Asianet Suvarna News Asianet Suvarna News

Alliance Politics: ಬಿಜೆಪಿ ಜತೆ ಮೈತ್ರಿ ಚರ್ಚೆ ಮಧ್ಯೆ ಕಾಂಗ್ರೆಸ್‌ ಪರ ಜೆಡಿಎಸ್‌ ನಾಯಕನ ಪ್ರಚಾರ

*  ನರಗುಂದ, ನವಲಗುಂದದಲ್ಲಿ ಮಾಜಿ ಶಾಸಕರಿಂದ ಅಬ್ಬರದ ಪ್ರಚಾರ
*  ಬಿಜೆಪಿಯತ್ತ ಜೆಡಿಎಸ್‌ ಒಲವು 
*  ಕಾಂಗ್ರೆಸ್‌ನತ್ತ ತಿರುಗಿದ ಕೋನರಡ್ಡಿ ಚಿತ್ತ 
 

JDS Leader Campaign for Pro Congress in Amid Alliance with BJP in Dharwad grg
Author
Bengaluru, First Published Dec 3, 2021, 11:38 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಡಿ.03):  ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಹಿನ್ನೆಲೆ ಬಿಜೆಪಿ- ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಬಿರುಸಿನ ಚರ್ಚೆಗಳು ನಡೆದಿರುವ ಮಧ್ಯೆಯೇ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ(NH Konareddy) ಕಾಂಗ್ರೆಸ್‌ ಪರ ಪ್ರಚಾರಕ್ಕಿಳಿದಿದ್ದಾರೆ.

ಅತ್ತ ಮೈತ್ರಿ(Alliance) ವಿಷಯವಾಗಿ ಇತ್ತೀಚೆಗೆ ಪ್ರಧಾನಿ ಮೋದಿ(Narendra Modi) ಹಾಗೂ ಮಾಜಿ ಪ್ರಧಾನಿ ದೇವೇಗೌಡರು(HD Devegowda) ಪರಸ್ಪರ ಚರ್ಚೆ ನಡೆಸಿದ್ದರು. ಇತ್ತ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ(BS Yediyurappa) ಹಾಗೂ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ನಡುವೆಯೂ ಮಾತುಕತೆಯ ಪ್ರಸ್ತಾವನೆ ಇದೆ. ಬಹುತೇಕ ಮೈತ್ರಿ ವಿಷಯ ಅಂತಿಮ ರೂಪ ಪಡೆದಿದೆ. ಇನ್ನೆರಡು ದಿನಗಳಲ್ಲಿ ಮೈತ್ರಿ ಆಗಿರುವ ಸುದ್ದಿ ಹೊರಬರುವ ಸಾಧ್ಯತೆಯೂ ಇದೆ. ಆದರೆ, ಅವಿಭಜಿತ ಧಾರವಾಡ(Dharwad) ಜಿಲ್ಲೆಯಲ್ಲಿ ಪರಿಷತ್‌ ಚುನಾವಣೆಯಲ್ಲಿ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಕಾಂಗ್ರೆಸ್‌(Congress) ಅಭ್ಯರ್ಥಿ ಸಲೀಂ ಅಹ್ಮದ(Saleem Ahmed) ಪರವಾಗಿ ಪ್ರಚಾರವನ್ನೂ ಶುರು ಮಾಡಿದ್ದಾರೆ.

Karnataka Politics: ಸಿಎಂ ಬದಲಾವಣೆ ಬಿಜೆಪಿ ಜನ್ಮ ನಕ್ಷತ್ರದಲ್ಲಿದೆ: ಬಿ.ಕೆ.ಹರಿಪ್ರಸಾದ್‌

ಕಳೆದ ಒಂದು ವಾರದಿಂದ ಸಣ್ಣದಾಗಿ ಅಲ್ಲಲ್ಲಿ ಪ್ರಚಾರ(Campaign) ಮಾಡುತ್ತಿದ್ದ ಕೋನರಡ್ಡಿ ಇದೀಗ ಬಹಿರಂಗವಾಗಿ ಸಲೀಂ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ತಾವೇ ಅಭ್ಯರ್ಥಿಯೆಂಬಂತೆ ಬೆಳಗ್ಗೆಯಿಂದ ರಾತ್ರಿಯವರೆಗೂ ನವಲಗುಂದ, ನರಗುಂದ ಕ್ಷೇತ್ರಗಳಲ್ಲಿ ಸಂಚರಿಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ನವಲಗುಂದ ಕ್ಷೇತ್ರದ ಪ್ರತಿ ಹಳ್ಳಿಹಳ್ಳಿಗೂ ಕಾಂಗ್ರೆಸ್‌ ಮುಖಂಡರಾದ ವಿನೋದ ಅಸೂಟಿ ಸೇರಿದಂತೆ ಮತ್ತಿತರರೊಂದಿಗೆ ಸಂಚರಿಸುತ್ತಾ ಕೋನರಡ್ಡಿ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ಸೇರ್ತಾರಾ?:

ಜೆಡಿಎಸ್‌ಗೆ(JDS) ಇಲ್ಲಿ ಭವಿಷ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಸೇರಲಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಜತೆಗೂ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎಂಬ ಮಾತು ಈ ಹಿಂದೆ ಹಬ್ಬಿತ್ತು. ಅವರು ಈ ವಿಷಯ ಅಲ್ಲಗಳೆಯದಿರಲಿಲ್ಲ. ಜತೆಗೆ ಒಪ್ಪಿಕೊಂಡಿರಲೂ ಇಲ್ಲ. ಹೀಗಾಗಿ ಇದು ಭಾರೀ ಚರ್ಚೆಗೆ ಗ್ರಾಸವನ್ನುಂಟು ಮಾಡಿತ್ತು.

ಇದೀಗ ಅತ್ತ ಬಿಜೆಪಿಯತ್ತ(BJP) ರಾಜ್ಯ ಘಟಕ ಒಲವು ತೋರಿಸುತ್ತಿದ್ದರೆ, ಇತ್ತ ಅದಕ್ಕೆ ವಿರುದ್ಧವಾಗಿ ಬಹಿರಂಗವಾಗಿ ಕಾಂಗ್ರೆಸ್‌ಗೆ ಕೋನರಡ್ಡಿ ಬೆಂಬಲಿಸಿದ್ದಾರೆ. ಇದು ಕೋನರಡ್ಡಿ ಚಿತ್ತ ಕಾಂಗ್ರೆಸ್‌ನತ್ತ ತಿರುಗಿದೆ ಎಂಬ ಸುದ್ದಿಗೆ ಪುಷ್ಟಿನೀಡಿದಂತಾಗಿದೆ. ಇದು ಜೆಡಿಎಸ್‌ ಕಾರ್ಯಕರ್ತರಲ್ಲೇ ಗೊಂದಲಕ್ಕೆ ಕಾರಣವಾಗಿದೆ.

ಜಾತ್ಯಾತೀತ ನಿಲುವು ನನ್ನದು. ಹೀಗಾಗಿ ಕಾಂಗ್ರೆಸ್‌ನ್ನು ಬೆಂಬಲಿಸಿದ್ದೇನೆ. ಇನ್ನೂ ರಾಜ್ಯ ಘಟಕ ಮೈತ್ರಿ ಮಾಡಿಕೊಂಡಿಲ್ಲ. ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ನಾನು ಪ್ರಚಾರ ಮಾಡುತ್ತಿದ್ದೇನೆ ಅಷ್ಟೇ ಅಂತ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ. 

Karnataka Politics: ನೋ ಡೌಟ್‌ ಜೆಡಿಎಸ್‌ ಬಿಜೆಪಿಯ ಬಿ-ಟೀಮೇ: ಸಿದ್ದರಾಮಯ್ಯ

ಬಿಎಸ್‌ವೈ- ಎಚ್‌ಡಿಕೆ ಜತೆ ಚರ್ಚಿಸಿ ಹೊಸ ನಿರ್ಧಾರ

ವಿಧಾನಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌- ಬಿಜೆಪಿ(JDS - BJP) ಮಧ್ಯೆ ಮೈತ್ರಿ ವಿಷಯವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸ್ಪಷ್ಟಪಡಿಸಿದರು. 

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಚರ್ಚೆ ನಡೆಸಿದ್ದಾರೆ. ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದರಲ್ಲಿ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳುವುದು ಸೇರಿದೆ. ಈ ಬಗ್ಗೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಬಿಜೆಪಿಗೆ ಬೆಂಬಲ ಜೆಡಿಎಸ್‌ಗೆ ಬಿಟ್ಟದ್ದು: ಡಿಕೆಶಿ

'ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಆಯಾ ಪಕ್ಷಗಳ ತತ್ವ, ಸಿದ್ಧಾಂತದ ಪ್ರಕಾರ ಅವರು ಯಾರಿಗೆ ಬೆಂಬಲ ನೀಡಬೇಕು ಎಂಬುದು ಅವರಿಗೆ ಬಿಟ್ಟವಿಚಾರ. ಅವರು ಏನಾದರೂ ಮಾಡಿಕೊಳ್ಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಹೇಳಿದ್ದಾರೆ.
 

Follow Us:
Download App:
  • android
  • ios