ಡೆಪ್ಯುಟಿ ಮ್ಯಾನೇಜರ್ ವಿರೇಶ ಕಾಶಿಮಠ ಕಳೆದ ಆರು ತಿಂಗಳಿನಿಂದ ಬ್ಯಾಂಕ್‌ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ವಿರೇಶ ಕಾಶಿಮಠ 2.36 ಕೋಟಿ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. 

ಹಾವೇರಿ(ಫೆ.25): ಹಾವೇರಿ ನಗರದ ಐಸಿಐಸಿಐ ಬ್ಯಾಂಕ್‌ನಲ್ಲಿ 2.36 ಕೋಟಿ ಅವ್ಯವಹಾರ ನಡೆದಿದೆ ಅಂತ ಆರೋಪವೊಂದು ಕೇಳಿ ಬಂದಿದೆ. ಬ್ಯಾಂಕ್ ಹಣ ಬಳಸಿಕೊಂಡು ಡೆಪ್ಯುಟಿ ಮ್ಯಾನೇಜರ್ ಆನ್‌ಲೈನ್‌ ಗೇಮ್ ಆಡುತ್ತಿದ್ದರು ಅಂತ ಆರೋಪಿಸಲಾಗಗಿದೆ. 

ಡೆಪ್ಯುಟಿ ಮ್ಯಾನೇಜರ್ ವಿರೇಶ ಕಾಶಿಮಠ ಕಳೆದ ಆರು ತಿಂಗಳಿನಿಂದ ಬ್ಯಾಂಕ್‌ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ವಿರೇಶ ಕಾಶಿಮಠ 2.36 ಕೋಟಿ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. 

ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

ಡೆಪ್ಯುಟಿ ಮ್ಯಾನೇಜರ್ ವಿರೇಶ ಕಾಶಿಮಠ ಸ್ನೇಹಿತರು, ಸಂಬಂಧಿಕರ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದ್ದಾರೆ. ಬೇರೆ ಬೇರೆ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಪ್ಯುಟಿ ಮ್ಯಾನೇಜರ್ ವಿರೇಶ ಕಾಶಿಮಠನನ್ನ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ತನಿಖೆಗೆ ಪ್ರಕರಣ ವರ್ಗಾವಣೆಯಾಗಿದೆ.