Asianet Suvarna News Asianet Suvarna News

ರಾಜ್ಯದಲ್ಲಿ ನಕಲಿ ಕಾಂಗ್ರೆಸ್‌ ಪಾದಯಾತ್ರೆ: ಎಚ್‌ಡಿಕೆ ವ್ಯಂಗ್ಯ

ದೇಶಾಭಿಮಾನ ಹೆಸರಿನಲ್ಲಿ ಜನರನ್ನು ಮೆಚ್ಚಿಸಲು ನಕಲಿ ಕಾಂಗ್ರೆಸ್ಸಿಗರು ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. 
 

jds leader hd kumaraswamy talks about congress padayatre gvd
Author
Bangalore, First Published Aug 15, 2022, 3:45 AM IST

ಮಳವಳ್ಳಿ (ಆ.15): ದೇಶಾಭಿಮಾನ ಹೆಸರಿನಲ್ಲಿ ಜನರನ್ನು ಮೆಚ್ಚಿಸಲು ನಕಲಿ ಕಾಂಗ್ರೆಸ್ಸಿಗರು ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ತಾಲೂಕಿನ ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅಂದು ಅಸಲಿ ಕಾಂಗ್ರೆಸ್ಸಿಗರ ಹೋರಾಟ, ಶ್ರಮ ಅಪಾರವಾಗಿತ್ತು. ಆದರೆ, ಈ ದಿನ ನಕಲಿ ಕಾಂಗ್ರೆಸ್ಸಿಗರು ದೇಶಾಭಿಮಾನಿಗಳು ಎಂದು ಪಾದಯಾತ್ರೆ ಹೊರಟಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಇವತ್ತು ಇರೋದು ಅಸಲಿ ಕಾಂಗ್ರೆಸ್ಸಲ್ಲ. ನಕಲಿ ಕಾಂಗ್ರೆಸ್‌. ಇವರಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ಇವರು ಜನಕ್ಕೆ ಕೊಟ್ಟಿರೋದಾದರೂ ಏನು ಎಂದು ಪ್ರಶ್ನಿಸಿದ ಅವರು, ಇವತ್ತು ಅವರವರೇ ಆರೋಪ ಮಾಡಿಕೊಂಡು ಹಳ್ಳಿಗಳ ಮೇಲೆ ಬಾವುಟ ಹಿಡಿದು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು. ನಾಳೆಯ ಸ್ವಾತಂತ್ರ್ಯ ದಿನಾಚರಣೆ ತಿರಂಗಾ ಯಾತ್ರೆ ಬಗ್ಗೆ ನಮದು ಯಾವುದೇ ತಕರಾರು ಇಲ್ಲ. ಆದರೆ, ಎರಡು ರಾಷ್ಟ್ರೀಯ ಪಕ್ಷಗಳು ಜನರನ್ನು ಮೆಚ್ಚಿಸಲು ಬಾವುಟ ಹಿಡಿದು ರಾಷ್ಟ್ರಧ್ವಜಕ್ಕೆ ಗೌರವ ಕೊಡಲು ಹೋಗಿ ಹಲವು ತಪ್ಪುಗಳು ಸಂಭವಿಸಿ ಅಗೌರವ ಸಲ್ಲಿಸುವಂತಾಗಬಾರದು ಎಂದರು.

ರಾಮನಗರದಲ್ಲಿ ಜೆಡಿಎಸ್‌ಗೆ ಶಾಕ್ ಕೊಟ್ಟ ಅಶ್ವತ್ಥ್ ನಾರಾಯಣ, ಮಾಜಿ MLC ಬಿಜೆಪಿ ಸೇರ್ಪಡೆ

75 ವರ್ಷ ಕಳೆದಿದ್ದೇವೆ. ವರ್ಷಕ್ಕೆ 17 ಲಕ್ಷ ಬಡ ಕುಟುಂಬದ ಮಕ್ಕಳು ಸಾಯುತ್ತಿದ್ದಾರೆ. ಬರೀ ಘೋಷಣೆಯ ಅಮೃತ ಮಹೋತ್ಸವ ಆಗಬಾರದು. ಕೇವಲ ಬಾವುಟ ಹಿಡಿದುಕೊಂಡು ಹೋದರೇ ಸಾಲದು. ಬಡತನ, ಭ್ರಷ್ಟಾಚಾರ ಹೋಗಲಾಡಿಸಲು ಕ್ರಮ ಏನಿದೆ ಹೇಳಲಿ. ಅದಕ್ಕೆ ನಿಮ್ಮ ಕಾರ್ಯಕ್ರಮಗಳು ಏನು ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿದರು.

ಸಿಎಂ ರಿಂದ ಸಿರ್ಟಿಫಿಕೇಟ್‌ ಬೇಕಿಲ್ಲ: ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಅವಧಿಯಲ್ಲಿ ಏನು ಮಾಡಿಲ್ಲ ಎನ್ನುವ ಮುಖ್ಯಮಂತ್ರಿ ಬಸಬವರಾಜ ಬೊಮ್ಮಾಯಿ ಸರ್ಟಿಫಿಕೇಟ್‌ ಬೇಕಿಲ್ಲ ಎಂದು ತಿರುಗೇಟು ನೀಡಿದ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಟಾಂಗ್‌ ನೀಡಿದರು. ಬರೀ ಝಂಡಾ ಹಾರಿಸಿದರೇ ಜನರ ಬದುಕು ಅಸನಾಗಲ್ಲ. ಗ್ಯಾಸ್‌ ಬೆಲೆ ಏರಿಕೆಯಾಗಿದೆ, ಜನರು ಸೀಮೆ ಎಣ್ಣೆ ಉರಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಸೌದೆಗಾಗಿ ಕಾಡಿಗೆ ಹೋದರೇ ಅರಣ್ಯ ಇಲಾಖೆಯವರು ಕೇಸು ಹಾಕುತ್ತಾರೆ. ಮೊದಲು ಜನರು ನೆಮ್ಮದಿಯಿಂದ ಬದುಕುವಂತೆ ಸೌಲಭ್ಯ ನೀಡಬೇಕೆಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಯಾರನ್ನೋ ಮೆಚ್ಚಿಸಲು ಎಚ್‌ಡಿಕೆ ಕಣ್ಣೀರು ಹಾಕೋ ನಾಟಕವಾಡಿಲ್ಲ: ಪುಟ್ಟರಾಜು

ರೈತಪರ ಸರ್ಕಾರ ತರುವ ಚಿಂತನೆ: ನಾಡಿನಲ್ಲಿ ಅಕಾಲಿಕ ಮಳೆಗೆ ಶೇ.70ರಷ್ಟು ಬೆಳೆ ನಾಶವಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ರೈತಪರ ಸರ್ಕಾರ ತರಲು ಚಿಂತಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದ ಅಗತ್ಯವಿದೆ. ಈ ಭಾಗದ ಜನ ಮಾಜಿ ಪ್ರಧಾನಿ ದೇವೇಗೌಡರ ಕಾಲದಿಂದಲೂ ಅಭಿಮಾನ ತೋರಿದ್ದೀರಿ. ನಾನು ಸಿಎಂ ಆಗಬೇಕೆಂದು ಕಳೆದ ಚುನಾವಣೆಯಲ್ಲಿ ನೀವು ಹೊತ್ತಿದ್ದ, ಹರಕೆ ತೀರಿಸಿ ನಿಮ್ಮ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸಿದ್ದೇನೆ. ಸಿದ್ದೇಶ್ವರ ಸ್ವಾಮಿ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ಕೆಲಸ ಪ್ರಾರಂಭಿಸಲಾಗಿದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

Follow Us:
Download App:
  • android
  • ios