ಬೆಂಗಳೂರು(ಜು. 30)   ತಮ್ಮ ನಿವಾಸದಲ್ಲಿ ಮಾತನಾಡಿದ  ಡಿಸಿಎಂ  ಲಕ್ಷ್ಮಣ ಸವದಿ, ಸಿಎಂ ಭೇಟಿ ಬಗ್ಗೆ ವಿಶೇಷತೆಯಿಲ್ಲ. ನಿನ್ನೆ ನೀವೇ ಕೇಳಿದ್ರಿ...ಸಿಎಂ ಭೇಟಿ ಆಗ್ತಿರಾ ಅಂತ...? ನಾನು ಹೋಗಿ ಭೇಟಿ ಮಾಡ್ತೇನೆ ಅಂದಿದ್ದೆ. ಇವತ್ತು ಹೋಗಿದ್ದೆ ಎಂದು ಮಾಧ್ಯಮದವರಿಗೆ ಪ್ರಶ್ನೋತ್ತರ ಹಾಕಿದ್ದಾರೆ.

ದಿನಾ ಭೇಟಿ ಆಗ್ತಾನೆ ಇರುತ್ತೇವೆ, ಮುಂದೇನು ಆಗುತ್ತಲೆ ಇರುತ್ತೇವೆ. ಊಹಾಪೋಹ ಎಲ್ಲ ಇದೆಲ್ಲ ನೀವೇ ಸೇರಿಕೊಂಡು ಮಾಡಿರೋದು. ಅವರ ( ಸಿಎಂ) ಅನುಭವಕ್ಕೆ ಎಲ್ಲವೂ ತಿಳಿದಿದೆ. ಇದೆಲ್ಲ ಸಹಜ ,ನಡೆಯುತ್ತಿರೊದು , ಆಗ್ತಾ ಇರೊದು ಸಹಜ. ದೊಡ್ಡ ಪ್ರಮಾಣದಲ್ಲಿ ಇದನ್ನು ನೀವು ಬಿಂಬಿಸಿದ್ರಿ. ಇದಕ್ಕೆ ಧನ್ಯವಾದಗಳು ದೊಡ್ಡ ಧನ್ಯವಾದ ಎಂದು ಮಾಧ್ಯಮಗಳನ್ನೇ ವ್ಯಂಗ್ಯವಾಡಿದರು.

ಈವರೆಗೂ ಮಂತ್ರಿ ಮಂಡಲದ ಚರ್ಚೆ ಈವರೆಗೂ ಆಗಿಲ್ಲ. ಸಿಎಂ ಜತೆ ವರಿಷ್ಠರು ಮಾತನಾಡುತ್ತಾರೆ. ನೀವ್ ರಾಂಗ್ ಅಡ್ರೆಸ್ ಗೆ ಪತ್ರ ಬರೆಯುತ್ತಾ ಇದ್ದರೆ ಉತ್ತರ ಹೇಗೆ ಸಿಗಲಿದೆ? ಸಂಪುಟ ಪುನಾರಚನೆ ,ಸಂಪುಟ ವಿಸ್ತರಣೆ ಸಮಯ ಬಂದಾಗ ಮಾತು ನಡೆಯಲಿದೆ. ಕಾಲ ಬಂದಾಗ ಎಲ್ಲ ಆಗಲಿದೆ ಎಂದರು.

ನಾವೆಲ್ಲರೂ ಸಿಎಂ ಅಧೀನದಲ್ಲಿ ಇರುವವರು. ದೆಹಲಿಗೆ ಹೋಗುವುದಕ್ಕೆ ವಿಶೇಷ ಅರ್ಥ ಯಾಕೆ ಎನ್ನುವುದೇ ಗೊತ್ತಾಗುತ್ತಿಲ್ಲ.  ದೆಹಲಿಗೆ ಹೋಗಿದ್ದು ಎರಡೂ ಇಲಾಖೆಯ ಕೆಲಸ ಸರಿ ಅಯ್ತಾ ಅಂತಾ ಸಿಎಂ ಕೇಳಿದರು. ಎರಡೂ ಇಲಾಖೆಗಳದ್ದು ಸರಿ‌ ಆಯ್ತು   ಅಂತಾ ಹೇಳಿದೆ ಎಂದು ಜಾರಿಕೊಂಡರು.

ರಾಜಕೀಯ ಸುದ್ದಿ ಅವರಿಗೆ ಗೊತ್ತಿದೆ. ನೀವೆಲ್ಲರೂ ಸೇರಿ ಮಾಡಿರುವ ಸುದ್ದಿ ಅವರಿಗೆ ಗೊತ್ತಿಲ್ಲವೇ? ಇದೇನೂ ಸಿಎಂಗೆ ಹೊಸದಾ?  ಅವರಿಗೆ ವಯಸ್ಸು 78. ಇಂತಹ ವಿಚಾರಗಳನ್ನು ಎಷ್ಟು ನೋಡಿಲ್ಲ. ಅವರ ಅನುಭವದ ಮುಂದೆ ಇದೆಲ್ಲವೂ ಬಹಳ ಕಡಿಮೆ. ಇಂತಹದ್ದೆಲ್ಲವನ್ನೂ ಅವರ ಜೀವನದಲ್ಲಿ ನೋಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ನಿರ್ಧಾರ ಬದಲಿಸಿದ ಸಿಎಂ, ಪುನಾರಚನೆ ಬದಲು ವಿಸ್ತರಣೆ

ಸಿಎಂ ಇದನ್ನೆಲ್ಲ ಯಾಕೆ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇಲ್ಲಿಯವರೆಗೆ ಮಾತುಕತೆ ಆಗಿಲ್ಲ. ದೆಹಲಿಯಲ್ಲೂ ಚರ್ಚೆ ಆಗಿಲ್ಲ, ಬೆಂಗಳೂರಿನಲ್ಲಿ ಕೂಡಾ ಆಗಿಲ್ಲ. ಸಿಎಂ ವರಿಷ್ಠರ ಜೊತೆ ಪೋನ್ ಮೂಲಕ ಚರ್ಚೆ ಮಾಡಿಕೊಳ್ಳುತ್ತಿರುತ್ತಾರೆ.. ಅದು ನಮಗೆ ಹೇಗೆ ಗೊತ್ತಾಗುತ್ತದೆ? ಎಂದು ಪ್ರಶ್ನೆ ಮಾಡಿದರು.

ಸಿಎಂ ಜೊತೆಗೆ ಚರ್ಚಿಸುವಾಗ ಮಾಹಿತಿ ಸಿಕ್ಕಿದರೆ ನಿಮಗೆ ಹೇಳುತ್ತೇನೆ. ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವ ಸಂದರ್ಭ ಇನ್ನೂ ಹತ್ತಿರ ಬಂದಿಲ್ಲ. ಆ ಸಂದರ್ಭ ಬಂದಾಗ ಸಿಎಂ ಎಲ್ಲರನ್ನೂ ಕರೆಸಿ ಮಾತಾಡುತ್ತಾರೆ. ಯಾರ್ಯಾರು ಜವಾಬ್ದಾರಿ ತೆಗೆದುಕೊಳ್ಳಬೇಕು ಅಂತಾ ಬಂದಾಗ ಕರೆದು ಮಾತಾಡ್ತಾರೆ. ಈಗಲೇ ಅಮವಾಸ್ಯೆ ಹುಣ್ಣಿಮೆ ಮಧ್ಯೆ ಏನು ಇರುತ್ತದೆ ಎಂದು ಕೇಳಿದರೆ ನಾನು ಏನು ಹೇಳಲಿ..? ಎಂದು ಮತ್ತೆ ದೂರಿದರು.

ದೆಹಲಿಯಲ್ಲಿ ಶಶಿಕಲಾ ಜೊಲ್ಲೆ  ಅವರನ್ನು ಇಲಾಖೆ ಕೆಲಸದ ಸಂಬಂಧ ಭೇಟಿ ಮಾಡಿದ್ದೆ. ನನ್ನನ್ನು ಮಾಧ್ಯಮಗಳೇ  ಸಿಎಂ ಮಾಡಿಬಿಟ್ಟಿವೆ. ಎರಡು ದಿನದ ಭೇಟಿಯಲ್ಲೇ ಸಿಎಂ ಎಂಬ ರೀತಿಯಲ್ಲಿ ಬಿಂಬಿಸಿದ್ದಾರೆ. ಇನ್ನೊಂದು  ಬಾರಿ ದೆಹಲಿಗೆ ಹೋದರೆ ಪ್ರಧಾನಿ ಮಾಡ್ತಾರೆ ಎಂದು ವ್ಯಂಗ್ಯಭರಿತ ಮಾತಿನಲ್ಲಿಯೆ ಮುಗಿಸಿದರು.