ನವದೆಹಲಿ (ಫೆ. 12): ದಿಲ್ಲಿ ಕರ್ನಾಟಕ ಭವನದಲ್ಲಿ ಪಾನಗೋಷ್ಠಿ ನಡೆಸಿ ಉದ್ಧಾಮ ಸಾಹಿತಿಗಳು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಂದ ಉಗಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ.

ಆದರೆ ಇದಾದ ಮರುದಿನ ಬೆಳಿಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅಷ್ಟೂಸಂಸದರು ಪತ್ರಿಕಾಗೋಷ್ಠಿ ಮಾಡುತ್ತೇವೆ ಜಾಗ ಕೊಡಿ ಎಂದರೂ ಹಿಂದಿನ ರಾತ್ರಿಯ ಘಟನೆಯ ಹೆದರಿಕೆಯಲ್ಲಿದ್ದ ಅಧಿಕಾರಿಗಳು ಏನೇ ಮಾಡಿದರೂ ಸಂಸದರಿಗೆ ಒಂದು ಕೋಣೆ ಕೊಡಲು ತಯಾರಿರಲಿಲ್ಲ. ಉಗ್ರಪ್ಪ , ಡಿ ಕೆ ಸುರೇಶ್‌, ಧ್ರುವನಾರಾಯಣ ಫೋನ್‌ ಮಾಡಿ ಪರಿಪರಿಯಾಗಿ ವಿನಂತಿಸಿದರೂ ಆಯುಕ್ತ ನಿಲಯ್‌ ಮಿತಾಶ ಕ್ಯಾರೇ ಅಂದಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಸಂಸದರು ಭವನದ ಹೊರಗಡೆ ಬಂದು ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ಈ ಬಾರಿ ಫಾರ್‌ ಎ ಚೇಂಜ್‌ ‘ಸಾಹಿತಿಗಳ ಚೆಲ್ಲಾಟ ರಾಜಕಾರಣಿಗಳ ಪರದಾಟ’ಕ್ಕೆ ಕಾರಣವಾಯಿತು.

- ಇಂಡಿಯಾ ಗೇಟ್, ಪ್ರಶಾಂತ್ ನಾತು

ರಾಜಕಾರಣದ ಸುದ್ಧಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ