ರಮ್ಯಾ ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಲಿ ಎಂದ MLC ಚನ್ನರಾಜ ಹಟ್ಟಿಹೊಳಿ

• ಡಿಕೆಶಿ ವಿರುದ್ಧ ಕಿಡಿ ಕಾರಿದ್ದ ರಮ್ಯಾ ವಿರುದ್ಧ ಚನ್ನರಾಜ ಹಟ್ಟಿಹೊಳಿ ವಾಗ್ದಾಳಿ

• ರಾಜಕೀಯದಿಂದ ದೂರ ಉಳಿದ ರಮ್ಯಾ ಈಗೇಕೆ Statement ಕೊಡಬೇಕು?

• ಬಿಜೆಪಿ ತನ್ನ ವಿಫಲತೆ ಮುಚ್ಚಲು ಮತಾಂತರ ನಿಷೇಧ ಕಾಯ್ದೆ ತರ್ತಿದೆ ಎಂದ ಎಂಎಲ್‌ಸಿ ಚನ್ನರಾಜ
 

Its good to Ramya Stay away With Political  Analysis says MLC Channaraja Hattiholi san

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ.12 ): ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ (Minister of Higher Education C. N. Ashwath Narayan) ಹಾಗೂ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್  (Congress Leader MB Patil) ಭೇಟಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ (dk shivakumar) ಹೇಳಿಕೆಗೆ ರಮ್ಯಾ (Ramya) ಪ್ರತಿಕ್ರಿಯಿಸಿದ ವಿವಾದಕ್ಕೆ ಕಾಂಗ್ರೆಸ್ ಎಂಎಲ್‌ಸಿ, ಲಕ್ಷ್ಮೀ ಹೆಬ್ಬಾಳ್ಕರ್ (Congress MLC  Lakshmi Hebbalkar) ಸಹೋದರ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, 'ಮಾಜಿ ಸಂಸದೆ ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಉಳಿದವರು ಈಗ ಮತ್ತೆ ಏಕಾಏಕಿ ಬಂದು ಅವರೇಕೆ ಸ್ಟೇಟ್‌ಮೆಂಟ್ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ. 'ಎಂ.ಬಿ‌.ಪಾಟೀಲ್ ಸಾಹೇಬ್ರು‌ ಬಹಳ ದೊಡ್ಡವರು, ಡಿಕೆಶಿ ಸಾಹೇಬ್ರು ಬಹಳ ದೊಡ್ಡವರು. ವೈಯಕ್ತಿಕವಾಗಿ ನಾವು ಅನೇಕ ಸಾರಿ ಯಡಿಯೂರಪ್ಪ ಸಾಹೇಬ್ರ ಭೇಟಿಯಾಗಿದ್ದೇವೆ.‌ವೈಯಕ್ತಿಕವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಾಹೇಬರನ್ನು ಭೇಟಿಯಾಗಿದ್ದೇವೆ.‌ವೈಯಕ್ತಿಕ ಸಂಬಂಧ ಬೇರೆ ರಾಜಕಾರಣ ಸಂಬಂಧ ಬೇರೆ. ಎಂ.ಬಿ.ಪಾಟೀಲ್ ಅಶ್ವತ್ಥ್ ನಾರಾಯಣ್ ಭೇಟಿಯಾಗಿದ್ರಲ್ಲಿ ಏನು ತಪ್ಪಿಲ್ಲ.‌ ಅವರೆಲ್ಲ ಬಹಳ ದೊಡ್ಡವರು, ಭೇಟಿಯಾದ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನನ್ನ ಮಗ ಹಾಗೂ ಅವರ ಮನೆಯಲ್ಲಿರೋರಿಗೆ ಫ್ರೆಂಡ್ಶಿಪ್ ಇದೆ. ನಾವು ಅವರ ಮನೆಗೆ ಊಟಕ್ಕೆ ಹೋಗ್ತೇವೆ, ಅವರು ನಮ್ಮ ಮನೆಗೆ ಊಟಕ್ಕೆ ಬರ್ತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. 

ಅಶ್ವತ್ಥ್ ನಾರಾಯಣ್ - ಎಂ.ಬಿ.ಪಾಟೀಲ್ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸೋದು ಸಮಂಜಸವಲ್ಲ.‌ರಮ್ಯಾ ಅವರು ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಬೇಕು' ಎಂದು ರಮ್ಯಾ ವಿರುದ್ದ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ತನ್ನ ವಿಫಲತೆ ಮುಚ್ಚಿಕೊಳ್ಳಲು ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿದೆ':  ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, 'ಮತಾಂತರ ನಿಷೇಧ ಕಾಯ್ದೆ ಎನ್ನುವುದು ಅತ್ಯಂತ ಸೂಕ್ಷ್ಮ ವಿಚಾರ.‌ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.‌ಪಿಎಸ್ಐ ಹಗರಣ, ಗುತ್ತಿಗೆದಾರರಿಂದ ಶೇಕಡ 40ರಷ್ಟು ಕಮೀಷನ್ ಹೀಗೆ ಹಗರಣಗಳ ಸುಳಿಗೆ ಈ ಸರ್ಕಾರ ಸಿಲುಕಿದೆ. ತನ್ನ ವಿಫಲತೆ ಮುಚ್ಚಿಕೊಳ್ಳಲು ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿದೆ. ಬಿಜೆಪಿ ವರಿಷ್ಠರ ಕುಮ್ಮಕ್ಕಿನಿಂದ ಕೋಮುಸೌಹಾರ್ಧ ಹಾಳು ಮಾಡುವ ಪ್ರಯತ್ನಗಳು ನಡೆದಿವೆ. ತನ್ನೆಲ್ಲ ವಿಫಲತೆ ಮುಚ್ಚಿಕೊಳ್ಳಲು ಮತಾಂತರ ನಿಷೇಧ ಕಾಯ್ದೆಯ ಜಾರಿಗೆಗೆ ಸರ್ಕಾರ ಮುಂದಾಗಿದೆ.‌

SUGAR WAR: ಸಾಲು ಸಾಲು ಆರೋಪ ಇದ್ದರೂ ರಮೇಶ್ ಜಾರಕಿಹೊಳಿ ಮೌನವೇಕೆ?

ಬೆಳಗಾವಿ ಅಧಿವೇಶನ ವೇಳೆ ವಿಧಾನಸಭೆಯಲ್ಲಿ ಈ ಕಾಯ್ದೆ ಮಂಡನೆಯಾಗಿದೆ. ಪರಿಷತ್‌ಗೆ ಈ ಮಸೂದೆ ಕಳುಹಿಸದೇ ವಾಮಮಾರ್ಗದ ಕಾಯ್ದೆ ಜಾರಿಗೆಗೆ ಮುಂದಾಗಿದೆ. ಕಾನೂನು ಚೌಕಟ್ಟಿನಲ್ಲಿ ಸುಗ್ರಿವಾಜ್ಞೆಗೆ ಅವಕಾಶ ಇರಬಹುದು. ಆದರೆ ತಮ್ಮ ವಿಫಲತೆ ಮುಚ್ಚಿಕೊಳ್ಳಲು ತರಾತುರಿಯಲ್ಲಿ ಕಾಯ್ದೆ ಜಾರಿಗೊಳಿಸಲಾಗುತ್ತಿದೆ.

ಬಿಜೆಪಿ ಕೋಟೆ ಬೇಧಿಸಲು ರಾಜ್ಯಕ್ಕೆ ಪದೇಪದೇ ಎಂಟ್ರಿ ಕೊಡ್ತಿದ್ದಾರಾ ಶರದ್ ಪವಾರ್?

ನಾವು ಮತಾಂತರ ನಿಷೇಧ ಕಾಯ್ದೆ ಜಾರಿಯನ್ನು ಖಂಡಿಸುತ್ತೇವೆ. ಈ ಸಂಬಂಧ ಕಾಂಗ್ರೆಸ್ ಪರಿಷತ್ ಸದಸ್ಯರ ಸಭೆ ನಡೆಯಲಿದೆ.‌ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ ಬೆಂಗಳೂರಲ್ಲಿ ಸಭೆ ನಡೆಯಲಿದೆ. ಕಾಯ್ದೆಯ ಜಾರಿ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ಚರ್ಚಿಸುತ್ತೇವೆ' ಎಂದು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios