Karnataka budget 2023: 'ಇದು ಅಭಿವೃದ್ಧಿ ವಿರೋಧಿ ಬಜೆಟ್' ಎಮ್ಮೆಲ್ಸಿ ಶಶಿಲ್ ನಮೋಶಿ

ಸಿದ್ದರಾಮಯ್ಯ ಬಜೆಟ್‌ ಕೇಂದ್ರ ಸರ್ಕಾರದವರ ಮೇಲೆ ಗೂಬೆ ಕೂರಿಸುವುದು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿರುವ ಜನ ವಿರೋಧಿ ಬಜೆಟ್‌ ಎಂದು ಎಂಎಲ್‌ಸಿ ಶಶಿಲ್‌ ನಮೋಶಿ ಹೇಳಿದ್ದಾರೆ.

its an anti-development budget Shashil Namoshi's criticism abt karnataka budget 2023 rav

ಕಲಬುರಗಿ (ಜು.8) : ಸಿದ್ದರಾಮಯ್ಯ ಬಜೆಟ್‌ ಕೇಂದ್ರ ಸರ್ಕಾರದವರ ಮೇಲೆ ಗೂಬೆ ಕೂರಿಸುವುದು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿರುವ ಜನ ವಿರೋಧಿ ಬಜೆಟ್‌ ಎಂದು ಎಂಎಲ್‌ಸಿ ಶಶಿಲ್‌ ನಮೋಶಿ(Shashil namoshi MLC) ಹೇಳಿದ್ದಾರೆ.

ಸಿದ್ದರಾಮಯ್ಯ ಬಜೆಟ್‌(Siddaramaiah Budget) ಹೇಳಿಕೆ ನೀಡಿರುವ ಅವರು, ಹಿಂದಿನ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಹಾಗೂ ಆರ್ಥಿಕ ನಿರ್ವಹಣೆ ಸರಿಯಾಗಿ ಮಾಡಿಲ್ಲ ಎಂದು ಹೇಳುತ್ತಿದ್ದಾರೆ, ಆರ್ಥಿಕ ನಿರ್ವಹಣೆ ಸರಿಯಾಗಿ ನಿರ್ವಹಣೆಯಾಗದಿದ್ದರೆ ಜಿಎಸ್‌ಟಿಯಲ್ಲಿ ರಾಜ್ಯ ಮುಂದಿರುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.

 

Karnataka budget 2023: ಸಿದ್ದರಾಮಯ್ಯ ಬಜೆಟ್‌ನಲ್ಲಿ ಹುಬ್ಬಳ್ಳಿಗೆ ದಕ್ಕಿದ್ದೇನು?

ಚುಣಾವಣೆಯಲ್ಲಿ ಹೇಳಿದಂತೆ ಮಹಾದಾಯ ಯೋಜನೆಗೆ ಹಾಗೂ ಮೇಕೆದಾಟಿಗೆ ಅನುದಾನವನ್ನು ನೀಡಲಾಗುವುದೆಂದು ಹೇಳಿದ್ದ ಕಾಂಗ್ರೆಸ್‌ ಈ ಕೆಲಸ ಮರೆತಿದೆ. ರಾಜಕೀಯ ಕಾರಣಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೊಕ್‌ ನೀಡಿದ್ದು ಖಂಡನೀಯ ಎಂದಿದ್ದಾರೆ.

ಪಠ್ಯಕ್ರಮ ವಿಚಾರದಲ್ಲಿನ ಸರ್ಕಾರದ ನಿಲುವು ಸರಿಯಾಗಿಲ್ಲ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಂತೆ ರಾಜ್ಯ ಪಠ್ಯಕ್ರಮಗಳು ನಿರಂತರವಾಗಿ ಪರಾಮರ್ಶೆಗೊಳಗಾಗುತ್ತಿರುತ್ತದೆ. ಅದರ ಆಧಾರದಲ್ಲಿಯೇ ಪಠ್ಯವಸ್ತುಗಳು ರಚನೆಯಾಗಬೇಕಿರುತ್ತದೆ. ಇದನ್ನೆಲ್ಲ ಬಿಟ್ಟು ಕೋಮು ಆದಾರದಲ್ಲಿ ಪಟ್ಯ ಪರಾಮರ್ಶೆ ನಡೆಸುತ್ತಿರೋದು ಸರಿಯಲ್ಲವೆಂದೂ ನಮೋಶಿ ಹೇಳಿದ್ದಾರೆ.

 

ಹಫ್ತಾ ವಸೂಲಿಗೆ ಒತ್ತಡ: ಕಲಬುರಗಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಕಾನ್​ಸ್ಟೇಬಲ್​​ಗಳು

ಇಂದು ಮಂಡಿಸಲಾಗಿರುವ ಮುಂಗಡ ಪತ್ರ, ಬಜೆಟ್‌ ಭಾಷಣ ಎನ್ನುವುದಕ್ಕಿಂತ ಚುನಾವಣಾ ರಾಜಕೀಯ ಪ್ರಚಾರ ಭಾಷಣ. ತಮ್ಮ ಕೈಯಲ್ಲಿ ಆಗದೆ ಇದ್ದರು ಗ್ಯಾರಂಟಿ ಗಳನ್ನು ಘೋಷಣೆ ಮಾಡಿ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕುಡಿಸುವ ನೀಚ ರಾಜಕಾರಣ ಸಿದ್ದರಾಮಯ್ಯ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ರೇಷ್ಮೆ ಇಲಾಖೆಯ ಸರ್ವತೋಮುಖ ಅಭಿವೃದ್ದಿಗಾಗಿ ಮುಂಗಡವಾಗಿ 2000 ಕೋಟಿ ರು. ಗಳನ್ನು ಮೀಸಲಿಡುತ್ತೇವೆ ಎಂದು ಸುಳ್ಳು ಹೇಳಿ ಈಗ ಕೇವಲ 200-250 ಕೋಟಿ ರು. ಅನುದಾನವನ್ನು ಮೀಲಸಲಿಸಲಾಗಿದೆ. ಬಜೆಟ್‌ನಲ್ಲಿ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿದ್ದಾರೆ ಇದೊಂದು ಜನ ವಿರೋಧಿ ಬಜೆಟ್‌ ಎಂದು ನಮೋಶಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios