Asianet Suvarna News Asianet Suvarna News

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಬರೋದು ಖಚಿತ: ಸಿದ್ದರಾಮಯ್ಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರೋದ ಗ್ಯಾರೆಂಟಿ. ಆಗ ಜಾನಪದ ಕಲೆಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. 

It is certain that our Government will come in the Upcoming Assembly Elections says Siddaramaiah gvd
Author
First Published Jan 28, 2023, 3:20 AM IST

ಮೈಸೂರು (ಜ.28): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರೋದ ಗ್ಯಾರೆಂಟಿ. ಆಗ ಜಾನಪದ ಕಲೆಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್‌ ಶುಕ್ರವಾರ ಆಯೋಜಿಸಿದ್ದ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶಗಳು ಕಲೆಗಳ ನೆಲೆಬೀಡಾಗಿದೆ. 

ಪ್ರತಿಯೊಬ್ಬರ ಜೀವನದಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಗ್ರಾಮೀಣರ ಮನರಂಜನೆಯಾದ ಕಲೆಯನ್ನು ಗ್ರಾಮೀಣ ಜನರೇ ಶತ ಶತಮಾನಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಆದರೆ ಈಗ ಜಾನಪದವನ್ನು ಕಲಿಯುವವರು ಮೊದಲಿನಂತೆ ಹಳ್ಳಿಗಳಲ್ಲಿ ಯಾರೂ ಇಲ್ಲ. ಕಲಿಸುವವರೂ ಸಿಗುತ್ತಿಲ್ಲ. ಹೀಗಾಗಿ, ಓದಿನ ಜೊತೆಗೆ ಇಷ್ಟದ ಕಲೆ ಕಲಿಯಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ವೈವಿಧ್ಯಮಯ ಜಾನಪದ ಕಲಾಪ್ರಕಾರಗಳು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಇದೆ. ಆ ಜಾನಪದ ಕಲೆಯನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಿದೆ. 

ರಾಜಕಾರಣದಲ್ಲಿ ನಿಯತ್ತು ಮತ್ತು ನೀತಿ ಒಂದೇ ಇರಬೇಕು: ಸಿದ್ದುಗೆ ಟಾಂಗ್‌ ಕೊಟ್ಟ ಸಿ.ಟಿ.ರವಿ

ಸಿದ್ದರಾಮಯ್ಯನ ಹುಂಡಿಯಲ್ಲಿ ನಂಜೇಗೌಡ ಎಂಬವರು 30 ಮಂದಿಗೆ ವೀರಮಕ್ಕಳ ಕುಣಿತ ಕಲಿಸಿದರು. ಅವರೇ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಅವರು ಇಲ್ಲದಿದ್ದರೆ ಸರ್ಕಾರಿ ಶಾಲೆಗೆ ನಾನು ಸೇರುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗುತ್ತಿರಲೂ ಇಲ್ಲ. ನನಗೆ ಗುರುಗಳಾಗಿದ್ದ ನಂಜೇಗೌಡ, ರಾಜಪ್ಪ ಮತ್ತು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರನ್ನು ಮರೆಯುವಂತಿಲ್ಲ. ಇದು ನನ್ನ ಗುರುಪರಂಪರೆ ಎಂದರು. ಕಾರ್ಯಕ್ರಮದಲ್ಲಿ ತೋಟೇಗೌಡ ಸಿದ್ಧನಕೊಪ್ಪಲು ಅವರ ಸೃಷ್ಟಿ, ಮೋಹನ್‌ ಪಾಳೇಗಾರ ಅವರ ಮದರಂಗಿ ಜಾನಪದ ಕಥೆಗಳು ಹಾಗೂ ವೆಂಕಟಗಿರಿ ಠಾವುಗೋಡ್ಲು ಅವರ ಅಪರೂಪದ ಒಡವೆ ಕೃತಿ ಬಿಡುಗಡೆಗೊಳಿಸಲಾಯಿತು.

ಜಾನಪದ ಪ್ರಪಂಚ ಪ್ರಶಸ್ತಿಯನ್ನು ಪ್ರೊ. ಅಂಬಳಿಕೆ ಹಿರಿಯಣ್ಣ (ಶಿವಮೊಗ್ಗ), ಪ್ರೊ. ನಂಜಯ್ಯ ಹೊಂಗನೂರು (ಮೈಸೂರು), ಡಾ.ಸಿ.ಬಿ. ಹೊನ್ನು ಸಿದ್ಧಾರ್ಥ (ಬೆಂಗಳೂರು ನಗರ), ಡಾ. ಕುರುವ ಬಸವರಾಜ್‌ (ರಾಮನಗರ). ಡಾ. ಚಲುವರಾಜು (ವಿಜಯನಗರ), ಕಂಸಾಳೆ ಮಾದೇವ (ಮೈಸೂರು), ಸೋಬಾನೆ ಕೃಷ್ಣೇಗೌಡ (ಮಂಡ್ಯ), ತಾರಾಬಾಯಿ (ಕಲಬುರಗಿ), ನಂದಿಧ್ವಜ ಮಹಾದೇವಪ್ಪ (ಮೈಸೂರು), ಬಸವರಾಜ್‌ (ಚಾಮರಾಜನಗರ), ಬಸವರಾಜ್‌ ನೆಲದಾಳ್‌ (ರಾಯಚೂರು), ಮೌಲಾಸಾಬ ನಾನಾಸಾನಬ ಜಹಗೀರ್ದಾರ (ವಿಜಯಪುರ), ಸುಳ್ಳಿಮಾಡ ಗೌರಿ ನಂಜಪ್ಪ (ಕೊಡಗು), ಕನರಾಡಿ ವಾದಿರಾಹ ಭಟ್‌ (ಉಡುಪಿ), ಜಾಲಮರ ಸುಬ್ರಾಯ (ಚಿಕ್ಕಮಗಳೂರು) ದೊಡ್ಡಕ್ಕ (ತುಮಕೂರು), ಮುನಿವೆಂಕಟಮ್ಮ (ಕೋಲಾರ), ಮಲ್ಲೇಶಪ್ಪ ಬಸವಣ್ಣೆಪ್ಪ ಜೋಗಿ (ಉತ್ತರ ಕನ್ನಡ), ಭೀಮಶಿ ಘಂಟಿ ಸಾ.ಶಿರೂರ (ಬಾಗಲಕೋಟೆ), ಸುರೇಶ್‌ ಶೆಟ್ಟಿಅಯ್ಯಾಡಿ (ಮಹಾರಾಷ್ಟ್ರ) ಅವರಿಗೆ ಪ್ರದಾನ ಮಾಡಲಾಯಿತು.

ನಾನು ಪಕ್ಷಾಂತರಿಯಾದರೆ ಏಳು ಪಕ್ಷ ಬದಲಿಸಿರುವ ಸಿದ್ದರಾಮಯ್ಯ ಯಾರು?: ಪ್ರಮೋದ್ ಮಧ‍್ವರಾಜ್

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕ ಅನಿಲ್‌ ಚಿಕ್ಕಮಾದು, ಪರಿಷತ್‌ ಅಧ್ಯಕ್ಷ ಎಸ್‌. ಬಾಲಾಜಿ, ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಎಚ್‌. ಪ್ರಕಾಶ್‌, ಜಿಪಂ ಮಾಜಿ ಅಧ್ಯಕ್ಷ ಕೆ. ಮರಿಗೌಡ, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ. ಎಚ್‌.ಡಿ. ಕೋಟೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಬಿ. ಆನಂದ್‌, ಕಜಾಪದ ಕನಕತಾರ. ಕಾರ್ಯದರ್ಶಿ ವಿಠಲ್‌ ಪೆರುಮನೆ, ವಿಭಾಗೀಯ ಸಂಚಾಲಕಿ ಕಾವೇರಿ ಪ್ರಕಾಶ್‌, ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಮೊದಲಾದವರು ಇದ್ದರು.

Follow Us:
Download App:
  • android
  • ios