Asianet Suvarna News Asianet Suvarna News

ಕನ್ನಡದ ಇಬ್ಬರಿಗೆ ಯುವ, ಬಾಲ ಸಾಹಿತ್ಯ ಅಕಾಡೆಮಿ ಪುರಸ್ಕಾರ: ಯಾರಿವರು?

ಕನ್ನಡದ ಯುವ ಲೇಖಕಿ ಶ್ರುತಿ ಬಿ.ಆರ್‌. ಅವರಿಗೆ ಯುವ ಪುರಸ್ಕಾರ ಹಾಗೂ ಕೃಷ್ಣಮೂರ್ತಿ ಬಿಳಿಗೆರೆ ಅವರಿಗೆ ಬಾಲ ಸಾಹಿತ್ಯ ಪುರಸ್ಕಾರ ಪ್ರಾಪ್ತಿಯಾಗಿದೆ. ಶ್ರುತಿ ಆವರ ‘ಜೀರೋ ಬ್ಯಾಲೆನ್ಸ್‌’ ಕೃತಿಗೆ ಪ್ರಶಸ್ತಿ ಬಂದಿದೆ. 

shruti br and krishnamurthy biligere gets kendra sahitya academy award gvd
Author
First Published Jun 16, 2024, 9:34 AM IST

ನವದೆಹಲಿ (ಜೂ.16): ಸಾಹಿತ್ಯ ಅಕಾಡೆಮಿ ಶನಿವಾರ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರಗಳನ್ನು ಪ್ರಕಟಿಸಿದೆ. ಕನ್ನಡದ ಯುವ ಲೇಖಕಿ ಶ್ರುತಿ ಬಿ.ಆರ್‌. ಅವರಿಗೆ ಯುವ ಪುರಸ್ಕಾರ ಹಾಗೂ ಕೃಷ್ಣಮೂರ್ತಿ ಬಿಳಿಗೆರೆ ಅವರಿಗೆ ಬಾಲ ಸಾಹಿತ್ಯ ಪುರಸ್ಕಾರ ಪ್ರಾಪ್ತಿಯಾಗಿದೆ. ಶ್ರುತಿ ಆವರ ‘ಜೀರೋ ಬ್ಯಾಲೆನ್ಸ್‌’ ಕೃತಿಗೆ ಪ್ರಶಸ್ತಿ ಬಂದಿದೆ. 

ಇನ್ನು ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಛೂಮಂತ್ರಯ್ಯನ ಕತೆಗಳು’ ಎಂಬ ಸಣ್ಣ ಕಥಾ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ ಸಂದಿದೆ. ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರಗಳು ತಲಾ 50 ಸಾವಿರ ರು. ನಗದು ಬಹುಮಾನ ಹಾಗೂ ತಾಮ್ರದ ಫಲಕ ಹೊಂದಿದೆ. ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ದಿನಾಂಕ ಪ್ರಕಟಿಸಲಾಗುತ್ತದೆ. ಯುವ ಪುರಸ್ಕಾರದ ಕನ್ನಡ ವಿಭಾಗಕ್ಕೆ ಪ್ರೊ। ಬಸವರಾಜ ಡೋಣೂರ, ಡಾ। ಆರತಿ ಎಚ್‌.ಎನ್‌. ಹಾಗೂ ಪ್ರೊ। ಎಸ್‌.ಜಿ. ಸಿದ್ದರಾಮಯ್ಯ ತೀರ್ಪುಗಾರರಾಗಿದ್ದರು. 

ಅಶೋಕ್‌ ಒಬ್ಬ ಸುಳ್ಳುಗಾರ ಹಾಗೂ ಜೋಕರ್‌: ಡಿ.ಕೆ.ಶಿವಕುಮಾರ್‌ ತಿರುಗೇಟು

ಸ್ಪರ್ಧೆಯಲ್ಲಿದ್ದ ಕನ್ನಡದ 11 ಕೃತಿಗಳನ್ನು ಪರಿಶೀಲಿಸಿ ಇವರು ಶ್ರುತಿ ಅವರ ‘ಜೀರೋ ಬ್ಯಾಲೆನ್ಸ್‌’ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಬಾಲ ಸಾಹಿತ್ಯ ಪುರಸ್ಕಾರದ ಕನ್ನಡ ವಿಭಾಗಕ್ಕೆ ಪ್ರೊ। ಎಚ್.ಎಸ್‌. ವೆಂಕಟೇಶಮೂರ್ತಿ, ಡಾ। ಅಪ್ಪಗೆರೆ ಸೋಮಶೇಖರ್‌ ಹಾಗೂ ಶಂಕರ ಸಿಹಿಮೊಗ್ಗೆ ತೀರ್ಪುಗಾರರಾಗಿದ್ದರು. ಇವರು ಕನ್ನಡದ 7 ಕೃತಿಗಳನ್ನು ಪರಿಶೀಲಿಸಿ ಅಂತಿಮವಾಗಿ ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಛೂಮಂತ್ರಯ್ಯನ ಕತೆಗಳು’ ಪುಸ್ತಕವನ್ನು ಆಯ್ಕೆ ಮಾಡಿದರು.

Latest Videos
Follow Us:
Download App:
  • android
  • ios