Asianet Suvarna News Asianet Suvarna News

ಪ್ರಧಾನಿ ಮೋದಿ ಪರಿಶ್ರಮದಿಂದ ಭಾರತಕ್ಕೆ ಜಾಗತಿಕ ಅಗ್ರ ಸ್ಥಾನ: ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 9 ವರ್ಷಗಳ ಆಡಳಿತಾವಧಿಯಲ್ಲಿ ಹತ್ತಾರು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪರಿಣಾಮ ವಿಶ್ವದಲ್ಲೇ ಭಾರತ ಅಗ್ರಗಣ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಹೇಳಿದರು. 

Indias global top position due to PM Narendra Modis efforts Says MP Annasaheb Jolle gvd
Author
First Published Jun 30, 2023, 11:59 PM IST

ಯಮಕನಮರಡಿ (ಜೂ.30): ದೇಶದ 75 ವರ್ಷಗಳ ಇತಿಹಾಸದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿದರೂ ದೇಶದ ಸಮಗ್ರ ಅಭಿವೃದ್ಧಿ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 9 ವರ್ಷಗಳ ಆಡಳಿತಾವಧಿಯಲ್ಲಿ ಹತ್ತಾರು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪರಿಣಾಮ ವಿಶ್ವದಲ್ಲೇ ಭಾರತ ಅಗ್ರಗಣ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಹೇಳಿದರು. 

ಚಿಕಾಲಗುಡ್ಡ ಗ್ರಾಮದಲ್ಲಿ ನಡೆದ ಮಹಾಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ರೈತರ ಕಲ್ಯಾಣ ಕಾರ್ಯಕ್ರಮಗಳು, ಯವ ಸಬಲೀಕರಣ, ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಬಡವರಿಗೆ ಉಜ್ವಲಾ ಗ್ಯಾಸ್‌ ವಿತರಣೆ, ಜಲಜೀವನ ಮಿಷನ್‌ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದೇಶವನ್ನು ಪ್ರಗತಿಪಥದತ್ತ ಮುನ್ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ 9 ವರ್ಷಗಳ ಸಾಧನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.

ರಾಜ್ಯದಲ್ಲಿ ಸಿದ್ದು, ಶಿವಕುಮಾರ್‌ ಮೈತ್ರಿ ಸರ್ಕಾರ: ಅಶೋಕ್‌ ವ್ಯಂಗ್ಯ

ಸಭೆಯಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಎಸ್ಟಿಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ರವಿ ಹಂಜಿ, ಶ್ರೀಶೈಲ ಯಮಕನಮರಡಿ, ಅಪ್ಪಯ್ಯ ಜಾಜರಿ, ಶಶಿಕಾಂತ ಮಠಪತಿ, ಪಿಂಟು ಖೋತ, ಮಹಾರುದ್ರ ಜರಳಿ, ಚಂದ್ರಕಾಂತ ಕಾಪಸಿ, ಸಿದ್ದಲಿಂಗ ಸಿದ್ದಗೌಡರ, ಮಹಾವೀರ ನಾಶಿಪುಡಿ, ಬಸವರಾಜ ಪೂಜೇರಿ, ಯಲ್ಲಪ್ಪ ಗಡಕರಿ, ಉದಯ ನಿರ್ಮಲ ಮುಂತಾದ ಬಿಜೆಪಿ ಕಾರ್ಯಕರ್ತರು ಇದ್ದರು. ಶಿವಾನಂದ ಬಾಗೇವಾಡಿ ಸ್ವಾಗತಿಸಿ, ನಿರೂಪಿಸಿದರು.

ಬಿಜೆಪಿ ಸಭೆಗೆ ಜೆಡಿಎಸ್‌ ಬೆಂಬಲಿತ ಕಾರ್ಯಕರ್ತರ ಆಕ್ರೋಶ, ಗದ್ದಲ: ಯಮಕನಮರಡಿಯ ಚಿಕಾಲಗುಡ್ಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಗೆ ಜೆಡಿಎಸ್‌ ಬೆಂಬಲಿಗ ಅಣ್ಣಾಸಾಬ್‌ ಬೆಣವಾಡಿ ಹಾಜರಾಗಿದ್ದನ್ನು ಕಂಡು ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ತೀವ್ರ ವಾಗ್ವಾದಕ್ಕಿಳಿದ ಪ್ರಸಂಗ ನಡೆಯಿತು. 

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಅವರು ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸುತ್ತಲೇ ಇತ್ತ ಕಾರ್ಯಕರ್ತರ ಮಧ್ಯೆ ಗದ್ದಲ ಶುರುವಾಯಿತು. ಬಿಜೆಪಿಯಲ್ಲಿದ್ದ ಅಣ್ಣಾಸಾಹೇಬ ಬೆಣವಾಡಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಿ ಈಗ ಬಿಜೆಪಿ ಸಭೆಗೆ ಬಂದಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಬಸವರಾಜ ಪೂಜೇರಿ, ಚುನಾವಣೆಯಲ್ಲ ಜೆಡಿಎಸ್‌ ಪರವಾಗಿ ಪ್ರಚಾರ ಮಾಡಿ ಈ ಸಭೆಗೇಕೆ ಬಂದಿದ್ದೀಯಾ ಎಂದು ಅಣ್ಣಾಸಾಬ ಬೆಣವಾಡಿ ಅವರನ್ನು ತರಾಟೆಗೆ ತೆಗೆದುಕೊಂಡರು. 

ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ

ಪ್ರತಿಯಾಗಿ ವಾಗ್ವಾದಕ್ಕಿಳಿದ ಬೆಣವಾಡಿ ಪಕ್ಷದ ಮೇಲಿನ ಅಭಿಮಾನಕ್ಕಾಗಿ ಬಂದಿದ್ದೇನೆ. ಅದನ್ನು ಕೇಳಲು ನೀನ್ಯಾರು? ಎಂದು ಪ್ರಶ್ನಿಸುತ್ತಲೇ ಉಭಯ ಮುಖಂಡರ ಬೆಂಬಲಿಗ ಕಾರ್ಯಕರ್ತರ ಮಧ್ಯೆಯೂ ಮಾತಿನ ಚಕಮಕಿಗೆ ಕಾರಣವಾಯಿತು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಮಧ್ಯಪ್ರವೇಶಿಸಿ ಬಿಜೆಪಿ ಸಭೆಗಳಿಗೆ ಬೇರೆ ಪಕ್ಷದವರನ್ನು ಬರದಂತೆ ನೋಡಿಕೊಳ್ಳಬೇಕೆಂದು ಯಮಕನಮರಡಿ ಬಿಜೆಪಿ ಅಧ್ಯಕ್ಷ ಶ್ರೀಶೈಲ ಯಮಕನಮರಡಿ ಅವರಿಗೆ ಸೂಚನೆ ನೀಡುವ ಮೂಲಕ ಗದ್ದಲ-ಗಲಾಟೆಗೆ ಅಂತ್ಯ ಹಾಡಿದರು.

Latest Videos
Follow Us:
Download App:
  • android
  • ios