Asianet Suvarna News Asianet Suvarna News

ಆರ್‌ಎಸ್ಎಸ್ ಸಿದ್ಧಾಂತದಿಂದ ಜಗದೀಶ್‌ ಶೆಟ್ಟರ್‌ ಮತ್ತೆ ಬಿಜೆಪಿಗೆ: ಸಚಿವ ರಾಜಣ್ಣ

ಜಗದೀಶ್‌ ಶೆಟ್ಟರ್‌ ಆರ್‌ಎಸ್‌ಎಸ್‌ ತತ್ವ ಸಿದ್ಧಾಂತದಿಂದ ಬಂದವರು. ಹಾಗಾಗಿ ಅವರೇ ಈವರೆಗೆ ಕಾಂಗ್ರೆಸ್‌ನಲ್ಲಿ ತಮಗೆ ಅವಮಾನ ಆಗಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅವರ ಮೇಲೆ ವೈಯಕ್ತಿಕ ಆರೋಪವನ್ನು ಮಾಡೋದು ಸಾಧುವಲ್ಲ. 

Jagadish Shettar back to BJP from RSS ideology Says Minister KN Rajanna gvd
Author
First Published Jan 27, 2024, 3:30 AM IST

ಹಾಸನ (ಜ.27): ಜಗದೀಶ್‌ ಶೆಟ್ಟರ್‌ ಆರ್‌ಎಸ್‌ಎಸ್‌ ತತ್ವ ಸಿದ್ಧಾಂತದಿಂದ ಬಂದವರು. ಹಾಗಾಗಿ ಅವರೇ ಈವರೆಗೆ ಕಾಂಗ್ರೆಸ್‌ನಲ್ಲಿ ತಮಗೆ ಅವಮಾನ ಆಗಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅವರ ಮೇಲೆ ವೈಯಕ್ತಿಕ ಆರೋಪವನ್ನು ಮಾಡೋದು ಸಾಧುವಲ್ಲ. ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದು ಅವರೇ ಹೇಳಿದ್ದಾರೆ ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹೇಳಿದರು.

ನಗರದಲ್ಲಿ ಶುಕ್ರವಾರ 75 ನೇ ಗಣರಾಜ್ಯೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಗದೀಶ್ ಶೆಟ್ಟರ್ ಮೊದಲಿನಿಂದಲೂ ಆರ್‌ಎಸ್‌ಎಸ್‌ ಸಿದ್ದಾಂತದಿಂದ ಬಂದವರು. ವಿಧಾನಸಭೆ ಟಿಕೆಟ್ ಕೊಡ್ಲಿಲ್ಲ ಅಂತಾ ಬೇಸರದಿಂದ ಅವರು ತೀರ್ಮಾನ ತೆಗೆದುಕೊಂಡಿದ್ದರು. ನಾನು ಜನತಾ ದಳದಲ್ಲಿ ೨೦೦೪ರಲ್ಲಿ ಇದ್ದೆ. ಅಲ್ಲಿ ಒಗ್ಗಲಿಲ್ಲ ಹಾಗಾಗಿ ವಾಪಸ್ಸು ಕಾಂಗ್ರೆಸ್‌ಗೆ ಬಂದೆ. ಹಾಗೆಯೇ ಶೆಟ್ಟರ್ ಕೂಡ ಬಂದ್ರು, ನಾಲ್ಕು ತಿಂಗಳು ಇದ್ದರು. ಒಗ್ಗಲಿಲ್ಲ ಅಂತಾ ವಾಪಸ್ಸು ಹೋದರು. ನನಗೆ ಕಾಂಗ್ರೆಸ್‌ನಲ್ಲಿ ಗೌರವ ಕೊಟ್ಟಿದ್ದಾರೆ. ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ ಎಂದು ಶೆಟ್ಟರ್‌ ಅವರೇ ಹೇಳಿದ್ದಾರೆ’ ಎಂದು ಹೇಳಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಖರ್ಗೆ ಕೈ ಬಲಪಡಿಸೋಣ: ಶಾಸಕ ಎಂ.ವೈ.ಪಾಟೀಲ್‌

‘ಹಿಂದೆ ಬಸವರಾಜ ಬೊಮ್ಮಾಯಿ ಇದ್ದಾಗ ಯಾಕೆ ಮಂತ್ರಿ ಮಾಡಲಿಲ್ಲ. ಗೌಡ್ರು ಯಾಕೆ ಹೇಳಿ ಮಾಡಿಸಬಾರದಿತ್ತು..? ಅವಾಗ ಸುಮ್ಮನೆ ಯಾವುದೇ ರಾಜಕೀಯದ ಬಣಕ್ಕೋಸ್ಕರ ಅವರ ಬೇಳೆ ಬೇಯಿಸಿಕೊಳ್ಳೋದಕ್ಕೆ ಹೇಳೋದನ್ನ ನಾನು ಒಪ್ಪೋದಿಲ್ಲ. ಬರೀ ಕಾಂಗ್ರೆಸ್ ನವರು ಮಂತ್ರಿ ಮಾಡಲಿಲ್ಲ ಅನ್ನೋ ಆರೋಪವನ್ನು ಅವರು ಯಾಕೆ ಮಾಡಲಿಲ್ಲ. ಹಾಗಾದ್ರೆ ಆ ಆರೋಪ ಅವರಿಗೂ ಅನ್ವಯವಾಗುತ್ತದೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೊದಲಿಂದಲೂ ಆರ್‌ಎಸ್‌ಎಸ್‌ ಸಿದ್ಧಾಂತದಿಂದ ಬಂದಿರೋರು. ಅವರು ಹೋಗಿರೋದಕ್ಕೆ ನಮ್ಮದೇನು ಆಕ್ಷೇಪಣೆ ಇಲ್ಲ, ಆರೋಪನೂ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸವದಿ ಬಿಜೆಪಿ ಸೇರೋದು ಸುಳ್ಳು: ‘ಲಕ್ಷ್ಮಣ್ ಸವದಿ ನನ್ನ ಒಳ್ಳೆಯ ಸ್ನೇಹಿತ. ನನಗೂ ಅವರಿಗೂ ವೈಯಕ್ತಿಕವಾಗಿ ೩೦ ವರ್ಷದ ವಿಶ್ವಾಸವಿದ್ದು, ನಾನು ಯಾವುದೇ ಕಾರಣಕ್ಕೂ ಹೋಗೋದಿಲ್ಲ ರಾಜಣ್ಣ. ಇದೆಲ್ಲಾ ಸುಳ್ಳು. ಮಾಧ್ಯಮದವರು ಸೃಷ್ಟಿ ಮಾಡ್ತಿದ್ದಾರೆ ಅಂತಾ ಹೇಳಿದರು. ಅದಕ್ಕಿಂತ ಇನ್ನೇನು ಮಾಹಿತಿ ಬೇಕು. ನಾನೇ ಖುದ್ದಾಗಿ ಮಾತಾಡಿದ್ದೇನೆ. ನಾನು ಯಾವುದೇ ಕಾರಣಕ್ಕೂ ಹೋಗೋದಿಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಹೇಳಿದರು.

ನೀತಿಗೆಟ್ಟವರು ಯಾರೆಂದು ಜನ ತೋರಿಸಿದ್ದಾರೆ: ‘ಮಾಜಿ ಸಚಿವ ಬಿ. ಶಿವರಾಂ ಹಾಗೂ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ನಡುವಿನ ವಾಕ್ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಬ್ಬರು ಕಾಂಗ್ರೆಸ್ ನಾಯಕರು. ಅವರ ಮಾತನ್ನ ನಾಯಕರು ಗಮನಸಿದ್ದಾರೆ. ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ಸಚಿವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಮಾಜಿ ಸಚಿವ ಬಿ ಶಿವರಾಮ್ ಮಾತಿಗೆ ತಿರುಗೇಟು ನೀಡಿ, ನನ್ನ ಮೇಲೆ ಯಾರದೂ ಏನಿಲ್ಲ ನನಗೆ ನಾನೆ. ನಾನು ಕೆಲಸ ಮಾಡ್ತಾ ಇಲ್ಲ ಎಂದರೆ ಅವರೇ ಮಾಡಿಕೊಳ್ಳಲಿ ಬಿಡಿ ಎಂದು ಕಿಡಿಕಾರಿದರು.

ಮೋದಿ ರಾಮನನ್ನು ಪೂಜಿಸಲ್ಲ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನಾವು ರಾಮ ಭಕ್ತರು. ನಾವು ಪೂಜೆ ಮಾಡೋದು ದಶರಥ ರಾಮನನ್ನು. ಮೋದಿ ರಾಮನನ್ನು ಅಲ್ಲ’ ಎನ್ನುವ ಮೂಲಕ ಮಾಜಿ ಪ್ರದಾನಿ ದೇವೇಗೌಡರ ಮಾತಿಗೆ ತಿರುಗೇಟು ನೀಡಿದರು.

ರಾಜ್ಯಕ್ಕೆ ಕಾವೇರಿ ನೀರು ಕೊಡಿಸಲು ಹೋರಾಡುತ್ತೇನೆ: ಎಚ್‌.ಡಿ.ದೇವೇಗೌಡ

‘ಮೋದಿ ರಾಮನ ಹೆಸರಯ ಹೇಳೋದು ಓಟಿಗೋಸ್ಕರ. ನನ್ನ ಕ್ಷೇತ್ರದಲ್ಲಿ ನಾನೇ ೨೦೦೪ ರಲ್ಲಿ ರಾಮ ಮಂದಿರ ಕಟ್ಟಿಸಿದ್ದೆ. ರಾಮನ ಪೂಜೆ ಮಾಡಲು ಯಾರಿಂದಲು ಹೇಳಿಸಿಕೊಳ್ಳಬೇಕಿಲ್ಲ. ಗಾಂದಿಯವರು ಹೇಳಿದ ರಾಮ ನಮ್ಮವನು, ಯಾವ ಹಿಂದುತ್ವವನ್ಮು ಗಾಂದಿಯವರು ಹೇಳಿದ್ರೊ ಆ ಹಿಂದುಗಳು ನಾವು. ಗೋಡ್ಸೆ ಹೇಳಿದ ರಾಮ ಅವರ ಹಿಂದುತ್ವದ ರಾಮ. ಅವರೆಲ್ಲಾ ಗೋಡ್ಸೆ ಹಿಂದುಗಳು, ನಾವೆಲ್ಲ ಗಾಂಧಿ ಹಿಂದೂಗಳು’ ಎಂದು ಟೀಕಿಸಿದರು.

Follow Us:
Download App:
  • android
  • ios