Mandya: ಜೆಡಿಎಸ್‌ನಿಂದ ಒಕ್ಕಲಿಗರ ಉಳಿವು: ಶಾಸಕ ಡಿ.ಸಿ.ತಮ್ಮಣ್ಣ
ಒಕ್ಕಲಿಗರು ಉಳಿಯಬೇಕಾದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ತಾಲೂಕಿನ ಚಾಮನಹಳ್ಳಿ ಜಿಪಂ ಕ್ಷೇತ್ರದ ಚಾಮನಹಳ್ಳಿ, ಚಾಪುರದೊಡ್ಡಿ, ದೇಶಹಳ್ಳಿ, ಸೊಳ್ಳೆಪುರ, ಗೆಜ್ಜಲಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದರು.
ಮದ್ದೂರು (ನ.23): ಒಕ್ಕಲಿಗರು ಉಳಿಯಬೇಕಾದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ತಾಲೂಕಿನ ಚಾಮನಹಳ್ಳಿ ಜಿಪಂ ಕ್ಷೇತ್ರದ ಚಾಮನಹಳ್ಳಿ, ಚಾಪುರದೊಡ್ಡಿ, ದೇಶಹಳ್ಳಿ, ಸೊಳ್ಳೆಪುರ, ಗೆಜ್ಜಲಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದರು. ಕೆಂಪೇಗೌಡರ ದೂರದೃಷ್ಟಿ, ಜನಾನುರಾಗಿ ಆಡಳಿತ, ಪ್ರಜೆಗಳ ಹಿತರಕ್ಷಣೆ ಹಾಗೂ ಉದ್ದೇಶಗಳನ್ನು ಇಟ್ಟುಕೊಂಡು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ನಾಡಪ್ರಭು ಕೆಂಪೇಗೌಡರು ಕೇವಲ ಒಕ್ಕಲಿಗ ಜನಾಂಗಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಜನಾಂಗಗಳ ನಾಯಕರಾಗಿದ್ದರು. ಆದರೆ, ಈಗ ಕೆಂಪೇಗೌಡರ ಹೆಸರೇಳಿಕೊಂಡು ಕಾಂಗ್ರೆಸ್, ಬಿಜೆಪಿಯ ಕೆಲ ಒಕ್ಕಲಿಗ ನಾಯಕರು ಕಿರೀಟ ಹಾಕಿಕೊಂಡು ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಚುನಾವಣಾ ಪ್ರಚಾರದಲ್ಲಿ ಜನರೆದುರು ಮೊಸಳೆ ಕಣ್ಣಿರು ಸುರಿಸುವ ಮೂಲಕ ಉಚಿತ ಪಡಿತರ ನೀಡಿ ಹಳ್ಳಿಗಾಡಿನ ಜನರನ್ನು ಭಿಕ್ಷುಕರನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ಹಳ್ಳಿಗಳಲ್ಲಿ ಇದ್ದಂತಹ ಸಣ್ಣ ಸಮುದಾಯಗಳು ಇಡೀ ದೇಶಕ್ಕೆ ಅನ್ನ ಹಾಕುತ್ತಿತ್ತು.
Mandya: ಅಭ್ಯರ್ಥಿ ಆಯ್ಕೆ ಹೈಕಮಾಂಡ್ ನಿರ್ಧಾರವಲ್ಲ: ಚಲುವರಾಯಸ್ವಾಮಿ
ಆದರೆ, ಇಂದಿನ ದಿನಗಳಲ್ಲಿ ರೈತರು ಪಡಿತರ ಅಂಗಡಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಮ್ಮ ರೈತರಿಗೆ ಬರಬಾರದು ಎನ್ನುವುದು ನನ್ನ ಹಾಗೂ ಕುಮಾರಸ್ವಾಮಿ ಅವರ ಆಶಯ ಎಂದರು. ಈಚೆಗೆ ಮದ್ದೂರು ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಯುವ ರಾಜಕಾರಣಿಯೊಬ್ಬರು ಯುವ ಸಬಲೀಕರಣ ಹೆಸರಿನಲ್ಲಿ ಅನ್ಯ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿ ಯುವಕರಿಗೆ ಅಭಿಮಾನಿ ಸಂಘ ಕಟ್ಟುವಂತೆ ಹಣ ಹಂಚಿ ಅವರನ್ನು ಅಡ್ಡದಾರಿಗೆ ತಂದು ಪರಸ್ಪರ ದ್ವೇಷ ಮತ್ತು ಘರ್ಷಣೆಗೆ ಎಡೆಮಾಡಿ ಕೊಡುತ್ತಿದ್ದಾರೆ. ಇದಕ್ಕೆ ನನ್ನ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಭಾನುವಾರ ರಾತ್ರಿ ನಡೆದ ಯುವಕನ ಕೊಲೆಯೇ ಇದಕ್ಕೆ ನಿದರ್ಶನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮದ್ದೂರು ಕ್ಷೇತ್ರಕ್ಕೆ ನಾನು ಬಂದು 23 ವರ್ಷವಾಗಿದೆ. ಅಭಿವೃದ್ಧಿ ಬಿಟ್ಟು ಬೇರೆ ಯಾವುದೇ ಪಾಪದ ಕೆಲಸ ಮಾಡಿಲ್ಲ. ನಿಮ್ಮ ಜೊತೆಯೇ ಇದ್ದು, ದುಡಿದಿದ್ದೇನೆ. ನನ್ನ ವ್ಯಾಪ್ತಿ ಮೀರಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಜನರು ಇದನ್ನು ಮನಗಂಡು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದರೆ ಮತ್ತಷ್ಟುಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಬೊಮ್ಮಾಯಿ ವಿರುದ್ಧವೇ ದೂರು ಕೊಟ್ಟಿದ್ದೇವೆ, ಯಾರ ವಿರುದ್ಧ ಸಿಎಂ ತನಿಖೆ ಮಾಡಿಸ್ತಾರೆ?: ಸಿದ್ದು
ಇದೇ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೆಗೌಡ, ಗ್ರಾಪಂ ಅಧ್ಯಕ್ಷೆ ಸೌಮ್ಯ ಪ್ರಕಾಶ್, ಮಾಜಿ ಅಧ್ಯಕ್ಷೆ ಗೀತಾ, ಚಾಮನಹಳ್ಳಿ ಕೃಷ್ಣ, ಉಪಾಧ್ಯಕ್ಷ ವೆಂಕಟೇಶ್, ಪುರಸಭಾ ಸದಸ್ಯ ಎಂ.ಐ.ಪ್ರವೀಣ್, ಮುಖಂಡರಾದ ಡಿ.ಪಿ.ಸ್ವಾಮಿ, ದೇಶಹಳ್ಳಿ ಶಂಕರ್, ವಿರೂಪಾಕ್ಷೇಗೌಡ, ರಾಕೇಶ್, ಚಾಮನಹಳ್ಳಿ ಮಂಜು, ಸಂದೀಪ್ ಸೇರಿದಂತೆ ಇತರರು ಇದ್ದರು.