Asianet Suvarna News Asianet Suvarna News

ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು, ಕಾಂಗ್ರೆಸ್‌ ಮೂಲೆಗುಂಪು: ಸಿವಿಸಿ

ಮೂರು ರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿಯಾಗಿದೆ. ದೇಶದ ಜನತೆ ಕಾಂಗ್ರೆಸ್‌ನ್ನು ಮೂಲೆಗುಂಪಾಗಿಸಿದ್ದಾರೆ. ಅವರ ಗ್ಯಾರಂಟಿಗಳಿಗೆ ಮರುಳಾಗದೇ ದೇಶದ ಹಿತಕ್ಕೆ, ಅಭಿವೃದ್ಧಿಗೆ ಮೋದಿ ಗ್ಯಾರಂಟಿ ಎಂಬುದನ್ನು ದೇಶದ ಜನತೆ ಒಪ್ಪಿದ್ದಾರೆ ಎಂದ ಸಿ.ವಿ. ಚಂದ್ರಶೇಖರ 

JDS Leader CV Chandrasekhar React to BJP Won in Assembly Elections grg
Author
First Published Dec 4, 2023, 1:30 AM IST

ಕೊಪ್ಪಳ(ಡಿ.04): ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ನ್ನು ಮೂಲೆಗುಂಪಾಗಿಸಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಗ್ಯಾರಂಟಿ ಹೊರತು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲ ಎಂಬುದು ಸಾಬೀತಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದ್ದಾರೆ.

ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೂರು ರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿಯಾಗಿದೆ. ದೇಶದ ಜನತೆ ಕಾಂಗ್ರೆಸ್‌ನ್ನು ಮೂಲೆಗುಂಪಾಗಿಸಿದ್ದಾರೆ. ಅವರ ಗ್ಯಾರಂಟಿಗಳಿಗೆ ಮರುಳಾಗದೇ ದೇಶದ ಹಿತಕ್ಕೆ, ಅಭಿವೃದ್ಧಿಗೆ ಮೋದಿ ಗ್ಯಾರಂಟಿ ಎಂಬುದನ್ನು ದೇಶದ ಜನತೆ ಒಪ್ಪಿದ್ದಾರೆ ಎಂದರು.

ನಾನು ಬಹಿರಂಗವಾಗಿಯೇ ಹೇಳುವೆ. ನಾವೇನು ಹರಿಶ್ಚಂದ್ರರಲ್ಲ: ಸಂಸದ ಕರಡಿ ಸಂಗಣ್ಣ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಜೊತೆಗೂಡಿ ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಮತ್ತೊಮ್ಮೆ ಮೋದಿಯನ್ನು ಪ್ರಧಾನಮಂತ್ರಿ ಮಾಡಲು ಶ್ರಮಿಸಲಿದ್ದೇವೆ ಎಂದು ಹೇಳಿದರು.

Follow Us:
Download App:
  • android
  • ios