Asianet Suvarna News Asianet Suvarna News

'ಜನ ದಂಗೆ ಏಳ್ತಾರೆ' ಬಿಎಸ್‌ವೈಗೆ ರೇವಣ್ಣ ವಾರದ ಡೆಡ್ ಲೈನ್!

ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ವಾಗ್ದಾಳಿ/ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಕಡುತ್ತಿದೆ/ ಹಾಸನ ಜಿಲ್ಲೆಯ ಅಭಿವೃದ್ಧಿ ತಡೆಹಿಡಿದಿದೆ ಎಂದು ಆರೋಪ

JDS Leader HD Revanna Slams CM BS Yediyurappa
Author
Bengaluru, First Published Jul 30, 2020, 10:43 PM IST

ಹಾಸನ(ಜು.30)  ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧವಾಗಿ ಒಂದು ವಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ಆರಂಭಿಸುತ್ತೇವೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ರೈತರ ಹೆಸರಲ್ಲಿ ಹಸಿರು ಶಾಲು ಹಾಕಿಕೊಂಡು ಸಿಎಂ ಭೋಗಸ್ ಮಾಡ್ತಿದ್ದಾರೆ. ಭೂ ಸುಧಾರಣಾ ಕಾಯ್ದೆ  ಕಾರಣಕ್ಕೆ ಜನ ಸಿಎಂ ವಿರುದ್ದ  ದಂಗೆ ಏಳುತ್ತಾರೆ. ಹಾಸನ ಜಿಲ್ಲೆಯ ಜನ್ರ ಹಕ್ಕನ್ನು ಕಿತ್ತುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಕರೋನಾ ಉಪಕರಣ ಸಾಮಗ್ರಿ ಅವ್ಯವಹಾರ ಆರೋಪದ ಬಗ್ಗೆಯೂ ಮಾತನಾಡಿದ ರೇವಣ್ಣ, ಕಲೆಕ್ಷನ್ ಮಾಡಿಕೊಳ್ತಿದ್ದೀವಿ ಅಂತಾ ಎರಡೂ ರಾಷ್ಟ್ರೀಯ ಪಕ್ಷಗಳು ಹೇಳಿಕೊಂಡಂತಾಗಿದೆ ಎಂದು ವ್ಯಂಗ್ಯವಾಡಿದರು.

ದೆಹಲಿ ಭೇಟಿ ಅಸಲಿ ರಹಸ್ಯ ಹೇಳಿದ ಸವದಿ

ಡಿಕೆ,ಶಿವಕುಮಾರ್ ಜೆಡಿಎಸ್ ನ್ನು ನಿರ್ನಾಮ ಮಾಡುತ್ತಾರೆಂದು ಬಿಜೆಪಿ ಮುಖಂಡ ಯೋಗೇಶ್ವರ್ ಹೇಳಿಕದ್ದಕ್ಕೂ ಪ್ರತಿಕ್ರಿಯೆ ನೀಡಿದ ರೇವಣ್ಣ, ಯಾರು ಯಾರನ್ನು ನಿರ್ನಾಮ ಮಾಡುತ್ತಾರೆಂದು ನೋಡೋಣ ಜನ ತೀರ್ಮಾನ ಮಾಡುತ್ತಾರೆ.  ಜೆಡಿಎಸ್ ನ್ನು ನಿರ್ನಾಮ ಮಾಡೋರು ಆ ಯೋಗೇಶ್ವರ್  ಏನು ಮಾಡ್ತಾರೆ ಎಂದು  ಪ್ರಶ್ನೆ ಮಾಡಿದರು.

ಸರ್ಕಾರ ಉಳಿಸಿಕೊಂಡು ಇರುವಷ್ಟು ದಿನ ಮಜಾ ಮಾಡ್ಬೇಕು ಅನ್ನೋದೇ ಬಿಜೆಪಿಯವರ ಉದ್ದೇಶ. ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಪದವಿ ಕಾಲೇಜನ್ನ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಈ ಕಾಲೇಜಿಗೆ ಶಿಕ್ಷಕರನ್ನೇ ನೇಮಿಸಿಲ್ಲ.  ಬೇಲೂರಿನ ರಣಘಟ್ಟ ಯೋಜನೆಗೆ ಹಣ ನೀಡದೇ ತಡೆ ಹಿಡಿದಿದ್ದಾರೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನೂ ಬೇಕಂತಲೇ ತಡೆ ಹಿಡಿದಿದ್ದಾರೆ ಹಾಸನ ಜಿಲ್ಲೆಯ ಎಲ್ಲಾ ಕಾಮಗಾರಿಗಳನ್ನ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.

ಸಿಎಂಗೆ ಒಂದು ವಾರ ಗಡುವು ನೀಡುತ್ತೇವೆ. ನಮ್ಮ ಹಾಸನ ಜಿಲ್ಲೆಯ ಕೆಲಸ ಮಾಡದಿದ್ದರೇ ಸರ್ಕಾರದ ವಿರುದ್ಧ ಜೆಡಿಎಸ್ ನಿಂದ ಹೋರಾಟ ನಡೆಸುತ್ತೇವೆ. ಹಾಸನ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರಿಂದ ಹೋರಾಟ ಮಾಡಿಸುತ್ತೇನೆ ಎಂದು ಗುಡುಗಿದರು. 

Follow Us:
Download App:
  • android
  • ios