ಭಾರತ್‌ ಜೋಡೋ ಕಾಂಗ್ರೆಸ್‌ಗೆ ಹೊಸ ಸಂಜೀವಿನಿ: ಜೈರಾಂ ರಮೇಶ್‌

ಮೋದಿ ಒಂದು ರೀತಿ ಸರ್ವಜ್ಞಾನಿ, ಸರ್ವವ್ಯಾಪಿ, ಸರ್ವಶಕ್ತಿ ಅಂದುಕೊಂಡಿದ್ದು, ಆರ್ಥಿಕ ಅಸಮಾನತೆ, ಅಧಿಕಾರ ಕೇಂದ್ರೀಕರಣ ಮಾಡಿಕೊಂಡು ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ, ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸಿ ಎಲ್ಲದಕ್ಕೂ ಕೇಂದ್ರದ ಬಳಿ ಭಿಕ್ಷೆ ಬೇಡುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಕಿಡಿಕಾರಿದ ಜೈರಾಂ ರಮೇಶ್‌ 

Jairam Ramesh Talks Over Bharat Jodo Yatra grg

ಗುಂಡ್ಲುಪೇಟೆ(ಅ.01): ಭಾರತ್‌ ಜೋಡೋ ಯಾತ್ರೆ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಸಂಜೀವಿನಿಯಾಗಿದೆ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಂ ರಮೇಶ್‌ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭಾರತ್‌ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ, ಈ ಯಾತ್ರೆ ಮೂಲಕ ಹೊಸ ಕಾಂಗ್ರೆಸ್‌ ಹಾಗೂ ಹೊಸ ರಾಹುಲ್‌ ಉದಯಿಸಿದ್ದಾರೆ ಎಂದು ಅವರು ವ್ಯಾಖ್ಯಾನಿಸಿದರು. ಮೋದಿ ಒಂದು ರೀತಿ ಸರ್ವಜ್ಞಾನಿ, ಸರ್ವವ್ಯಾಪಿ, ಸರ್ವಶಕ್ತಿ ಅಂದುಕೊಂಡಿದ್ದು, ಆರ್ಥಿಕ ಅಸಮಾನತೆ, ಅಧಿಕಾರ ಕೇಂದ್ರೀಕರಣ ಮಾಡಿಕೊಂಡು ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ, ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸಿ ಎಲ್ಲದಕ್ಕೂ ಕೇಂದ್ರದ ಬಳಿ ಭಿಕ್ಷೆ ಬೇಡುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಕಿಡಿಕಾರಿದರು.

ಭಾರತ್‌ ಜೋಡೋ ಅಲ್ಲಾ ತೋಡೋ ಭಾರತ್‌ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿರುವುದು ಬಿಜೆಪಿಗರು ನಮ್ಮ ಯಾತ್ರೆಯಿಂದ ಆತಂಕಗೊಂಡು ವರ್ತಿಸುತ್ತಿದೆ, ಕಾಂಗ್ರೆಸ್‌ಗೆ ಇದು ಬೂಸ್ಟರ್‌ ಡೋಸ್‌ ಕೊಡುತ್ತಿದ್ದರೇ ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ, ಬಿಜೆಪಿ ಈ ರಾಜಕಾರಣವನ್ನು ಎದುರಿಸಲು ಸಜ್ಜಾಗುತ್ತಿದೆ ಎಂದರು.

ರಾಹುಲ್‌ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!

ಹೈಕಮಾಂಡ್‌ ಸಂಸ್ಕತ್ರೃತಿ ಎಂದು ಬಿಜೆಪಿ ಟೀಕಿಸುತ್ತಿದೆ, ನಮ್ಮದು ಬಿಜೆಪಿಗಿಂತ ಹೆಚ್ಚು ಆಂತರಿಕ ಪ್ರಜಾಪ್ರಭುತ್ವ ಹೊಂದಿದೆ, ನಮ್ಮದು ಹೈಕಮಾಂಡ್‌ ಸಂಸ್ಕತ್ರೃತಿಯಾದರೇ ಬಿಜೆಪಿ ಅವರದ್ದು ಸೂಪರ್‌ ಹೈಕಮಾಂಡ್‌ ಸಂಸ್ಕತ್ರೃತಿಯಾಗಿದೆ ಎಲ್ಲವನ್ನೂ ನಡ್ಡಾ ಮೇಲಿನವರನ್ನು ಕೇಳಿಕೊಂಡು ಆದೇಶಿಸುತ್ತಾರೆ ಎಂದು ಲೇವಡಿ ಮಾಡಿದರು.

ಭಾರತ್‌ ಜೋಡೊ ಯಾತ್ರೆ ಅತಿದೊಡ್ಡ ಯಾತ್ರೆಯಾಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಪರಿವರ್ತನೆ ತರಲಿದೆ, ಯಾತ್ರೆ ಮೂಲಕ ಹತ್ತಾರು ವಿಚಾರ, ಅಭಿಪ್ರಾಯ, ಸಂಸ್ಕತ್ರೃತಿ ಒಂದಾಗುತ್ತಿದೆ ಎಂದರು.

ಭಾರತ ಜೋಡೋ ಯಾತ್ರೆ ಬಿಜೆಪಿ ಚಿಂತೆಗೆಡಿಸಿದ್ದು, ಬಿಜೆಪಿ ಸುಳ್ಳು ಸುದ್ದಿಗಳ ಮೂಲಕ ಈ ಯಾತ್ರೆಯನ್ನು ಟೀಕಿಸುತ್ತಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಚಿಂತೆಗೀಡು ಮಾಡಿದೆ. ಈ ಯಾತ್ರೆಯಿಂದ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷ ಶಕ್ತಿಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅವರಿಗೆ ಮನದಟ್ಟಾಗಿದೆ ಎಂದರು.

ರಾಹುಲ್‌ ಯಾತ್ರೆ ಭರ್ಜರಿ ಆರಂಭ: ಕಾಂಗ್ರೆಸ್ಸಿಗರಿಂದ ಚುನಾವಣೆಗೆ ರಣಕಹಳೆ

ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ನಾನು ಯಾವುದೇ ವ್ಯಕ್ತಿಗಳ ಕುರಿತು ಮಾತನಾಡುವುದಿಲ್ಲ. ವೈಯಕ್ತಿಕ ವಿಚಾರಗಳು ಅಸಂಬದ್ಧ. ಇಲ್ಲಿ ಕೇವಲ ಭಾರತ ಜೋಡೋ ಯಾತ್ರೆಯಷ್ಟೇ ಮುಖ್ಯ. ಇದು ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆಯಾಗಿದ್ದು, ಪಕ್ಷಕ್ಕೆ ಒಂದು ರೂಪಾಂತರ ನೀಡುತ್ತಿದೆ. ಕಾಂಗ್ರೆಸ್‌ ಪಕ್ಷ ಮಾತ್ರ ತನ್ನ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಸುತ್ತದೆ. ಕಾಂಗ್ರೆಸ್‌ ಪಕ್ಷ ಮಾತ್ರ ಚುನಾಯಿತ ಅಧ್ಯಕ್ಷರನ್ನು ಹೊಂದಿದೆ ಎಂದರು.

ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಸ್ಪರ್ಧೆಯಿಂದ ದಲಿತ ಸಮುದಾಯದ ಮತ ಬ್ಯಾಂಕ್‌ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ಮಲ್ಲಿಕಾರ್ಜುನ ಖರ್ಗೆಅವರ ಬಗ್ಗೆ ಸತ್ಯಾಂಶ ತಿಳಿದ ನಂತರವೂ ಆರೋಪ ಮಾಡಲು ಹೇಗೆ ಸಾಧ್ಯ? ಖರ್ಗೆ ಅವರು 50 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದು, ಅವರನ್ನು ದಲಿತ ನಾಯಕ ಎಂದಷ್ಟೇ ಪರಿಗಣಿಸಲು ಸಾಧ್ಯವಿಲ್ಲ ಎಂದರು.
 

Latest Videos
Follow Us:
Download App:
  • android
  • ios