ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿ ಹಾಗೂ ಆಸೀಸ್ ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಹಾಜರಾಗಿದ್ದಾರೆ. ಕಾರ್ಯಕ್ರಮದ ಬಳಿಕ ಮೋದಿ ಅಭಿಮಾನಿಗಳಿಗೆ ಕೈಬೀಸುತ್ತಾ ಮೈದಾನ ಸುತ್ತಿದ್ದಾರೆ. ಇಷ್ಟೇ ಅಲ್ಲ ಮೋದಿಗೆ ಬಿಸಿಸಿಐ ಉಡುಗೊರೆಯೊಂದನ್ನು ನೀಡಿದೆ. ಆದರೆ ಈ ಕಾರ್ಯಕ್ರಮ, ಉಡುಗೊರೆ ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ. ಸ್ವಯಂ ಪ್ರಚಾರದ ಗೀಳಿನಲ್ಲಿ ಮೋದಿ ಮುಳುಗಿದ್ದಾರೆ ಎಂದು ಕಾಲೆಳೆದಿದೆ.
ಅಹಮ್ಮದಾಬಾದ್(ಮಾ.09): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಹೊಸ ಇತಿಹಾಸ ರಚಿಸಿದೆ. ಪ್ರಧಾನಿ ಮೋದಿ ಹಾಗೂ ಆಸೀಸ್ ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಹಾಜರಾಗುವ ಮೂಲಕ ಟೆಸ್ಟ್ ಪಂದ್ಯ ಕಳೆ ಹೆಚ್ಚಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಸರಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಂಡಕ್ಕೆ ಶುಭಕೋರಿದ ಉಭಯ ನಾಯಕರು, ತಂಡದ ನಾಯಕರಿಗೆ ಕ್ಯಾಪ್ ನೀಡಿದರು. ಟೆಸ್ಟ್ ಪಂದ್ಯಕ್ಕೆ ಹಾಜರಾದ ಮೋದಿಗೆ ಬಿಸಿಸಿಐ, ಉಡುಗೊರೆ ಗೌರವಿಸಿದೆ.ಇತ್ತ ಮೋದಿ ಹಾಗೂ ಆಸಿಸ್ ಪ್ರಧಾನಿ ಅಭಿಮಾನಿಗಳತ್ತ ಕೈಬೀಸುತ್ತಾ ಮೈದಾನ ಸುತ್ತು ಹಾಕಿದರು. ಈ ಎಲ್ಲಾ ಬೆಳವಣಿಗೆ ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ. ಇದೀಗ ಪ್ರಧಾನಿ ಮೋದಿ ಹಾಗೂ ಬಿಜೆಪಿ ಕಾಲೆಳೆದಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿಗೆ, ಮೋದಿ ಫೋಟೋ ಉಡುಗೊರೆ. ಇದು ಸ್ವಂಯ ಪ್ರಚಾರ ಗೀಳಿನ ಉತ್ಕೃಷ್ಟ ಮಟ್ಟ ಎಂದು ಕಾಂಗ್ರೆಸ್ ಹೇಳಿದೆ.
ಕ್ರೀಡಾಂಗಣದಲ್ಲಿ ಮೋದಿ ಹಾಗೂ ಆ್ಯಂಧೋನಿ ಅಲ್ಬನೀಸ್ ತೆರೆದ ವಾಹನದಲ್ಲಿ ಅಭಿಮಾನಿಗಳತ್ಕ ಕೈಬೀಸುತ್ತಾ ಸುತ್ತು ಹಾಕಿದ್ದಾರೆ. ಇದೂ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆಕ್ರೋಶಕ್ಕೆ ಕಾರಣವಾಗಿದೆ. ನಿಮ್ಮ ಅವಧಿಯಲ್ಲಿ ನಿರ್ಮಿಸಿದ , ನಿಮ್ಮ ಹೆಸರೇ ಇಟ್ಟಿರುವ ಕ್ರೀಡಾಂಗಣದಲ್ಲಿ ಪ್ರಚಾರ. ಇದು ಸ್ವಂಯ ಪ್ರಚಾರ ಗೀಳಿನ ಉತ್ತುಂಗ ಎಂದು ಜೈರಾಮ್ ರಮೇಶ್ ಟ್ವೀಟ್ ಮೂಲಕ ಬಿಜೆಪಿ ಟೀಕಿಸಿದ್ದಾರೆ.
ಅಹಮದಾಬಾದ್ ಟೆಸ್ಟ್‌ಗೆ ಸಾಕ್ಷಿಯಾದ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಆಂಥೋನಿ! ಕ್ರಿಕೆಟ್‌ನ ಐತಿಹಾಸಿಕ ಕ್ಷಣ
ಕಾಂಗ್ರೆಸ್ ಟೀಕೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಪ್ರಧಾನಿ ಮೋದಿ ಸಿಕ್ಕ ಅವಕಾಶದಲ್ಲಿ ತಮ್ಮ ಪ್ರಚಾರ ಮಾಡಿಕೊಳ್ಳುತ್ತಾರೆ. ಜನ ಸೇರಿದ್ದರೆ ಸಾಕು, ಚುನಾವಣೆ ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕೆ ಇಳಿಯುತ್ತಾರೆ ಎಂದು ಕಾಂಗ್ರೆಸ್ ಪರ ಕೆಲವರು ಟ್ವೀಟ್ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅತ್ಯಂತ ಮುತುವರ್ಜಿಯಿಂದ ನಿರ್ಮಿಸಿದ್ದಾರೆ. ಗುಜರಾತ್‌ನಲ್ಲಿ ನಿರ್ಮಿಸಿರುವ ಈ ಕ್ರೀಡಾಂಗಣಕ್ಕೆ ಮೋದಿ ಹೆಸರಿಟ್ಟಿದ್ದಾರೆ. ಮೋದಿ ಹೆಸರಿಟ್ಟಿದ್ದು, ಗುಜರಾತ್ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ. ಮೋದಿ ಹೆಸರಿನಲ್ಲಿರುವು ಇದೊಂದೆ ಕ್ರೀಡಾಂಗಣ. ಇನ್ಯಾವುದೇ ಕ್ರೀಡಾಂಗಣವಾಗಲಿ, ಯೋಜನೆಯಾಗಲಿ, ಶಾಲೆ, ಕಟ್ಟಡಗಳಿಲ್ಲ. ಆದರೆ ನೆಹರೂ ಹಾಗೂ ಇಂದಿರಾ ಗಾಂಧಿ 60ಕ್ಕೂ ಕ್ರೀಡಾಂಗಣ, ವಿಮಾನ ನಿಲ್ದಾಣ ಸೇರಿದಂತೆ ಕಟ್ಟಡ, ನಗರಗಳಿಗೆ ಹೆಸರು ಇಟ್ಟಿದ್ದಾರೆ. ತಮಗೆ ತಾವೇ ಭಾರತ ರತ್ನ ಕೊಟ್ಟಿದ್ದಾರೆ. ಈ ರೀತಿಯ ಕೆಲಸ ಮೋದಿ ಮಾಡಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
Ahmedabad Test: ಆಸೀಸ್ ಪ್ರಧಾನಿ ಜತೆ ಮೋದಿ ಪಂದ್ಯ ವೀಕ್ಷಣೆ, ಮುಗಿಲು ಮುಟ್ಟಿದ ಮೋದಿ ಜಯಘೋಷ..!
2015ರಲ್ಲಿ ಪ್ರಧಾನಿ ಮೋದಿ ಮೊಟೆರಾ ಕ್ರೀಡಾಂಗಣ ನವೀಕರಣಕ್ಕೆ ಮುಂದಾದರು. ಬರೋಬ್ಬರಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. 2021ರಲ್ಲಿ ಈ ಕ್ರೀಡಾಂಗಣಕ್ಕೆ ಮೋದಿ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಯಿತು. ಇದು ಕಾಂಗ್ರೆಸ್ ವಿರೋಧಿಸಿತ್ತು. ಕಳೆದ ವರ್ಷ ಗುಜರಾತ್ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಕ್ರೀಡಾಂಗಣದ ಹೆಸರು ಬದಲಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಿತ್ತು.
