Asianet Suvarna News Asianet Suvarna News

ಮುಟ್ಟಾಳೆ ನೋಡಿ ಏನು ಅಂತ ಕೇಳಿದ್ರು: ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ

ಬರಡು ಭೂಮಿಯಲ್ಲಿ ಜಲಕ್ರಾಂತಿ ಮಾಡಿದ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕರಿಗೆ ಪದ್ಮಶ್ರೀ ಗೌರವ ಸಂದಿದೆ. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಅಮೈ ಮಹಾಲಿಂಗ ನಾಯ್ಕರು ಮಂಗಳೂರಿಗೆ ಆಗಮಿಸಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ತಮ್ಮ ದೆಹಲಿಯ ಅನುಭವ ಹಂಚಿಕೊಂಡಿದ್ದಾರೆ. 

Padma Shri Amai Mahalinga Naik Shared His Delhi Experiences gvd
Author
Bangalore, First Published Mar 31, 2022, 8:01 PM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಮಾ.31): ಬರಡು ಭೂಮಿಯಲ್ಲಿ ಜಲಕ್ರಾಂತಿ ಮಾಡಿದ ದ.ಕ ಜಿಲ್ಲೆಯ  (Dakshina Kannada) ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕರಿಗೆ (Amai Mahalinga Naik) ಪದ್ಮಶ್ರೀ (Padma Shri) ಗೌರವ ಸಂದಿದೆ. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಅಮೈ ಮಹಾಲಿಂಗ ನಾಯ್ಕರು ಮಂಗಳೂರಿಗೆ ಆಗಮಿಸಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ತಮ್ಮ ದೆಹಲಿಯ ಅನುಭವ ಹಂಚಿಕೊಂಡಿದ್ದಾರೆ. ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ‌ನ್ಯೂಸ್‌ಗೆ ಅಮೈ ಮಹಾಲಿಂಗ ನಾಯ್ಕ ಮಾತನಾಡಿದ್ದಾರೆ. ದೆಹಲಿಯ ಅನುಭವ ಬಹಳ ಖುಷಿಯಾಯ್ತು, ಅಲ್ಲಿಂದ ನನ್ನನ್ನ ಗುರುತಿಸಿದ್ರು.‌ ನನಗೆ ಪ್ರಶಸ್ತಿ ಬರುತ್ತೆ ಅಂತ ಗೊತ್ತಿರಲಿಲ್ಲ, ಇದು ನನಗೆ ಬಂದ ಪ್ರಶಸ್ತಿ ಅಲ್ಲ, ರಾಜ್ಯಕ್ಕೆ ಬಂದ ಪ್ರಶಸ್ತಿ.‌ 

ನಾನು ಇದೇ ಮೊದಲ ಬಾರಿಗೆ ದೆಹಲಿಗೆ ಹೋದೆ, ದ.ಕ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿತ್ತು. ದೆಹಲಿಯ ಅಶೋಕ ಹೊಟೇಲ್ ನಲ್ಲೇ ಉಳಿದುಕೊಂಡಿದ್ದೆ. ದೆಹಲಿ ಸುತ್ತಾಡಲು ಅವರದ್ದೇ ವಾಹನ ಇತ್ತು, ಅವರೇ ಕರೆದುಕೊಂಡು ಹೋದ್ರು ಅಂದರು. ಅಲ್ಲದೇ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿಯವರು ಸಿಕ್ಕಿದ್ರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಅಂತ ಕೇಳಿದಾಗ ನಾನು ನಮಸ್ಕಾರ ಮಾಡಿದೆ. ಮೋದಿ ಮತ್ತು ರಾಷ್ಟ್ರಪತಿಯವರು ನಮಸ್ಕಾರ ಮಾಡಿದ್ರು. ರಾಷ್ಟ್ರಪತಿ ಭವನ ಎಲ್ಲಾ ಸುತ್ತಾಡಿದೆ, ಸಂಜೆ ಪ್ರಶಸ್ತಿ ಸ್ವೀಕರಿಸಿದೆ. 

ಬರಡು ಭೂಮಿಯಲ್ಲಿ ಸುರಂಗ ತೋಡಿ ನೀರು ಹರಿಸಿದ್ದೇಗೆ? ಮಹಾಲಿಂಗ ನಾಯ್ಕರ ಸಾಧನೆ ಬಗ್ಗೆ ತಿಳಿಯಿರಿ

ಬೆ.11 ಗಂಟೆಗೆ ಅಲ್ಲಿ ತಲುಪಿ ಮೊದಲು ಎಲ್ಲಾ ಸಿದ್ದತೆಗಳ ಬಗ್ಗೆ ಮಾಹಿತಿ ಕೊಟ್ಟರು. ಮುಟ್ಟಾಳೆ ಹಾಕಿಕೊಂಡು ಪ್ರಶಸ್ತಿ ಸ್ವೀಕರಿಸಿದೆ,  ಅದು ನನ್ನ ಹಳ್ಳಿಯ ಕೃಷಿ ಕೆಲಸದ್ದು. ರಾಷ್ಟ್ರಪತಿ ಭವನದ ತಪಾಸಣೆ ವೇಳೆ ಮುಟ್ಟಾಳೆ ನೋಡಿ ಏನು ಅಂತ ಕೇಳಿದ್ರು. ಆಗ ನಾನು ಅದು ಹಾಳೆಯ ಮುಟ್ಟಾಳೆ ಅಂದೆ, ತಲೆಗೆ ಹಾಕಿದ್ರೆ ತಂಪಾಗುತ್ತೆ ಅಂದೆ. ಆ ಮೇಲೆ ನನಗೆ ಮುಟ್ಟಾಳೆ ಜೊತೆ ಹೋಗಲು ಬಿಟ್ಟರು.‌ ನನ್ನನ್ನ ಗುರುತಿಸಿ ಪ್ರಶಸ್ತಿ ಕೊಟ್ಟ ಎಲ್ಲರಿಗೂ ಧನ್ಯವಾದ. ಕೃಷಿಗೆ ಎಲ್ಲರೂ ಪ್ರೋತ್ಸಾಹ ಕೊಡಬೇಕು, ಪಟ್ಟಣಕ್ಕೆ ಹೋಗೋದಲ್ಲ. ಹಳ್ಳಿಯಲ್ಲಿ ಕೆಲಸ ಮಾಡಿ ರಾಜ್ಯಕ್ಕೆ ನೆರವಾಗುವ ಕೆಲಸ ಮಾಡಬೇಕು ಅಂತ ಅಭಿಪ್ರಾಯ ಪಟ್ಟರು. 

ಮಂಗಳೂರಿನಲ್ಲಿ ಡಿಸಿ ಸನ್ಮಾನ: ಬರಡು ಭೂಮಿಯಲ್ಲಿ ಜಲಕ್ರಾಂತಿ ಮಾಡಿದ ಅಮೈ ಮಹಾಲಿಂಗ ನಾಯ್ಕ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ್ದಾರೆ.‌ ಏಷ್ಯಾನೆಟ್ ಸುವರ್ಣ ನ್ಯೂಸ್-ಕನ್ನಡ ಪ್ರಭದ ಅಸಮಾನ್ಯ ಕನ್ನಡಿಗನಿಗೆ ಸಂದ ಅತ್ಯುನ್ನತ ಗೌರವ ಇದಾಗಿದ್ದು, 2018ರ ಸಾಲಿನ ಏಷ್ಯಾನೆಟ್ ಸುವರ್ಣ ನ್ಯೂಸ್-ಕನ್ನಡ ಪ್ರಭದ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಮಹಾಲಿಂಗ ನಾಯ್ಕರಿಗೆ ಸಂದಿತ್ತು.‌ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ. ಇಂದು ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ ಅವರಿಗೆ ದ.ಕ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಸನ್ಮಾನ ಮಾಡಲಾಯ್ತು. ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಪದ್ಮಶ್ರೀ ಪ್ರಶಸ್ತಿ ಜೊತೆ ಅಮೈ ಮಹಾಲಿಂಗ ನಾಯ್ಕ ಡಿಸಿ ಕಚೇರಿಗೆ ಆಗಮಿಸಿದರು.

ಮಹಾಲಿಂಗ ನಾಯ್ಕರ ಗುಣಗಾನ ಮಾಡಿದ ಪಿಎಂ ಮೋದಿ: ಬೋಳು ಗುಡ್ಡದಲ್ಲಿ 7 ಸುರಂಗ ತೋಡಿ ನೀರು ತಂದು ಕೃಷಿ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಅಮೈ ನಿವಾಸಿ ಹಾಗೂ ಕನ್ನಡಪ್ರಭ-ಸುವರ್ಣನ್ಯೂಸ್‌ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ವಿಜೇತ ಮಹಾಲಿಂಗ ನಾಯ್ಕ ಅವರ ಸಾಧನೆಗೆ ಪ್ರಧಾನಿ (Narendra Modi) ನರೇಂದ್ರ ಮೋದಿ ಅವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮ ಪುರಸ್ಕಾರ ಲಭಿಸಿದೆ. ಇವರೊಬ್ಬ ರೈತ. ಕರ್ನಾಟಕದವರು. 

Padma Shri Award ಬರಡು ಭೂಮಿಯಲ್ಲಿ ಸುರಂಗ ತೋಡಿ ನೀರು ಹರಿಸಿದ ದಕ್ಷಿಣ ಕನ್ನಡದ ಭಗೀರಥನಿಗೆ ಪದ್ಮಶ್ರೀ ಪ್ರಶಸ್ತಿ

ಹಲವು ಜನರು ಅವರನ್ನು ‘ಸುರಂಗ ಮಾನವ’ ಎಂದೂ ಕರೆಯುತ್ತಾರೆ. ಅವರು ಕೃಷಿಯಲ್ಲಿ ಮಾಡಿರುವ ಸಾಧನೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಸಣ್ಣ ರೈತರು ನಾಯ್ಕ ಅವರ ಪ್ರಯತ್ನಗಳನ್ನು ನೋಡಿ ಸಾಕಷ್ಟುಲಾಭ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ನಾಯ್ಕ ಅವರಂತಹ ಎಲೆಮರೆ ಕಾಯಿಯಂತಿರುವ ಹಲವು ಸಾಧಕರನ್ನು ಗುರುತಿಸಿ ಅವರಿಗೆ ಗೌರವ ನೀಡಲಾಗುತ್ತಿದೆ. ಇಂಥವರ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಜೀವನದಲ್ಲಿ ಬಹಳಷ್ಟುಕಲಿಯಬಹುದಾಗಿದೆ ಎಂದರು. ಇದೇ ವೇಳೆ ನದಿ ಉಳಿಸಲು ಹೋರಾಡಿದ ಉತ್ತರಾಖಂಡದ ಬಸಂತಿ ದೇವಿ, ಮಣಿಪುರದ ಲಿಬಾ ಜವಳಿ ಕಲೆಯನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿರುವ 77 ವರ್ಷದ ಮಣಿಪುರದ ಲೊರೆಂಬಾಮ್‌ ಬೀನೋ ದೇವಿ ಅವರಂತಹ ಪದ್ಮಶ್ರೀ ವಿಜೇತರ ಬಗ್ಗೆಯೂ ಮೋದಿ ಮೆಚ್ಚುಗೆ ಸೂಚಿಸಿದರು.

Follow Us:
Download App:
  • android
  • ios