ಸಿಪಿಐ ಮುಖಂಡ ಕನ್ಹಾಯ್ಯಾ ಕುಮಾರ್ ಬಿಹಾರ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಇದು ಏಕಪಕ್ಷೀಯ ಚುನಾವಣೆಯಲ್ಲ ಈಗ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹೆಚ್ಚಿನ ಕೋಪವಿದೆ ಎಂದಿದ್ದಾರೆ.

ಇದು ಏಕಪಕ್ಷೀಯ ಚುನಾವಣೆಯಾಗಲಿದೆ ಎಂಬ ಮಾತು ಇದೆ. ಎನ್‌ಡಿಎಗೆ ಒಂದು ಅಂಚಿದೆ. ಇಲ್ಲಿ ಯಾವುದೇ ಸ್ಪರ್ಧೆಯಿಲ್ಲ ಎಂಬ ಮಾತಿತ್ತು. ಆದರೆ ಪ್ರಚಾರ ಜೋರಾಗಿ ನಡೆಯುತ್ತಿರುವಾಗ ಆ ಗ್ರಹಿಕೆ ತಪ್ಪಾಗಿದೆ. ಇದು ಏಕಪಕ್ಷೀಯ ಚುನಾವಣೆಯಲ್ಲ ಈಗ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹೆಚ್ಚಿನ ಕೋಪವಿದೆ ಎಂದಿದ್ದಾರೆ.

ಕುಲಭೂಷಣ್ ಜಾಧವ್ ತೀರ್ಪು ಪರಿಶೀಲನೆಗೆ ಪಾಕ್‌ ಸಂಸತ್ತಿನಲ್ಲಿ ಅನುಮೋದನೆ

ಬಿಹಾರದ ವಿಚಾರಕ್ಕೆ ಬಂದರೆ 15 ವರ್ಷದಿಂದ ಬಿಜೆಪಿ ಪರೋಕ್ಷವಾಗಿ ಆಳಿಕೊಂಡು ಬಂದಿದೆ. ನಿತೀಶ್ ಇದರ ಮುಖ ಅಷ್ಟೇ. ಆದರೆ ಬಿಜೆಪಿ ಅದರ ಮತೀಯ ಸಿದ್ಧಾಂತ ಹೇರುತ್ತಾ ಬಂದಿದೆ ಎಂದಿದ್ದಾರೆ.

ಸದ್ಯ ಕನ್ಹಯ್ಯಾ ಅವರ ರಾಜಕೀಯ ಚಟುವಟಿಕೆಗೆ ಬಗ್ಗೆ ಪ್ರತಿಕ್ರಿಯಿಸಿ, ನಾನ್ಯಾವಾಗಲೂ ಲೋ ಪ್ರೊಫೈಲ್ ವ್ಯಕ್ತಿ. ನನಗೆ ರಾಜಕೀಯ ಕಮಿಟ್‌ಮೆಂಟ್‌ಗಳಿವೆ. ನಾನು ಅದಕ್ಕಾಗಿ ಹೋರಾಡುತ್ತೇನೆ. ನನಗೆ ಪಕ್ಷ ಕೊಡುವ ಜವಬ್ದಾರಿ ನಿರ್ವಹಿಸುತ್ತೇನೆ ಎಂದಿದ್ದಾರೆ.