ವಿಜಯಪುರದ ಕಾಂಗ್ರೆಸ್ ತ್ರಿಮೂರ್ತಿಗಳಿಗೆ ಸಿಗುತ್ತಾ ಸಂಪುಟದಲ್ಲಿ ಸ್ಥಾನ..!

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಿಂದ ಆಯ್ಕೆಯಾದ ಎಂ.ಬಿ.ಪಾಟೀಲ್, ಇಂಡಿ ಮತಕ್ಷೇತ್ರದಿಂದ ಆಯ್ಕೆಯಾದ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನ ಬಾಗೇವಾಡಿ ಕ್ಷೇತ್ರದಿಂದ ಆಯ್ಕೆಯಾದ ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನಗಳು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ‌. 

Is Get Minister Post MB Patil Yashwantrayagowda ShivanandPatil in Karnataka Cabinet grg

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಮೇ.16):  ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತ ಪಡೆದಿದ್ದು ಪ್ರಸಕ್ತ ಸರ್ಕಾರದಲ್ಲಿ ವಿಜಯಪುರ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನಗಳ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಜನರಲ್ಲಿ ಹೆಚ್ಚಿನ ನಿರೀಕ್ಷೆ..!

ಈ ಬಾರಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತಿದ್ದು ವಿಜಯಪುರ ಜಿಲ್ಲೆಯ ಜನರಲ್ಲಿ ನಿರೀಕ್ಷೆಗಳು ಹರಿಗೆದರಿವೆ. ಈ ಬಾರಿ ಹೆಚ್ಚಿನ ಸಚಿವ ಸ್ಥಾನಗಳು ವಿಜಯಪುರ ಜಿಲ್ಲೆಗೆ ಸಿಗುವ ನಿರೀಕ್ಷೆಯಲ್ಲೂ ಜನರಿದ್ದಾರೆ‌. ಬಬಲೇಶ್ವರ ಕ್ಷೇತ್ರದಿಂದ ಆಯ್ಕೆಯಾದ ಎಂ.ಬಿ.ಪಾಟೀಲ್, ಇಂಡಿ ಮತಕ್ಷೇತ್ರದಿಂದ ಆಯ್ಕೆಯಾದ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನ ಬಾಗೇವಾಡಿ ಕ್ಷೇತ್ರದಿಂದ ಆಯ್ಕೆಯಾದ ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನಗಳು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ‌. ಜನರ ನಿರೀಕ್ಷೆಯಂತೆ ಸಚಿವ ಸ್ಥಾನಗಳು ಸಿಕ್ಕಲ್ಲಿ, ವಿಜಯಪುರ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು ಸಿಕ್ಕಂತಾಗುತ್ತವೆ. ಇದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎನ್ನಲಾಗ್ತಿದೆ.

'ದಿ ಕೇರಳ ಸ್ಟೋರಿ' ಸಿನಿಮಾ ಉಚಿತ ಪ್ರದರ್ಶನ, ಚಿತ್ರಮಂದಿರವನ್ನೇ ಬುಕ್‌ ಮಾಡಿದ ಯತ್ನಾಳ್‌

ಮೂವರು ಆಕಾಂಕ್ಷಿಗಳೇ..!

ಸಧ್ಯ ರಾಜ್ಯ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ ಬಿ ಪಾಟೀಲ್, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಬ‌.ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಸಚಿವ ಸ್ಥಾನಗಳ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ವಿಜಯಪುರ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು ಸಿಕ್ಕಿದ್ದವು, ಜೆಡಿಎಸ್‌ನಿಂದ ದಿವಂಗತ ಎಂ ಸಿ ಮನಗೂಳಿ ತೋಟಗಾರಿಕಾ ಸಚಿವರಾಗಿದ್ದರು, ಕಾಂಗ್ರೆಸ್ ನಿಂದ ಎಂ ಬಿ ಪಾಟೀಲ್ ಗೃಹ ಸಚಿವರಾಗಿದ್ದರು, ಶಿವಾನಂದ ಪಾಟೀಲ್ ಸಹ ಆರೋಗ್ಯ ಸಚಿವರಾಗಿದ್ದರು. ಮುಂದೆ ರಾಜಕೀಯ ಸನ್ನಿವೇಶಗಳಿಂದಾಗಿ ಉಪ ಚುನಾವಣೆ ನಡೆದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಈಗ ಮೂವರು ಸಚಿವ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಇಂಡಿಗೆ ಸಚಿವ ಸ್ಥಾನ ಬೇಕು..!

ಇಂಡಿ ಕ್ಷೇತ್ರ ಸಚಿವ ಸ್ಥಾನದಿಂದ ವಂಚಿತವಾಗುತ್ತಲೆ ಬಂದಿದೆ‌. ಹೀಗಾಗಿ ಈ ಬಾರಿ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬೇಡಿಕೆ ಶುರುವಾಗಿದೆ. ಕೆಲ ಮಾಹಿತಿಗಳ ಪ್ರಕಾರ ಚುನಾವಣೆಗು ಮೊದಲೆ ಸಚಿವ ಸ್ಥಾನದ ಭರವಸೆ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಾರೆ ಅಂತಲೂ ಹೇಳಲಾಗ್ತಿದೆ. ಇತ್ತ ಶಿವಾನಂದ ಪಾಟೀಲರು ಡಿಸಿಎಂ ಹುದ್ದೆ ನಿಭಾಯಿಸುವ ಶಕ್ತಿ ಸಾಮರ್ಥ್ಯ ಗಳಿದ್ದು ಡಿಸಿಎಂ ಸ್ಥಾನವನ್ನು ನೀಡುವ ಬಗ್ಗೆ ಮಾತುಗಳು ಕೇಳಿ ಬರ್ತಿವೆ. ಎಂ ಬಿ ಪಾಟೀಲರು ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದು ಜಿಲ್ಲೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲುವಲ್ಲಿ ಎಂಬಿಪಿ ಶ್ರಮವಿದ್ದು ಲಿಂಗಾಯತ ಕೋಟಾದಲ್ಲಿ ಎಂ ಬಿ ಪಾಟೀಲರಿಗೆ ಸಿಎಂ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

ವಿಜಯಪುರಕ್ಕೆ ಸಿಗುತ್ತಾ 1 ಡಿಸಿಎಂ, 2 ಸಚಿವ ಸ್ಥಾನ..!?

ಯಸ್, ಈ ರೀತಿಯ ಚರ್ಚೆಗಳು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ. ಒಂದು ಡಿಸಿಎಂ ಹುದ್ದೆ ಹಾಗೂ ಎರಡು ಸಚಿವ ಸ್ಥಾನ ವಿಜಯಪುರ ಜಿಲ್ಲೆಗೆ ಸಿಗುತ್ತಾ ಎನ್ನವ ಚರ್ಚೆಗಳು ನಡೆಯುತ್ತಿವೆ. ಎಂ ಬಿ ಪಾಟೀಲರಿಗೆ ಡಿಸಿಎಂ ಸ್ಥಾನ ಹಾಗೂ ಯಶವಂತರಾಯಗೌಡ ಪಾಟೀಲ್, ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನ ಸಿಗುತ್ತವೆ ಎನ್ನಲಾಗ್ತಿದೆ. ಆದ್ರೀಗ ಇಡೀ ಸಂಪುಟ ರಚನೆಯ ಗೇಮ್ ಪ್ಲಾನ್ ಹೈಕಮಾಂಡ್ ಅಂಗಳ ತಲುಪಿದೆ.

Vijayapura Election Result 2023: ವಿಜಯಪುರದಲ್ಲಿ ಕಾಂಗ್ರೆಸ್‌ ಸಿಕ್ಸ್‌, ಕಮಲ, ಜೆಡಿಎಸ್‌ ಸಿಂಗಲ್‌ಗೆ ಫಿಕ್ಸ್‌..!

ಆಕಾಂಕ್ಷಿಗಳ ಲಿಸ್ಟ್ ಇನ್ನೂ ಕೆಲವರು..!

ಆಕಾಂಕ್ಷಿಗಳ ಪಟ್ಟಿಯಲ್ಲಿ ಜಿಲ್ಲೆಯ ಇನ್ನು ಕೆಲ ಶಾಸಕರಿದ್ದಾರೆ. ಹಿರಿಯ ರಾಜಕಾರಣಿಯಾಗಿರುವ ಮುದ್ದೇಬಿಹಾಳ ದಿಂದ ಗೆಲವು ಕಂಡ ಅಪ್ಪಾಜಿ ನಾಡಗೌಡರಿಗು ಸಚಿವ ಸ್ಥಾನ ಸಿಗಬೇಕು ಎನ್ನುವ ಮಾತುಗಳು ಕೇಳಿ ಬರ್ತಿವೆ‌. ಅಪ್ಪಾಜಿ ನಾಡಗೌಡರ ಹಿರಿತನಕ್ಕೆ ಬೆಲೆ ಕೊಟ್ಟು ಅವರಿಗು ಸಚಿವ ಸಂಪುಟ ಸೇರುವ ಅವಕಾಶ ನೀಡಬೇಕು ಎನ್ನಲಾಗ್ತಿದೆ..

ನಿಗಮ ಮಂಡಳಿಗೂ ಪಟ್ಟು..!

ಇತ್ತ ಸೋತವರಿಗು ಗೌರವ ನೀಡುವ ಬಗ್ಗೆಯು ಕಾರ್ಯಕರ್ತಲ್ಲಿ ಒತ್ತಾಯಗಳು ಕೇಳಿ ಬರ್ತಿವೆ. ಈ ಪೈಕಿ ವಿಜಯಪುರ ವಿಜಯಪುರ ನಗರ ಕ್ಷೇತ್ರದಿಂದ ಶಾಸಕ ಯತ್ನಾಳ್ ವಿರುದ್ಧ ಪರಾಭವಗೊಂಡ ಹಮೀದ್ ಮುಶ್ರಿಫ್ ಗು ವಿಶೇಷ ಸ್ಥಾನ ಮಾನ ನೀಡುವಂತೆ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸ್ಪರ್ಧಿಸಿ ಏಕೈಕ ಮುಸ್ಲಿಂ ಅಭ್ಯರ್ಥಿ ಹಮೀದ್ ಮುಶ್ರೀಪ್‌ಗೆ ನಕಲಿ ಮತದಾನದಿಂದಾಗಿ ಸೋಲಾಗಿದೆ ಎಂದು ಅವರ ಅಭಿಮಾನಿಗಳು ಗಂಭೀರ ಆರೋಪಿಸಿದ್ದಾರೆ‌‌. ಇದರಿಂದ ಹಮೀದ್ ಮುಶ್ರೀಪ್ ರಿಗೆ ಅನ್ಯಾಯವಾಗಿದ್ದು ಇದನ್ನ ಹೈಕಮಾಂಡ್ ಸರಿಪಡೆಸಬೇಕು‌. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಲು ಎಂಎಲ್‌ಸಿ ಮಾಡಿ ನಿಗಮ ಮಂಡಳಿಯನ್ನಾದರು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios