Karnataka Politics: ಪಕ್ಷ ಬಲವರ್ಧನೆಗೆ ಜೆಡಿಎಸ್ ಭರ್ಜರಿ ಪ್ಲಾನ್!
* ಜನಾತಾ ಜಲಧಾರೆ ಯೋಜನೆ ಮೂಲಕ ಜನಜಾಗೃತಿ
* ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲವೆಂದ ಮಾನ್ವಿ ಶಾಸಕ
* ಬಳ್ಳಾರಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಮೀನಳ್ಳಿ ತಾಯಣ್ಣ ಅಧಿಕಾರ ಸ್ವೀಕಾರ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಮಾ.31): ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಬಲವರ್ಧನೆಗೆ ಪಣ ತೊಟ್ಟಿರೋ ಜೆಡಿಎಸ್ (JDS) ಪಕ್ಷ ಇದೀಗ ಸದಸ್ಯತ್ವ ಅಭಿಯಾನದ ಜೊತೆಗೆ ಜಿಲ್ಲಾಧ್ಯಕ್ಷರ ನೇಮಕ ಮಾಡೋ ಮೂಲಕ 2023 ಚುನಾವಣೆಗೆ ನಾವು ಸಿದ್ಧ ಎನ್ನುವ ಸಂದೇಶವನ್ನು ಸಾರುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದ 180 ಕ್ಷೇತ್ರದಲ್ಲಿ ಜನತಾ ಜಲಧಾರೆ ಎನ್ನುವ ಯೋಜನೆ ಮೂಲಕ ರಾಜ್ಯದ ನೀರಾವರಿ ಸಮಸ್ಯೆ ಅದರ ಪರಿಹಾರ ಕುರಿತು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಹಿಂದಿನಿಂದಲೂ ಕಲ್ಯಾಣ ಕರ್ನಾಟಕದ ರಾಜಕೀಯ ನೋಡಿಕೊಂಡು ಬರೋದಾದರೆ ಇಲ್ಲಿ ಕಾಂಗ್ರೆಸ್ (Congress) ಹೆಚ್ಚು ಪೈಪೋಟಿ ನೀಡಿದ್ದು, ಜೆಡಿಎಸ್ ಆದರೆ 2008ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಲ್ಯಾಣ ಕರ್ನಾಟಕದ ಜನರು ಜೆಡಿಎಸ್ ಬಿಟ್ಟು ಬಿಜೆಪಿಯತ್ತ (BJP) ವಾಲಿದ್ದರು.
ಇದೀಗ ತಡವಾಗಿಯಾದರೂ ಎಚ್ಚೆತ್ತಿರೋ ಜೆಡಿಎಸ್ ಚುನಾವಣೆಗೆ (Election) ಇನ್ನೊಂದು ವರ್ಷ ಬಾಕಿ ಇರುವಂತೆ ಪಕ್ಷ ಸಂಘಟನೆ ಜೊತೆಗೆ ಜನತಾ ಜಲಧಾರೆ (Janata Jaladhare) ಹೆಸರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕಮ ಮಾಡ್ತಿದ್ದಾರೆ. ಇನ್ನೂ ಬಳ್ಳಾರಿ (Ballary) ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ಪದಗ್ರಹಣ ಸಮಾರಂಭಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayaka) ಎಂಎಲ್‌ಸಿ ತಿಪ್ಪೇಸ್ವಾಮಿ (Thippeswamy) ಸೇರಿದಂತೆ ಹಲವು ರಾಜ್ಯ ಮಟ್ಟದ ನಾಯಕರು ಆಗಮಿಸಿ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ.
ಮುಟ್ಟಾಳೆ ನೋಡಿ ಏನು ಅಂತ ಕೇಳಿದ್ರು: ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ
ಜನತಾ ಜಲಧಾರೆ ಹೆಸರಲ್ಲಿ ರಾಜ್ಯ ಸಂಚಾರ: ಒಂದು ಕಡೆ ಪಕ್ಷ ಬಲವರ್ಧನೆಗಾಗಿ ರಾಜ್ಯವ್ಯಾಪಿ ಸಭೆ ಸಮಾರಂಭಗಳನ್ನು ಮಾಡೋದ್ರ ಜೊತೆಗೆ ದೇವೇಗೌಡ (HD Devegowda) ಮತ್ತು ಕುಮಾರಸ್ವಾಮಿ (HD Kumarswamy) ನೇತೃತ್ವದಲ್ಲಿ ಜನತಾ ಜಲಧಾರೆ ಎನ್ನುವ ಕಾರ್ಯಕ್ರಮದ ಮೂಲಕ ರಾಜ್ಯದ 180 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಮಾಡೋ ಬೃಹತ್ ಯೋಜನೆಯೊಂದನ್ನು ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ, ತುಂಗಭದ್ರ, ಕಾರಂಜಿ, ಭೀಮಾ, ಸೇರಿದಂತೆ 15 ನದಿ ನೀರಿನ ಸದ್ಭಳಕೆ ಕುರಿತು ಜೆಡಿಎಸ್ ಪಕ್ಷ ಹೊಂದಿರುವ ಯೋಜನೆಗಳ ಬಗ್ಗೆ ಜನರ ಮುಂದಿಡುವ ಜಾಗೃತಿ ಕಾರ್ಯಕ್ರಮ ಇದಾಗಿದೆ.
ಅಂತಿಮವಾಗಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡೋ ಮೂಲಕ ಜನಜಾಗೃತಿ ಮೂಡಿಸೋ ಪ್ಲಾನ್ ನೊಂದಿಗೆ ಈಗಿನಿಂದಲೇ ಜೆಡಿಎಸ್ ಚುನಾವಣೆ ಪ್ರಚಾರ ಕಾರ್ಯಕ್ರಮ ಮಾಡ್ತಿದೆ. ಇನ್ನೂ ರಾಜ್ಯದ ಜನರು ನಮ್ಮ ಕೈಹಿಡಿದ್ರೇ ರಾಜ್ಯದ ಅಭಿವೃದ್ಧಿ ಜೊತೆಗೆ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆ ಜಾರಿಗೆ ತರುತ್ತೇವೆ. ಜಲಸಂಪನ್ಮೂಲ ಯೋಜನೆಯಡಿ ಎಲ್ಲ ನದಿ ಮೂಲಗಳ ಸದ್ಭಳಕೆ ಮಾಡಿಕೊಂಡು ರೈತರಿಗೆ ನೀರು ನೀಡೋ ಕೆಲಸ ಮಾಡ್ತೇವೆ ಎನ್ನುತ್ತಿದ್ದಾರೆ ಜೆಡಿಎಸ್ ನಾಯಕರು.
ಶೀಘ್ರದಲ್ಲೇ ಜೆಡಿಎಸ್‌ಗೆ ಬರ್ತಾರೆ: ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಒಳ್ಳೆಯ ನಿರ್ಧಾರ ಕೈ ಗೊಂಡಿದ್ದಾರೆ ಇಬ್ರಾಹಿಂ ಅವರು ಶೀಘ್ರದಲ್ಲೇ ಜೆಡಿಎಸ್‌ಗೆ ಬರ್ತಾರೆ. ಈಗಾಗಲೇ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಇಬ್ರಾಹಿಂ ಇಂದು ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಸೇರ್ಪಡೆ ದಿನಾಂಕ ವರಿಷ್ಠರು ತಿರ್ಮಾನಿಸುತ್ತಾರೆ ಎಂದು ಬಳ್ಳಾರಿಯಲ್ಲಿ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಹೇಳಿದ್ದಾರೆ..
Pariksha Pe Charcha: ಪ್ರಧಾನಿ ಮೋದಿಯೊಟ್ಟಿಗೆ ಮೈಸೂರಿನ ವಿದ್ಯಾರ್ಥಿ ತರುಣ್ ಮಾತು!
ಜೆಡಿಎಸ್ ಬಿಡೋ ಪ್ರಶ್ನೆಯೇ ಇಲ್ಲ: ನಾನು ಯಾವುದೇ ಪಕ್ಷಕ್ಕೆ ಸೇರೋದಿಲ್ಲ ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದಿಂದ ನನಗೆ ಆಫರ್ ಮಾಡಿದ್ರು. ಕುಮಾರಸ್ವಾಮಿ ನಮ್ಮ ನಾಯಕ ನಾನು ಜೆಡಿಎಸ್ ಬಿಟ್ಟು ಎಲ್ಲೂ ಹೋಗೋದಿಲ್ಲ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಹೇಳಿದ್ದಾರೆ. ನಾನು ಎರಡು ಬಾರಿ ಸೋತಾಗ ನನಗೆ ಜೆಡಿಎಸ್ ಟಿಕೆಟ್ ನೀಡಿದೆ. ಮೂರನೇ ಬಾರಿಗೆ ಜನರು ನನನ್ನು ಗೆಲ್ಲಿಸಿದ್ದಾರೆ. ಎಂಎಲ್‌ಎ ಮಗನಾದ ನಾನು ಯಾವುದೇ ಪಕ್ಷಕ್ಕೂ ಹೋಗಲ್ಲ. ರಾಷ್ಟೀಯ ಪಕ್ಷಗಳು ಸಮ್ಮಿಶ್ರ ಸರ್ಕಾರ ಬೀಳಿಸೋವಾಗ ನನಗೆ ಹಣ ಅಧಿಕಾರದ ಆಮೀಷ ತೋರಿಸಿದರೂ ನಾನು ಹೋಗಿಲ್ಲ. ಅಗಲೇ ಹೋಗದವನು ಮತ್ತೆ ಈಗ್ಯಾಕೆ ಹೋಗ್ತೇನೆ ಎಂದ ಅವರು ಜೆಡಿಎಸ್‌ಲ್ಲಿಯೇ ಇದ್ದು ಕಲ್ಯಾಣ ಕರ್ನಾಟಕದ ಭಾಗದಲ್ಲಿ 15 ಸೀಟು ಗೆಲ್ಲಿಸುವೆ ಎಂದರು.