ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ತಾರಾ ಮಂಡ್ಯ ಸಂಸದೆ ಸುಮಲತಾ.!?. 

ಮಂಡ್ಯ(ಡಿ.29): ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ತಾರಾ ಮಂಡ್ಯ ಸಂಸದೆ ಸುಮಲತಾ.!?. ಇಂತಹದೊಂದು ಪ್ರಶ್ನೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಹೌದು, ಬಿಜೆಪಿ ಫ್ಲೆಕ್ಸ್‌ಗಳಲ್ಲಿ ಸುಮಲತಾ ಭಾವಚಿತ್ರವಿದೆ. ನಾಳೆ ಬಿಜೆಪಿ ಬೃಹತ್ ಸಮಾವೇಶದ ಫ್ಲೆಕ್ಸ್‌ನಲ್ಲಿ ಸುಮಲತಾ ಅಂಬರೀಷ್‌ ಭಾವಚಿತ್ರವಿದ್ದು ಅಮಿತ್ ಶಾಗೆ ಸ್ವಾಗತದ ಫ್ಲೆಕ್ಸ್‌ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಫೋಟೋಇದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಮುಖಂಡರೊಂದಿಗೆ ಸಂಸದೆ ಸುಮಲತಾ ಭಾವಚಿತ್ರ ಇದ್ದು, ಸಂಸದೆ ಸುಮಲತಾ ಅವರ ಆಪ್ತ ಸಚ್ಚಿದಾನಂದ ಸ್ವಾಗತ ಕೋರಿರುವ ಫ್ಲೆಕ್ಸ್‌ನಲ್ಲಿ ಸುಮಲತಾ ಪೋಟೋ ಹಾಕಲಾಗಿದೆ. 

KARNATAKA BJP: ಅಭ್ಯರ್ಥಿ ಆಯ್ಕೆ ಅಧಿಕಾರ ಸಚಿವರಿಗಿಲ್ಲ

ಸಂಸದೆ ಸುಮಲತಾ ಅವರ ಆಪ್ತ ಇಂಡವಾಳು ಸಚ್ಚಿದಾನಂದ ಈಗಾಗಲೇ ಬಿಜೆಪಿ ಸೇರಿದ್ದಾರೆ. ಸುಮಲತಾ ಅನುಮತಿ ಪಡೆದೆ ಬಿಜೆಪಿ ಸೇರಿರುವುದಾಗಿ ಸಚ್ಚಿದಾನಂದ ಹೇಳಿದ್ದರು. ಇದೀಗ ಆಪ್ತ ಕೋರಿರುವ ಫ್ಲೆಕ್ಸ್‌ನಲ್ಲಿ ಸುಮಲತಾ ಅವರ ಫೋಟೋ ರಾರಾಜಿಸುತ್ತಿದೆ.