Asianet Suvarna News Asianet Suvarna News

Assembly Election: ಮತದಾರರ ಸೆಳೆಯಲು ಜನಾರ್ಧನರೆಡ್ಡಿ ಹೊಸ ತಂತ್ರ: ಗಂಗಾವತಿಯಲ್ಲಿ ಬೈಕ್‌, ಛತ್ರಿಗಳ ವಿತರಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿ ಛತ್ರಿ ವಿತರಣೆ
ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ದೊಡ್ಡ ಛತ್ರಿಗಳ ವಿತರಣೆ
ಕೆಆರ್‌ಪಿಪಿ ಕಾರ್ಯಕರ್ತರಿಗೆ ಜನಾರ್ಧನರೆಡ್ಡಿ ಬೈಕ್‌ ವಿತರಣೆಗೆ ಸಿದ್ಧತೆ

Janardhan Reddy New Strategy to Attract Voters Distribution of Bikes and Umbrellas in Gangavati sat
Author
First Published Feb 26, 2023, 3:58 PM IST | Last Updated Feb 26, 2023, 3:59 PM IST

ಕೊಪ್ಪಳ (ಫೆ.26): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಹಿನ್ನೆಲೆಯಲ್ಲಿ ಸೀರೆ ಹಂಚಿಕೆ, ಕುಕ್ಕರ್‌ ಹಂಚಿಕೆ ಮಾಡಿದ್ದಾಯ್ತು. ಈಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಮುಖ್ಯಸ್ಥ ಜನಾರ್ಧನರೆಡ್ಡಿ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ಹಾಗೂ ಬೈಕ್‌ಗಳನ್ನು ವಿತರಣೆ ಮಾಡಲು ಮುಂದಾಗಿದ್ದಾರೆ.

ದಿನದಿಂದ ದಿನಕ್ಕೆ ಬಳ್ಳಾರಿ ಯಲ್ಲಿ ಚುನಾವಣೆ ರಂಗು ಜೋರಾಗಿ ಏರುತ್ತಿದೆ. ಸಾರ್ವಜನಿಕರಿಗೆ ಸೀರೆ ಕೊಟ್ಟದ್ದಾಯ್ತು.  ಕುಕ್ಕರ್  ಕೊಟ್ಟದ್ದುಯ್ತು. ಇದೀಗ ಜನಾರ್ದನ ಪಕ್ಷದ ಕಡೆಯಿಂದ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಇದು ಸಾರ್ವಜನಿಕರಿಗೆ ನೀಡುವ ಉಡುಗೊಡೆಯಲ್ಲ ನಿಷ್ಠಾವಂತ ಕಾರ್ಯಕರ್ತರಿಗೆ ನೀಡೋ ಉಡುಗೊರೆ. ಜನಾರ್ದನ ರೆಡ್ಡಿ ಅವರ ಕೆಆರ್ ಪಿಪಿ ಪಕ್ಷದ ಸಂಘಟನೆಗಾಗಿ‌ ಕಾರ್ಯಕರ್ತ ರಿಗಾಗಿ ಭರ್ಜರಿ ಬೈಕ್ ಗಳು ಆಗಮಿಸುತ್ತಿವೆ. ಇನ್ನು ಮೊದಲ ಹಂತದಲ್ಲಿ ಮತದಾರರನ್ನು ಸೆಳೆಯಲು ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಛತ್ರಿಗಳನ್ನು ನೀಡಲಾಗಿದೆ.

ಕಾರ್ಯಕರ್ತರಿಗೆ ಬೈಕ್ ಗಿಫ್ಟ್ ಕೊಟ್ಟ ಗಣಿಧಣಿ: ಪಕ್ಷ ಸಂಘಟನೆಗೆ ಸಿದ್ಧತೆ

ಗಂಗಾವತಿಯಲ್ಲಿ ಛತ್ರಿ ವಿತರಣೆ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅದ್ಯಕ್ಷ ಮಾಜಿ ಸಚಿವ ಜನಾರ್ಧನರಡ್ಡಿ ಅವರ ಸೂಚನೆ ಮೇರೆಗೆ ಬೇಸಿಗೆ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ನೆರಳು ನೀಡುವ ಉದ್ದೇಶದಿಂದ ಗಂಗಾವತಿ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಛತ್ರಿಯನ್ನು ವಿತರಣೆ ಮಾಡಲಾಗಿದೆ. ದಿನ ನಿತ್ಯ 150 ಬೀದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ ಮಾಡಲಾಗುತ್ತಿದೆ. ಗಂಗಾವತಿ ವಿಧಾನ ಸಭಾ ಕ್ರೇತ್ರ ಜುಲಾಯಿ ನಗರದಲ್ಲಿ ಛತ್ರಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 

ಕಾರ್ಯಕರ್ತರಿಗೆ ಬೈಕ್‌ ವಿತರಣೆ: ಗಂಗಾವತಿ ಮತ್ತು ಬಳ್ಳಾರಿಯಲ್ಲಿ ಪ್ರಮುಖ ಮುಖಂಡರು ಓಡಾಡಲು 100 ಟಿವಿಎಸ್ ಸ್ಪೋರ್ಟ್ ಬೈಕ್ ನೀಡಲಾಗುತ್ತಿದೆ. ಪಕ್ಷದ ಹೆಸರು ಮತ್ತು ಚಿನ್ಹೆಗಳನ್ನು ಬಳಸಿ ವಿಶೇಷವಾಗಿ  ಸಿದ್ದ ಪಡಿಸಲಾಗಿರೋ ಬೈಕ್ ಇದಾಗಿದೆ. ಈಗಾಗಲೇ ಎರಡು ಕಡೆ ಒಂದೊಂದು ಬೈಕ್ ಮಾಡೆಲ್ ಬಂದಿದ್ದು, ಇನ್ನೂ ಬೈಕ್ ರಸ್ತೆಗಿಳಿದಿಲ್ಲ. ಎರಡು ಕಡೆ ತಲಾ 50 ಬೈಕ್  ಕಾರ್ಯಕರ್ತರಿಗೆ ನೀಡಲು ಯೋಜನೆ ಮಾಡಲಾಗ್ತಿದೆ. ಪ್ರಮುಖ ಕಾರ್ಯಕರ್ತರು ಕ್ಷೇತ್ರದ ಎಲ್ಲೆಡೆ ಪ್ರಮುಖ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳಲು ಸಂಘಟನಾತ್ಮಕ ಕಾರ್ಯಗಳನ್ನು ಇವುಗಳನ್ನು ಬಳಸಲಿದ್ದಾರೆ.

ಬಿಜೆಪಿಯಲ್ಲಿದ್ದಾಗಲೂ ತಂತ್ರ ಬಳಕೆ: ಈ ಮೊದಲು ಬಿಜೆಪಿಯಲ್ಲಿದ್ದಾಗಲೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಬೈಕ್‌ಗಳನ್ನು ಕೊಟ್ಟು ಕಾರ್ಯಕರ್ತರನ್ನು ಪಕ್ಷದ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಪ್ರಯೋಗ ಮೊದಲ ಬಾರಿಗೇ ಯಶಸ್ವಿ ಕೂಡ ಆಗಿತ್ತು. ಈಗ ಬಿಜೆಪಿಯಿಂದ ಹೊರಗೆ ಬಂದು ಕೆಆರ್‌ಪಿಪಿ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ. ಹೀಗಾಗಿ, ತಮ್ಮ ಹೊಸ ಪಕ್ಷದಲ್ಲಿಯೂ ಕೂಡ ಬಳ್ಳಾರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಪ್ರಚಾರ ಮಾಡಲು ಹಾಗೂ ಪಕ್ಷದ ಸಂಘಟನಾ ಕಾರ್ಯಗಳಿಗೆ ಅನುಕೂಲ ಆಗುವಂತೆ ಬೈಕ್‌ಗಳನ್ನು ನೀಡಲಾಗುತ್ತಿದೆ.

 

Assembly election: ಜನಾರ್ಧನರೆಡ್ಡಿ ಪ್ರಾಬಲ್ಯ ತಗ್ಗಿಸಲು ಅಮಿತ್‌ ಶಾ ಅಸ್ತ್ರ: ಬಿಜೆಪಿ ಕೋರ್‌ ಕಮಿಟಿ ಸಭೆ

ಕಲ್ಪತರು ನಾಡಲ್ಲಿ ಜನಾರ್ಧನರೆಡ್ಡಿಗೆ ಭರ್ಜರಿ ರೋಡ್‌ ಶೋ: ಕಲ್ಪತರು ನಾಡಿನಲ್ಲಿ ಗಾಲಿ ಜನಾರ್ಧನ ರೆಡ್ಡಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ತುಮಕೂರು ಜಿಲ್ಲೆ ಪಾವಗಡಕ್ಕೆ ಆಗಮಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಛೇರಿ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಹಲವು ನಾಯಕರನ್ನು ಕೆಆರ್‌ಪಿಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಜೊತೆಗೆ, ಪಾವಗಡ ಪಟ್ಟಣದಲ್ಲಿ ಜನಾರ್ಧನ ರೆಡ್ಡಿ ರೋಡ್ ಶೋ ಮಾಡಿದ್ದು, ಕ್ರೇನ್ ಮೂಲಕ ಬೃಹತ್ ಗಾತ್ರದ ಗುಲಾಬಿ ಹಾರ ಹಾಕಿ ಜನರು ಸ್ವಾಗತಿಸಿದ್ದಾರೆ. ಪಾವಗಡ ಪಟ್ಟಣದ ಗುರುಭವನದ ಆವರಣದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಪಾವಗಡ ಕ್ಷೇತ್ರದ ಕೆಆರ್‌ಪಿಪಿ ಟಿಕೆಟ್‌ ಆಕಾಂಕ್ಷಿ ನೇರಳಕುಂಟೆ ನಾಗೇಂದ್ರ ಕುಮಾರ್ ಅವರು ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios