ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡಲು ಸೂಚನೆ: ಶಾಸಕಿ ರೂಪಕಲಾ
ಬೆಮೆಲ್ ಮತ್ತು ಬಿಜಿಎಂಎಲ್ ಕಾರ್ಖಾನೆ ಹಾಗೂ ಖಾಸಗಿಯವರ ಆಸ್ತಿಗಳಿಂದ ಅಂದಾಜು 80 ಕೋಟಿ ರು.ಗಳ ತೆರಿಗೆ ಬಾಕಿ ಇದ್ದು, ಅಧಿಕಾರಿಗಳು ತೆರಿಗೆ ವಸೂಲಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕಿ ರೂಪಕಲಾ ಶಶಿಧರ್ ಸೂಚಿಸಿದರು.
ಕೆಜಿಎಫ್ (ಜು.17): ಬೆಮೆಲ್ ಮತ್ತು ಬಿಜಿಎಂಎಲ್ ಕಾರ್ಖಾನೆ ಹಾಗೂ ಖಾಸಗಿಯವರ ಆಸ್ತಿಗಳಿಂದ ಅಂದಾಜು 80 ಕೋಟಿ ರು.ಗಳ ತೆರಿಗೆ ಬಾಕಿ ಇದ್ದು, ಅಧಿಕಾರಿಗಳು ತೆರಿಗೆ ವಸೂಲಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕಿ ರೂಪಕಲಾ ಶಶಿಧರ್ ಸೂಚಿಸಿದರು. ನಗರಸಭಾ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಕಲ್ಯಾಣಮಂಟಪ, ಖಾಸಗಿ ಶಾಲಾ ಕಾಲೇಜು ಹಾಗೂ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ವಸೂಲಿ ಮಾಡುವ ಮೂಲಕ ಅಧಿಕಾರಿಗಳು ನಗರದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು.
ಸಾರ್ವಜನಿಕರ ಕೆಸಲ ಮಾಡಿಕೊಡಿ: ಸಾರ್ವಜನಿಕರು ಕಚೇರಿಗೆ ಬಂದ ಸಂದರ್ಭದಲ್ಲಿ ಕಾಲಮಿತಿಯಲ್ಲಿ ಜನರ ಕೆಲಸ ಮಾಡಿಕೊಟ್ಟು, ನಗರಸಭೆ ಕಚೇರಿಯನ್ನು ಜನಸ್ನೇಹಿ ಕಚೇರಿಯನ್ನಾಗಿ ಮಾಡಿ. ನಗರಸಭೆಯಲ್ಲಿ ಹಲವು ಸುಧಾರಣೆಗಳನ್ನು ತರಬೇಕಾದ ಅಗತ್ಯವಿದ್ದು ಸಾರ್ವಜನಿಕರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬೇಡಿ. ಮುಖ್ಯವಾಗಿ ಖಾತೆಗಳ ವಿಚಾರದಲ್ಲಿ ಸಾರ್ವಜನಿಕರ ಅಸಮಾಧಾನವಿದ್ದು ಖಾತೆಗೆ ಸಂಬಂದಪಟ್ಟ ದಾಖಲೆಗಳನ್ನು ಪರಿಶೀಲಿಸಿ ಸರ್ಮಪಕವಾಗಿದ್ದಲ್ಲಿ ಖಾತೆ ಮಾಡಿಕೊಡಿ. ಅದು ಬಿಟ್ಟು ಕೆಲಸಕ್ಕೆ ನೂರು ಬಾರಿ ಕಚೇರಿಗೆ ಅಲೆದಾಡಿಸಿದಲ್ಲಿ ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕಾಟಾಚಾರದ ಉಸ್ತುವಾರಿ ಸಚಿವ ನಾನಲ್ಲ: ಭೈರತಿ ಸುರೇಶ್
ಮಳೆಗಾಲ ಪ್ರಾರಂಭವಾಗಿದ್ದು ಮಳೆ ಸರಗಾವಾಗಿ ಹರಿಯಲು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಹರಿಯುವಂತೆ ನೋಡಿಕೊಳ್ಳಿ, ಉರಿಗಾಂಪೇಟೆ ತಗ್ಗು ಪ್ರದೇಶದಲ್ಲಿ ಮಳೆ ಮನೆಗಳಿಗೆ ನೀರು ನುಗುವ ಸಂಭವಿರುತ್ತದೆ ಅತಂಹ ಪ್ರದೇಶದಲ್ಲಿರುವ ಕಾಲುವೆಗಳನ್ನು ಸ್ವಚ್ಚಗೊಳಿಸಿ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ನೂತನ ಪೌರಯುಕ್ತ ಪವನ್‌ಕುಮಾರ್‌ಗೆ ಸೂಚಿಸಿದರು.
ಜನವರಿಗೆ ಕಾಂಗ್ರೆಸ್ ಸರ್ಕಾರ ಬೀಳುವುದು ಖಚಿತ: ಸಂಸದ ಮುನಿಸ್ವಾಮಿ ಭವಿಷ್ಯ
ಬೀದಿ ನಾಯಿಗಳಿಗೆ ಕಡಿವಾಣ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿ ನಾಯಿಗಳ ಕಡಿವಾಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಿ ಎಂದು ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ಶಶಿಕುಮಾರ್, ಜಯರಾಮ್, ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕರಾದ ಸರಸ್ವತಿ ಹಾಜರಿದ್ದರು.