ಸಚಿವ ಖಂಡ್ರೆ ಆಪ್ತ ಮೋದಿಗೆ ಐಟಿ ಶಾಕ್, ಕಾರು ಸಹಿತ ಹಣ ಜಪ್ತಿ, ಬೆಂಗಳೂರಿನಿಂದ ರೈಲಲ್ಲಿ ಬಂತಾ 2 ಕೋಟಿ!?
ಸಚಿವ ಈಶ್ವರ್ ಖಂಡ್ರೆ ಆಪ್ತನಿಗೆ ಐಟಿ ಶಾಕ್ ಕಾರಿನಲ್ಲಿ ಸಾಗಿಸುತ್ತಿದ್ದ 2 ಕೋಟಿ ಹಣ ವಶಕ್ಕೆ, ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು.
ಕಲಬುರಗಿ (ಏ.27): ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಕುರುಡು ಕಾಂಚಾಣದ್ದೇ ಆಟ. ಇದೀಗ ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಭರ್ಜರಿ ಬೇಟೆ ಮಾಡಿದ್ದಾರೆ. ಕಾರು ಸಹಿತ ಬರೋಬ್ಬರಿ 2 ಕೋಟಿ ಹಣ ವಶಕ್ಕೆ ಪಡೆದಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಆಪ್ತನಿಗೆ ಸೇರಿದ ಹಣ ಎಂದು ತಿಳಿದುಬಂದಿದೆ.
ಮಾಜಿ ಮೇಯರ್ ಶರಣು ಮೋದಿ (ಶರಣು ಕುಮಾರ್ ಮೋದಿ) ಅವರಿಗೆ ಸೇರಿದೆ ಎನ್ನಲಾದ ಹಣವನ್ನು ವಶಕ್ಕೆ ಪಡೆದಿದ್ದು, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಐಟಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಐಟಿಯಿಂದ ಡಿಕೆಸು ಚಾಲಕನ ಮಗ-ಸೊಸೆಗೆ ಕಿರುಕುಳ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಶರಣು ಮೋದಿ ಸಚಿವ ಈಶ್ವರ್ ಖಂಡ್ರೆ ಆಪ್ತನಾಗಿದ್ದಾನೆ. ಸದ್ಯ ಕಲಬುರಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ಇರುವ ಆದಾಯ ತೆರಗೆ ಇಲಾಖೆಯ ಕಛೇರಿಗೆ ವಶಪಡಿಸಿಕೊಂಡ ಕಾರನ್ನು ತರಲಾಗಿದೆ.
ಈ ಹಿಂದೆ ಬೀದರ್ ಡಿಸಿಸಿ ಬ್ಯಾಂಕ್ ಮೇಲಿನ ಐಟಿ ದಾಳಿ ನಡೆದ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಎಂದು ಈಶ್ವರ್ ಖಂಡ್ರೆ ಪತ್ರಿಕಾ ಗೋಷ್ಠಿಯಲ್ಲಿ ಕಿಡಿಕಾರಿದ್ದರು. ಸಹೋದರ ಅಮರ್ ಖಂಡ್ರೆ ನೇತೃತ್ವದ ಬೀದರ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದಾಗಿತ್ತು.
ಹೆಲಿಕಾಪ್ಟರ್ ನಲ್ಲಿ ಜಾರಿಬಿದ್ದ ಮಮತಾ ಬ್ಯಾನರ್ಜಿ, ಮತ್ತೆ ಗಾಯಗೊಂಡ ದೀದಿ!
ಸದ್ಯ ಇಂದಿನ ಐಟಿ ದಾಳಿಯಲ್ಲಿ ಶರಣು ಮೋದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಹಣ ಬೆಂಗಳೂರಿನಿಂದ ರೈಲಿನ ಮುಖಾಂತರ ಬಂತಾ ಎಂಬ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ಐಟಿ ದಾಳಿಯಾಗಿದ್ದು, ರೈಲು ನಿಲ್ದಾಣದಿಂದ ಕಾರಿನಲ್ಲಿ ಹಣವನ್ನು ತುಂಬಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಈ ದಾಳಿಯಾಗಿದೆ. ಆ ಕಾರಿನ ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಸದ್ಯ ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
ಈ ಹಣವನ್ನು ಚುನಾವಣಾ ಅಕ್ರಮಕ್ಕೆ ಬಳಕೆಗಾಗಿ ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಅದಾಗ್ಯೂ ಹಣದ ಮೂಲ, ಯಾವ ಉದ್ದೇಶಕ್ಕೆ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ವ್ಯಾಪ್ತಿಯ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಹಿನ್ನೆಲೆಯಲ್ಲಿ ಇಂದು ನಡೆದಿರುವ ಐಟಿ ದಾಳಿ, ಮಹತ್ವದ್ದಾಗಿದೆ.