ಕೇಂದ್ರ ಸರ್ಕಾರದ ಬಳಿ ಅಕ್ಕಿ ಸ್ಟಾಕ್ ಇದೆ ಎನ್ನುವುದು ಸುಳ್ಳು: ಪ್ರಲ್ಹಾದ್ ಜೋಶಿ
ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಗ್ಯಾರಂಟಿ ವಿಚಾರವಾಗಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳುವುದೇ ಅದರ ಜನ್ಮ ಸಿದ್ಧ ಹಕ್ಕು. ಅದರ ರಕ್ತದಲ್ಲೇ ಸುಳ್ಳು ಹೇಳುವುದು ಬಂದಿದೆ. ಬಸ್‌ನಲ್ಲಿ ಮಹಿಳೆಯರು ಫ್ರೀ ಓಡಾಡುತ್ತಿರುವುದನ್ನು ಬಿಟ್ಟರೆ ಉಳಿದ ಎಲ್ಲ ಗ್ಯಾರಂಟಿಗಳು ವಿಫಲವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಹುಬ್ಬಳ್ಳಿ (ಜು.02): ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಗ್ಯಾರಂಟಿ ವಿಚಾರವಾಗಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳುವುದೇ ಅದರ ಜನ್ಮ ಸಿದ್ಧ ಹಕ್ಕು. ಅದರ ರಕ್ತದಲ್ಲೇ ಸುಳ್ಳು ಹೇಳುವುದು ಬಂದಿದೆ. ಬಸ್‌ನಲ್ಲಿ ಮಹಿಳೆಯರು ಫ್ರೀ ಓಡಾಡುತ್ತಿರುವುದನ್ನು ಬಿಟ್ಟರೆ ಉಳಿದ ಎಲ್ಲ ಗ್ಯಾರಂಟಿಗಳು ವಿಫಲವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ನಾವು ಕಾನೂನು ಮಾಡಿದ್ದೇವೆ: ವಿದ್ಯುತ್ ದರ ಏರಿಕೆ ವಾಪಸ್ ತೆಗೆದುಕೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರವೇ ಸುಪ್ರೀಂ. ಇದನ್ನು ಅರ್ಥಮಾಡಿಕೊಂಡು ದರ ಏರಿಕೆ ವಾಪಸ್ ಪಡೆಯಬೇಕಷ್ಟೇ ಎಂದರು. ಕಾಂಗ್ರೆಸ್ ಜನರಿಗೆ ಮೋಸ, ವಂಚನೆ ಮಾಡುತ್ತಿದೆ. ಇದರ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಜು. 4ರಂದು ಬೆಂಗಳೂರು ಗಾಂಧಿ ಪುತ್ಥಳಿ ಬಳಿ ಹೋರಾಟ ಮಾಡಲಾಗುವುದು ಎಂದ ಅವರು, ಸಿದ್ದರಾಮಯ್ಯ, ಮುನಿಯಪ್ಪ ಇದೇ ತಿಂಗಳು ಅಕ್ಕಿ ಜೊತೆ ದುಡ್ಡು ಕೊಡುತ್ತೇನೆ ಎಂದಿದ್ದರು. ಸಿದ್ದರಾಮಯ್ಯ ಮುನಿಯಪ್ಪ ಸುಳ್ಳ ಹೇಳೋದು ನಿಲ್ಲಿಸಬೇಕು. ನಾವು ಇದನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ ಎಂದು ಗುಡುಗಿದರು.
ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದುಗೊಳಿಸಿಲಿ: ಕೋಡಿಹಳ್ಳಿ ಚಂದ್ರಶೇಖರ್
ಲೋ ಲೇವಲ್ ಭಾಷೆ: ಪಂಚೆ ವಿಚಾರವಾಗಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದಕ್ಕೆ ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಇದು ಕಾಂಗ್ರೆಸ್‌ನ ಲೋ ಲೆವಲ್ ಭಾಷೆ. ಇದಕ್ಕೆ ನಮ್ಮ ಪಕ್ಷದ ಬೇರೆ ಬೇರೆಯವರು ಮಾತನಾಡಿದ್ದಾರೆ. ನಾನು ಕೇಂದ್ರ ಸರ್ಕಾರದ ಮಂತ್ರಿಯಾಗಿ ಆ ಭಾಷೆ ಬಳಸಿಲ್ಲ; ಬಳಸುವುದೂ ಇಲ್ಲ ಎಂದರು. ಸಿದ್ದರಾಮಯ್ಯ ಲುಂಗಿ ಲೀಡರ್, ಅದನ್ನು ಅವರು ಮರೆಯಬಾರದು. ನಾನು ಸಭ್ಯತೆಯಿಂದ ಮಾತನಾಡುತ್ತಿದ್ದೇನೆ. ಅಸಭ್ಯ ಭಾಷೆ ಬಳಸುವುದು ಸರಿಯಲ್ಲ. ನಮಗೂ ಆ ಭಾಷೆ ಬರುತ್ತದೆ. ಜನರೇ ಇದಕ್ಕೆ ಉತ್ತರ ಕೊಡುತ್ತಾರೆ. ಎರಡ್ಮೂರು ದಿನಗಳಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದರು.
ರಾಜ್ಯ ಸರ್ಕಾರದ ಬುದ್ಧಿಯೇ ಹ್ಯಾಕ್ ಆಗಿದೆ: ಕೇಂದ್ರದ ಬಳಿ ಅಕ್ಕಿ ಸ್ಟಾಕ್ ಇದೆ ಎನ್ನುವುದು ಶುದ್ಧ ಸುಳ್ಳು. ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ಬುದ್ಧಿ ಹ್ಯಾಕ್ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಚುನಾವಣೆ ವೇಳೆ ಭಾಷಣದಲ್ಲಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಕೇಂದ್ರ ಸರ್ಕಾರ ಕೊಡುವ ಅಕ್ಕಿ ಕುರಿತು ಪ್ರಸ್ತಾಪಿಸಲಿಲ್ಲ. ಕಾಂಗ್ರೆಸ್‌ನವರು ಮೊದಲು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಿ. ಕಾಂಗ್ರೆಸ್‌ನ ನಡವಳಿಕೆ ಕುರಿತು ಜನ ಈಗಾಗಲೇ ಭ್ರಮನಿರಸನಗೊಂಡಿದ್ದಾರೆ ಎಂದರು.
ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕೆ ಪ್ರಥಮ ಆದ್ಯತೆ: ಸಚಿವ ಮಂಕಾಳು ವೈದ್ಯ
ಅಕ್ಕಿ ಕೊಡುತ್ತಿರುವುದು ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರ. ಆದರೆ, ಕೆಲವರು ಯುಪಿಎ ಸರ್ಕಾರ ಕಾನೂನು ಮಾಡಿತ್ತು ಎಂದು ಹೇಳುತ್ತಿದ್ದಾರೆ. ಆದರೆ, ಕಾನೂನನ್ನು ಜಾರಿಗೆ ತರಲು ಅವರಿಗೆ ಆಗಿರಲಿಲ್ಲ. ನಾವು ಕಾನೂನನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ದೇಶದ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ದೇಶದಲ್ಲಿ ಬರಗಾಲ ಆವರಿಸುತ್ತಿದೆ. ಭತ್ತ ಉತ್ಪಾದನೆಯಲ್ಲಿ ಕಡಿತ ಆಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೂ, ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ ಎಂದರು.