ರೀ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.ಕೆ ಲವು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ಅವರ ವಿರೋಧಿಗಳನ್ನು ದಮನ ಮಾಡಲು ಹೊರಟಿದ್ದಾರೆ. ಸಿ.ಟಿ.ರವಿ ಅವರನ್ನು ರಾತ್ರಿ ಯೆಲ್ಲಾ ಸುತ್ತಿಸಬೇಕಿತ್ತಾ, ಅವರು ಜನಪ್ರತಿನಿಧಿ, ಬಂಧಿಸುವುದಿದ್ದರೆ ನೇರವಾಗಿ ಬೆಂಗಳೂರಿನ ಜನಪ್ರತಿ ನಿಧಿ ಕೋರ್ಟಿಗೆ ಕರೆದುಕೊಂಡು ಬರಬಹುದಿತ್ತು. ರಾತ್ರಿಯೆಲ್ಲಾ ಸುತ್ತಿಸಬೇಕಾದ ಅವಶ್ಯಕತೆ ಇತ್ತಾ, ಯಾರು ಡೈರೆಕ್ಷನ್ ಕೊಟ್ಟವರು, ಬಿಜೆಪಿ ಸ್ನೇಹಿತರು ಸರಿಯಾದ ರೀತಿ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಿದ್ರೆ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗ್ತಾರೆ ಎಂದರು.
ಅಣ್ಣಾ ಇಲ್ಲಿ ಲೀಡರ್ಸೇ ಇಲ್ಲ!: ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ಶಾಸಕರ ದೂರು
ಸತೀಶ್ ಜಾರಕಿಹೊಳಿ ಕೋರ್ಟ್ ಮುಂದೆ ಹಾಜರು ಪಡಿಸಿ ಅಂತಾರೆ, ಇನ್ನೊಬ್ಬರು ಇನ್ನೊಂದು ಕಥೆ ಹೇಳ್ತಾರೆ, ಈ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ, ಕಳೆದ ಆರೇಳು ತಿಂಗಳಿನಿಂದ ಹಲವಾರು ಪ್ರಕರಣಗಳು ಈ ರಾಜ್ಯದಲ್ಲಿ ನಡೆದುಕೊಂಡು ಬರುತ್ತಿದೆ. ಕರ್ನಾಟಕದಲ್ಲಿ ಮುಂದಿನ ದಿನಗಳು ಬಹಳ ಕೆಟ್ಟ ರೀತಿಯ ರಾಜಕಾರಣದಲ್ಲಿ ವೈಷಮ್ಮ, ದ್ವೇಷ ಬೆಳೆ ಯಲು ಬೀಜ ಬಿತ್ತನೆ ಮಾಡಿದ್ದಾರೆ. ಮುಂದೆಯೂ ಸಹ ಇದು ಕೆಟ್ಟ ರೀತಿಯಲ್ಲಿ ಮುಂದುವರಿಯುತ್ತೆ ಎಂದರು. ನಮ್ಮ ಪೂರ್ವಿಕರು ರಾಜ್ಯದ ಒಂದು ಒಳ್ಳೆಯ ಉತ್ತಮ ಆದಂತಹ ವ್ಯವಸ್ಥೆ ಬಗ್ಗೆ ದೇಶದಲ್ಲಿ ಒಳ್ಳೆಯಹೆಸರುಮಾಡಿದ್ರು, ಅದೆಲ್ಲವನ್ನೂ ಸರ್ವನಾಶ ಮಾಡಲು ಸರ್ಕಾರ ಹೊರಟಿದೆ ಎಂದು ತಿಳಿಸಿ, ವಿನಯ್ ಕುಲಕರ್ಣಿದು ಏನು ಮಾಡಿದ್ರಿ, ಗುರಪ್ಪ ನಾಯ್ಕ ಮೇಲೆ ಟೀಚರ್‌ಕಂಪ್ಲೆಟ್ ಕೊಟ್ರಲ್ಲಾ ಏನು ಮಾಡಿದ್ರಿ ಎಂದು ಪ್ರಶ್ನಿಸಿದರು.
ಕಲ್ಬುರ್ಗಿಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ, ಅವರ ಕೊಡುಗೆ ಏನಿದೆ, ನಾನು ಅದಕ್ಕೆ ಚಾಲನೆ ಕೊಟ್ಟೆ, ಬಿಜೆಪಿ ಸರ್ಕಾರ 128 ಕೋಟಿ ರು. ಹಣ ಬಿಡುಗಡೆ ಮಾಡಿದ್ರು ಎಂದರು.
ಜಯದೇವ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ಅವರು ನಲವತ್ತು ಕೋಟಿ ಹಣ ಸಂಗ್ರಹ ಮಾಡಿ, ಹೂಡಿಕೆ ಮಾಡಿದ್ದಾರೆ. ಆದರೆ ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳು ವಂತಹ ಕೃತಜ್ಞತೆ ಇಲ್ಲದಂತಹ ಅನಾಗರಿಕ ಸರ್ಕಾರ ವಿದು ಎಂದು ಕಟುವಾಗಿ ಟೀಕಿಸಿದರು. ಉತ್ತರ ಕರ್ನಾಟಕದಲ್ಲಿ ಪ್ರತಿನಿತ್ಯ ಬಾಣಂತಿಯರು, ಮಕ್ಕಳ ಸಾವು, ನೋವು ಆಗ್ತಿದೆ, ಏನು ಕ್ರಮ ತೆಗೆದುಕೊಂಡಿ ದ್ದೀರಿ, ಆಸ್ಪತ್ರೆ ಗಳಲ್ಲಿ ವೈದ್ಯರು, ಸಿಬ್ಬಂದಿಕೊರತೆ ಇದೆ, ಇರುವ ಆಸ್ಪತ್ರೆಗಳನ್ನೇ ನೆಟ್ಟುಗೆ ಇಟ್ಟುಕೊಂಡಿಲ್ಲ. ಈಗ ನಿಮ್ಹಾನ್ಸ್ ಮಾಡ್ತಾರಂತೆ ಎಂದು ಮೂದಲಿಸಿದರು.
ಪಂಚಮಸಾಲಿ ಹೋರಾಟ ಹತ್ತಿಕ್ಕಲು ಸಿದ್ದು ಸರ್ಕಾರ ಹಿಟ್ಲರ್ ಮಾರ್ಗ ಆಯ್ಕೆ ಮಾಡಿಕೊಂಡಿರೋದು ದುರದೃಷ್ಟಕರ: ಎಚ್‌ಡಿಕೆ
ಅಮಿತ್ ಶಾ ಅವರ ಸಂಬಂಧಿಸಿದ ವಿಷಯ ರಾಜ್ಯ ಸಭೆಯಲ್ಲಿ ಪ್ರಾರಂಭವಾಗಿದ್ದು, ಅವರು ಇಲ್ಲಿಯ ಸದಸ್ಯರಾ ಎಂದು ಪ್ರಶ್ನಿಸಿ, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆಗೆ ವಿಶೇಷವಾದ ಅವಕಾಶ ಕೊಡ್ತೀವಿ ಎಂದು ಡಂಗೂರ ಸಾರಿದ್ರು ಎಂದು ತಿಳಿಸಿ, ನಿನ್ನೆಯೂ ಒಂದು ಹೆಣ್ಣುಮಗಳು ಮಗುವಿಗೆ ಜನ್ಮ ಕೊಡುವಾಗ ತೀರಿಕೊಂಡಿದ್ದಾಳೆ. ಪ್ರತಿನಿತ್ಯ ನಡೆಯು ತ್ತಿದೆ, ಇದ್ಯಾವುದರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಚಿಂತೆ ಇಲ್ಲ ಮತ್ತು ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲವೆಂದು ಬೇಸರದಿಂದ ನುಡಿದರು. ಹಾಸನಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಕೊಡುಗೆ ಅದೆಂತಹದ್ದು ಸಿಡಿಬಿಟ್ರಲ್ಲಾ ಅದೇ ತಾನೇ ಹಾಸನ ಜಿಲ್ಲೆಗೆ ಕೊಡುಗೆ, ಅದು ಬಿಟ್ಟು ಹಾಸನ ಜಿಲ್ಲೆಗೆ ಏನು ಕೊಟ್ಟಿದ್ದಾರೆ. ಇವತ್ತು ಹಾಸನ ಜಿಲ್ಲೆ ಅಭಿವೃದ್ಧಿ ಕಂಡಿದ್ದರೆ, ದೇವೇಗೌಡರು, ರೇವಣ್ಣ, ನಾನು ಮುಖ್ಯಮಂತ್ರಿ ಇದ್ದಾಗ ನನ್ನದೇ ಆದಂತಹ ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆ. ಇವರ ಯೋಗ್ಯತೆಗೆ ಹಾಸನ ಪ್ರೈ ಓವರ್‌ರೆಡಿ ಮಾಡಲು ಆಗಲಿಲ್ಲ ಎಂದು ನುಡಿದರು. ಅವರು ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿ, ಪ್ರಕೃತಿಯನ್ನು ಲೂಟಿ ಹೊಡೆದಿರುವುದು ಸಾಕ್ಷಿ ಇದೆ. ನಾವೇನಾದರೂ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ ಸಾಕ್ಷಿ ಗುಡ್ಡೆಗಳನ್ನು ಮಾಡಿದ್ದರೆ ತೋರಿಸಬಹುದಿತ್ತು. ನಾವು ಎಲ್ಲಿಂದತರೋದುಸಾಕ್ಷಿ ಗುಡ್ಡೆನಾ ಎಂದರು.
ಭದ್ರಾವತಿ ಕಾರ್ಖಾನೆ ಸೇರಿದಂತೆ ದೇಶದ ನಾನಾ ಭಾಗದಲ್ಲಿರುವ ಉಕ್ಕು ಕಾರ್ಖಾನೆಗಳನ್ನು ಪುನಶ್ವೇತನ ಮಾಡಲು ಚಾಲನೆ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಡಿಪಿಆರ್ ಕೂಡ ತಯಾರಾಗುತ್ತಿದೆ ಮತ್ತು ದಕ್ಷಿಣ ಭಾರತದಲ್ಲಿರುವ ವಿಎಸ್ಎಲ್, ತಮಿಳುನಾಡಿನ ಸೇಲಂ ಪ್ಲಾಂಟ್ ಎರಡಕ್ಕೂ ಪುನಶ್ಚತನ ಕಲ್ಪಿಸಲು ಎರಡು, ಮೂರು ಸಭೆ ಮಾಡಿದ್ದೇವೆ ಎಂದರು. ತಮಿಳುನಾಡು ರಾಜ್ಯದ ತಿರುಚನಾಪಲ್ಲಿಯಿಂದ ಕೇಂದ್ರ ಸಚಿವರ ಜತೆ ಆಗಮಿಸಿರುವ ಸಿದ್ದರಾದ ಮಸಿ ಸಿವ ಚಿತ್ತಂ, ಶಾಸಕ ಎಚ್.ಡಿ.ರೇವಣ್ಣ, ಶಾಸಕ ಎಚ್ ಪಿ.ಸ್ವರೂಪ್ ಪ್ರಕಾಶ್ ಇದ್ದರು.