Asianet Suvarna News Asianet Suvarna News

UP Elections 2022: ನವಾಬ್ VS ಅವಾಮ್ ಫೈಟ್ ನಲ್ಲಿ ಗೆದ್ದ ಅಜಂ!

ರಾಂಪುರದಲ್ಲಿ ಗೆಲುವು ಸಾಧಿಸಿದ ಅಜಂ ಖಾನ್

ಸುವಾರ್ ನಲ್ಲಿ ಅಜಂ ಖಾನ್ ಪುತ್ರನ ವಿಜಯ

ಎರಡೂ ಕ್ಷೇತ್ರಗಳಲ್ಲಿ ರಾಜ ಮನೆತನದವರ ವಿರುದ್ಧ ವಿಜಯ

jailed sp leader azam khan registers big win over royals in rampur seat san
Author
Bengaluru, First Published Mar 10, 2022, 11:27 PM IST

ಲಕ್ನೋ (ಮಾ.10): ನವಾಬರು (nawab) ಹಾಗೂ ಶೆಹಜಾದಾ (sahebzada) ನಡುವಿನ ರಾಜಕೀಯ ಹಗ್ಗಜಗ್ಗಾಟ ಉತ್ತರಪ್ರದೇಶ (Uttar Pradesh) ರಾಜಕೀಯದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿದೆ. ಉತ್ತರ ಪ್ರದೇಶದ ರಾಂಪುರ (Rampur) ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ದೊಡ್ಡ ನಾಯಕ ಎನಿಸಿಕೊಂಡ ಅಜಂ ಖಾನ್ (Azam Khan), ರಾಮಪುರದ ನವಾಬ ಕಾಂಗ್ರೆಸ್ ನ ಕಾಜಿಮ್ ಅಲಿ ಖಾನ್ (Kazim Ali Khan) ವಿರುದ್ಧ ವಿಜಯ ಸಾಧಿಸಿದ್ದಾರೆ. ಇನ್ನೊಂದೆಡೆ ಸುವಾರ್ (Suar) ಕ್ಷೇತ್ರದಲ್ಲಿ ಅಜಂ ಖಾನ್ ಅವರ ಪುತ್ರ ಮೊಹಮದ್ ಅಬ್ದುಲ್ಲಾ ಅಜಮ್ ಖಾನ್, ನವಾಬರ ಪುತ್ರ ಹೈದರ್ ಅಲಿ ಖಾನ್ ವಿರುದ್ಧ ವಿಜಯ ಕಂಡಿದ್ದಾರೆ.


ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಮತ್ತು ಜೈಲಿನಲ್ಲಿರುವ ಸಂಸದ ಅಜಂ ಖಾನ್ ಅವರು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ರಾಂಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಆಕಾಶ್ ಸಕ್ಸೇನಾ ಅವರನ್ನು  55,141 ಮತಗಳಿಂದ ಸೋಲಿಸುವ ಮೂಲಕ ಜಯ ಸಾಧಿಸಿದ್ದಾರೆ. ರಾಮಪುರ ಕ್ಷೇತ್ರದ ಸನಿಹದಲ್ಲೇ ಇರುವ ಸುವಾರ್ ನಲ್ಲಿ ಶೆಹಜಾದಾ ಹಾಗೂ ನವಾಬರ ನಡುವಿನ ಕಿರಿಯ ಕುಡಿಗಳಾದ ಅಜಮ್ ಖಾನ್ ಅವರ ಮಗ ಎಸ್ ಪಿಯ ಮೊಹಮ್ಮದ್ ಅಬ್ದುಲ್ಲಾ ಅಜಮ್ ಖಾನ್, ಅಪ್ನಾ ದಳ (ಸೋನೆಲಾಲ್) ಪರವಾಗಿ ಸ್ಪರ್ಧೆ ಮಾಡಿದ್ದ ಹೈದರ್ ಅಲಿ ಖಾನ್ ವಿರುದ್ಧ 60 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಕಂಡಿದ್ದಾರೆ.

ಮುಸ್ಲಿಂ ಪ್ರಾಬಲ್ಯದ ಎರಡು ಕ್ಷೇತ್ರಗಳು ಉನ್ನತ ಮಟ್ಟದ ಹೋರಾಟದ ಮೂಲಕ ಗಮನಸೆಳೆದಿದ್ದವು. ಹಲವು ಆರೋಪಗಳ ಮೇಲೆ ಜೈಲು ಸೇರಿರುವ ಅಜಂ ಖಾನ್ ಅವರು ರಾಮಪುರದಿಂದ ಸತತ 10ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದರ ನಡುವೆ ಅಬ್ದುಲ್ಲಾ ಅಜಮ್ ಖಾನ್ 2017 ರಲ್ಲಿ ಸುವಾರ್ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಆದರೆ, ವಯಸ್ಸಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದಲ್ಲಿ ಎದುರಾದ ಕಾನೂನು ಹೋರಾಟದಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದರು. ಈಗ ಅದೇ ಕ್ಷೇತ್ರದಲ್ಲಿ ಮತ್ತೆ ಜಯ ಸಾಧಿಸಿದ್ದಾರೆ.

ಉತ್ತರ ಪ್ರದೇಶದ ಹಿಂದಿನ ಸಮಾಜವಾದಿ ಸರ್ಕಾರಗಳಲ್ಲಿ ಪ್ರಬಲ ಮಂತ್ರಿಯಾಗಿ ಅಜಂ ಖಾನ್ ಗುರುತಿಸಿಕೊಂಡಿದ್ದರೆ, ಅವರ ಪ್ರತಿಸ್ಪರ್ಧಿ ಕಾಜಿಮ್ ಅಲಿ ಖಾನ್ ಅಲಿಯಾಸ್ ನಾವೇದ್ ಮಿಯಾನ್ ಅವರು ಐದು ಬಾರಿ ಶಾಸಕರಾಗಿದ್ದಾರೆ, ಅವರು 2002 ರಿಂದ 2017 ರವರೆಗೆ ಸುವಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಾಜಿಮ್ ಅಲಿ ಖಾನ್ ಅವರು ಈ ಹಿಂದೆ ಎಸ್‌ಪಿ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಟಿಕೆಟ್‌ಗಳಲ್ಲಿ ಸ್ಪರ್ಧಿಸಿದ್ದರು. 2012 ರಲ್ಲಿ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದರೆ, 2017 ರಲ್ಲಿ ಅವರು ಬಿಎಸ್‌ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಆದರೆ 2019 ರಲ್ಲಿ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಮರಳಿದರು. ಇಂಗ್ಲೆಂಡ್ ನ ಎಸೆಕ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಇವರ ಪುತ್ರ  ಹೈದರ್ ಅಲಿ ಖಾನ್ ಅಥವಾ ಹಮ್ಜಾ ಮಿಯಾನ್ ಗೆ ಇದು ಮೊದಲ ಚುನಾವಣೆಯಾಗಿದೆ.

UP Elections: 5 ವರ್ಷಗಳ ಆಡಳಿತ, ಯೋಗಿ ಆ ಒಂದು ಕಾರ್ಯಕ್ಕೆ ಯುಪಿ ಜನತೆ ಕೊಟ್ಟ ಗೆಲುವಿನ ಗಿಫ್ಟ್‌!
ದಶಕಗಳ ಕಾಲದ ರಾಜಕೀಯ ಪೈಪೋಟಿ: ಎರಡು ಗುಂಪುಗಳ ನಡುವಿನ ರಾಜಕೀಯ ಪೈಪೋಟಿ ಹಲವಾರು ದಶಕಗಳ ಹಿಂದಿನದು. ಕಾಜಿಮ್ ಅಲಿ ಖಾನ್ ಅವರು 18 ನೇ ಶತಮಾನದಲ್ಲಿ ಹಿಂದಿನ ರಾಂಪುರ ರಾಜ್ಯವನ್ನು ಸ್ಥಾಪಿಸಿದ ನವಾಬ್ ಫೈಜುಲ್ಲಾ ಅಲಿ ಖಾನ್ ಅವರ ವಂಶಸ್ಥರು. ಕಾಜಿಮ್ ಅಲಿ ಖಾನ್ ಅವರ ತಂದೆ, ಜುಲ್ಫಿಕರ್ ಅಲಿ ಅಲಿಯಾಸ್ ಮಿಕ್ಕಿ ಮಿಯಾನ್, ಅವರ ಸಹೋದರನ ನಂತರ ಪಟ್ಟದ ಆಡಳಿತಗಾರರಾಗಿದ್ದರು. 1967 ರಲ್ಲಿ ಸ್ವತಂತ್ರ ಪಕ್ಷಕ್ಕಾಗಿ ರಾಂಪುರ ಸಂಸದೀಯ ಕ್ಷೇತ್ರದಿಂದ ಲೋಕಸಭೆಗೆ ಮತ್ತು 1971, 1980, 1984 ಮತ್ತು 1989 ರಲ್ಲಿ ಕಾಂಗ್ರೆಸ್‌ಗೆ ಚುನಾಯಿತರಾಗಿದ್ದರು.

Election Result 2022 ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!
ಅವರ ಮರಣದ ನಂತರ, ಕಾಜಿಮ್ ಅಲಿ ಖಾನ್ ಅವರ ತಾಯಿ ವಿಧವೆ ನುರ್ಬಾನೊ 1996 ಮತ್ತು 1999 ರಲ್ಲಿ ರಾಂಪುರದಿಂದ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಿಸಿದ್ದರು. ಬೀಡಿ ಸುತ್ತುವವರು ಮತ್ತು ಜವಳಿ ಕಾರ್ಮಿಕರ ಹಿತಾಸಕ್ತಿಗಳಿಗಾಗಿ ಹೋರಾಡುವ ಯುವ ಸಮಾಜವಾದಿ ನಾಯಕರಾಗಿ ಹೊರಹೊಮ್ಮಿದ ಅಜಂ ಖಾನ್, 1980 ರಲ್ಲಿ ಜನತಾ ಪಕ್ಷದ (ಜಾತ್ಯತೀತ) ಟಿಕೆಟ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ರಾಂಪುರದಲ್ಲಿ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ ರಾಜಮನೆತನದ ವಿರುದ್ಧ ದಂಗೆ ಎದ್ದ ಅಜಂ ಖಾನ್ ತನ್ನ ಹೋರಾಟವನ್ನು 'ನವಾಬ್' ವಿರುದ್ಧ 'ಅವಾಮ್' ಎಂದು ಹೇಳಿದ್ದರು. ಅದರರ್ಥ ರಾಜಮನೆತನದ ವಿರುದ್ಧ ಸಾಮಾನ್ಯ ಜನರು ಎನ್ನುವುದು. ಅವರು 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಉತ್ತರ ಪ್ರದೇಶದ ಅತ್ಯಂತ ಪ್ರಭಾವಿ ಮುಸ್ಲಿಂ ರಾಜಕೀಯ ನಾಯಕರಲ್ಲಿ ಒಬ್ಬರೆನಿಸಿಕೊಂಡರು.

Follow Us:
Download App:
  • android
  • ios