ಈ ಬಗ್ಗೆ ಸರ್ಕಾರ ಐದು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಕೂಡಲೇ ಈ ಸಾವಿರಾರು ಕೋಟಿ ರು. ಅವ್ಯವಹಾರ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್ ಹಾಗೂ ರೋಹನ್ ಗುಪ್ತಾ.
ಬೆಂಗಳೂರು(ಏ.13): ರಾಜ್ಯದ ಸಹಕಾರಿ ಬ್ಯಾಂಕುಗಳು ಹಾಗೂ ಸಹಕಾರಿ ಸೊಸೈಟಿಗಳಲ್ಲಿ ನಡೆದಿರುವ .1000 ಕೋಟಿಗಳಿಗೂ ಅಧಿಕ ಮೊತ್ತದ ಅಕ್ರಮ ವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇನ್ನೂ ವಹಿಸಿಲ್ಲವೇಕೆ? ಬಿಜೆಪಿ ಪ್ರಾಯೋಜಕತ್ವದಲ್ಲೇ ಈ ಅವ್ಯವಹಾರ ನಡೆದಿದೆಯಾ ಎಂದು ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನಿಸಿದೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್ ಹಾಗೂ ರೋಹನ್ ಗುಪ್ತಾ ಅವರು, ಈ ಬಗ್ಗೆ ಸರ್ಕಾರ ಐದು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಕೂಡಲೇ ಈ ಸಾವಿರಾರು ಕೋಟಿ ರು. ಅವ್ಯವಹಾರ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಹಾವೇರಿ: ಆನ್‌ಲೈನ್ ಗೇಮ್ ಆಡಲು ಬ್ಯಾಂಕ್ ಹಣ ದುರ್ಬಳಕೆ ಮಾಡಿಕೊಂಡ ಡೆಪ್ಯುಟಿ ಮ್ಯಾನೇಜರ್..!
ಗೌರವ್ ವಲ್ಲಭ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕರ್ನಾಟಕದ ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ಅಕ್ರಮ ವ್ಯವಹಾರ ನಡೆದಿದೆ. ಇದನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಬೆಳಕು ಚೆಲ್ಲಿದೆ. ಈ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕಳೆದ ಫೆಬ್ರವರಿಯಲ್ಲೇ ಹೇಳಿದ್ದರು.
ಆದರೆ, ಈ ಆಶ್ವಾಸನೆ ನೀಡಿ ಎರಡು ತಿಂಗಳಾದರೂ ತನಿಖೆ ಹಸ್ತಾಂತರವಾಗಿಲ್ಲ ಯಾಕೆ? ಒಂದು ವೇಳೆ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದರೆ ಯಾವ ಹಂತದಲ್ಲಿದೆ? ಎಂದು ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಸಹಕಾರಿ ಬ್ಯಾಂಕು ಹಾಗೂ ಸೊಸೈಟಿಗಳಲ್ಲಿ ಚೆಕ್ ಹಾಗೂ ಡಿಡಿ ನಗದೀಕರಣವಾಗುವಾಗ ಕೆವೈಸಿ ನಿಯಮಾವಳಿಗಳ ಪಾಲನೆಯಾಗಿಲ್ಲ. ಗುತ್ತಿಗೆದಾರರು ಪೂರ್ಣಗೊಂಡ ಕಾಮಗಾರಿಗೆ ಸರ್ಕಾರದಿಂದ ಚೆಕ್, ಡಿಡಿ ನೀಡಿ ಅದನ್ನು ಸಹಕಾರಿ ಸೊಸೈಟಿ ಮೂಲಕ ಪಡೆದು ನಗದು ಹಣ ನೀಡಿದೆ. ಈ ಹಣವನ್ನು ಯಾವ ಕಾರಣಕ್ಕೆ ಬೇಕಾದರೂ ಬಳಸಬಹುದು. ಇದು ಕಪ್ಪು ಹಣವಾಗಿದ್ದು, ತೆರಿಗೆ ಪಾವತಿಯಾಗದ ಹಣವಾಗಿದೆ. ಇಷ್ಟೆಲ್ಲಾ ಅಕ್ರಮದ ಆರೋಪಗಳ ಬಗ್ಗೆ ಸರ್ಕಾರ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದರು.
