ವಿಜಯೋತ್ಸವ ಮೆರವಣಿಗೆಯಲ್ಲಿ ಭಾರತ್‌ ಮಾತಾಕೀ ಜೈ ಅನ್ನೋದು ಅಪರಾಧವಾ? ಆ ಕಾರಣಕ್ಕೆ ಮತಾಂಧರು ಚೂರಿ ಇರಿದಿದ್ದಾರೆ. ಆದರೆ ಮರುದಿನ ಕೆಲವರು ಪಾಕಿಸ್ತಾನದ ಕುನ್ನಿಗಳೇ ಅಂತ ಘೋಷಣೆ ಕೂಗಿದ್ದಾರೆಂದು ದೂರು ನೀಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. 

ಮಂಗಳೂರು (ಜೂ.16): ವಿಜಯೋತ್ಸವ ಮೆರವಣಿಗೆಯಲ್ಲಿ ಭಾರತ್‌ ಮಾತಾಕೀ ಜೈ ಅನ್ನೋದು ಅಪರಾಧವಾ? ಆ ಕಾರಣಕ್ಕೆ ಮತಾಂಧರು ಚೂರಿ ಇರಿದಿದ್ದಾರೆ. ಆದರೆ ಮರುದಿನ ಕೆಲವರು ಪಾಕಿಸ್ತಾನದ ಕುನ್ನಿಗಳೇ ಅಂತ ಘೋಷಣೆ ಕೂಗಿದ್ದಾರೆಂದು ದೂರು ನೀಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ಬೋಳಿಯಾರ್‌ನಲ್ಲಿ ನಡೆದ ಬಿಜೆಪಿ ವಿಜಯೋತ್ಸವದ ವೇಳೆ ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು. 

ಮಂಗಳೂರು ಹೊರವಲಯದ ಬೋಳಿಯಾರ್‌ನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರು ‘ಭಾರತ್‌ ಮಾತಾಕೀ ಜೈ’ ಎಂದಾಗ ಅಲ್ಲಿನ ಮಸೀದಿ ಬಳಿಯಿದ್ದವರು ‘ಚೆಡ್ಡಿಗಳೇ ತೊಲಗಿ’ ಎಂದು ಘೋಷಣೆ ಕೂಗಿ ಅಟ್ಟಿಸಿಕೊಂಡು ಬಂದು ಗಂಭೀರ ಹಲ್ಲೆ ಮಾಡಿದ್ದಾರೆ. ಎಲ್ಲಿಯೂ ‘ಪಾಕಿಸ್ತಾನದ ಕುನ್ನಿಗಳೇ’ ಎಂದು ಯಾರೂ ಹೇಳಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೂ ಇಲ್ಲಿನವರು ಯಾಕೆ ಪ್ರಚೋದನೆಗೆ ಒಳಗಾಗಬೇಕು? ಎಂದು ಪ್ರಶ್ನಿಸಿದರು. ಭಾರತ ಮಾತೆಯ ಮಕ್ಕಳಿಗೆ ಈ ಮಾತಿನಿಂದ ಬೇಸರವಾಗದು. ಪಾಕ್‌ಗೆ ಹುಟ್ಟಿದವರಿಗೆ ಮಾತ್ರ ಬೇಸರ ಆಗಬಹುದು. ಅಂತವರನ್ನು ಪಾಕ್‌ಗೆ ಕಳುಹಿಸಬೇಕು, ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು

ಮತ ಬ್ಯಾಂಕ್‌, ಓಲೈಕೆ ನೀತಿ ದೇಶದ ಭದ್ರತೆಗೆ ಅಪಾಯ: ಸರ್ಕಾರದ ಮತ ಬ್ಯಾಂಕ್‌ ಮತ್ತು ಓಲೈಕೆ ನೀತಿಗಳೇ ದೇಶದ ಭದ್ರತೆ ಅಪಾಯಕಾರಿಯಾಗಿದೆ. ಲವ್‌ ಜಿಹಾದ್‌ ಮತ್ತು ವೋಟ್‌ ಜಿಹಾದ್‌ಗಳು ಭಾರತದ ಸನಾತನ ಧರ್ಮ, ಭಾರತೀಯತೆ ಮತ್ತು ಸಂವಿಧಾನದ ಆಶಯವನ್ನು ಮುಗಿಸುವ ಸಂಚು ನಡೆಸುತ್ತಿವೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ಬೋಳಿಯಾರ್‌ನಲ್ಲಿ ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ ಬಳಿಕ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡದ ಇಬ್ಬರಿಗೆ ಯುವ, ಬಾಲ ಸಾಹಿತ್ಯ ಅಕಾಡೆಮಿ ಪುರಸ್ಕಾರ: ಯಾರಿವರು?

ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳ ನೀತಿ ಸಂವಿಧಾನವನ್ನು ಉಳಿಸುವುದಿಲ್ಲ. ರಸ್ತೆಯಲ್ಲೇ ನಮಾಜ್‌ ಮಾಡಿದವರ ಕೇಸ್ ವಾಪಸ್‌ ಪಡೆಯುವುದು, ಅದನ್ನು ಪ್ರಶ್ನಿಸಿದವರ ಮೇಲೆ ಕೇಸ್‌ ಹಾಕುವ ಮೂಲಕ ಜಾತೀಯತೆ, ಭಯೋತ್ಪಾದಕತೆಯ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇದು ಮತಾಂಧರ ಪರವಾಗಿ ಸರ್ಕಾರ ಇರುವುದನ್ನು ತೋರಿಸುತ್ತದೆ, ಅಲ್ಲದೆ ಪೊಲೀಸ್‌ ಇಲಾಖೆಯನ್ನು ದುರ್ಬಲಗೊಳಿಸುವ ಹುನ್ನಾರ ಅಡಗಿದೆ. ಮತಾಂಧರು, ದೇಶದ್ರೋಹಿಗಳ ಬಗ್ಗೆ ಸರ್ಕಾರ ಮೃದು ಧೋರಣೆ ಹೊಂದಿರುವುದನ್ನು ಇದು ಸೂಚಿಸುತ್ತದೆ ಎಂದು ಆರೋಪಿಸಿದರು. ಈ ಘಟನೆಗೆ ಸಂಬಂಧಿಸಿ ಹಲ್ಲೆಗೆ ಒಳಗಾದ ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.