Asianet Suvarna News Asianet Suvarna News

ಇಂಡಿಯಾ ಟುಡೇ ಸಮೀಕ್ಷೆ: ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166 ಸ್ಥಾನ, ಮತ್ತೆ ಬಿಜೆಪಿ ಪ್ರಾಬಲ್ಯ

ಲೋಕಸಭಾ ಚುನಾವಣೆ ನಡೆದರೆ ಮತದಾರರ ಮನಸ್ಥಿತಿ ಹೇಗಿರಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಎನ್‌ಡಿಎ ಮೈತ್ರಿಕೂಟ 335 ಸ್ಥಾನಗಳಲ್ಲಿ, ಇಂಡಿಯಾ ಕೂಟ 166 ಸ್ಥಾನಗಳಲ್ಲಿ ಗೆಲ್ಲಲಿವೆ.

India Today Mood of The Nation predicts Modi 3.0 NDA likely to bag 335 seats, INDIA   bloc at 166 seats gow
Author
First Published Feb 9, 2024, 8:39 AM IST

ನವದೆಹಲಿ: ದೇಶದಲ್ಲಿ ಈಗಲೇ ಲೋಕಸಭಾ ಚುನಾವಣೆ ನಡೆದರೆ ಮತದಾರರ ಮನಸ್ಥಿತಿ ಹೇಗಿರಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಎನ್‌ಡಿಎ ಮೈತ್ರಿಕೂಟ 335 ಸ್ಥಾನಗಳಲ್ಲಿ, ಇಂಡಿಯಾ ಕೂಟ 166 ಸ್ಥಾನಗಳಲ್ಲಿ ಗೆಲ್ಲಲಿವೆ. ಇತರರು 57 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ ಎಂದು ಅಂದಾಜಿಸಿದೆ.

ಇಂಡಿಯಾ ಟುಡೇ ಸಮೀಕ್ಷೆ:ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಕೇವಲ 4 ಸ್ಥಾನ!

‘ಮೂಡ್‌ ಆಫ್‌ ದ ನೇಷನ್‌’ ಹೆಸರಿನ ಸಮೀಕ್ಷೆ ಪ್ರಕಾರ ಎನ್‌ಡಿಎ ಮೈತ್ರಿಕೂಟ ಶೇ.44.4, ಇಂಡಿಯಾ ಮೈತ್ರಿಕೂಟ ಶೇ.38.3 ಮತ್ತು ಇತರರು ಶೇ.17.3ರಷ್ಟು ಮತ ಪಡೆದುಕೊಳ್ಳಲಿದ್ದಾರೆ.

ಕಳೆದ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ ನೇತೃತ್ವದ ಮೈತ್ರಿಕೂಟ 18 ಸ್ಥಾನಗಳ ನಷ್ಟ ಅನುಭವಿಸಲಿದೆ. ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ 75 ಸ್ಥಾನಗಳ ಲಾಭ ಗಳಿಸಲಿದೆ.

ಖ್ಯಾತ ನಟನನ್ನು ಪ್ರೀತಿಸಿ ಮದುವೆಯಾಗಿದ್ದ ಐಎಎಸ್ ಅಧಿಕಾರಿ 12 ವರ್ಷಗಳ ನಂತರ ವಿಚ್ಛೇದನ ನೀಡಿದ್ಯಾಕೆ?

ಇನ್ನು ಬಿಜೆಪಿ 304 ಸ್ಥಾನ, ಕಾಂಗ್ರೆಸ್‌ 71 ಮತ್ತು ಇತರರು 168 ಸ್ಥಾನಗಳನ್ನು ಗೆಲ್ಲಲಿದ್ದಾರೆ. ಬಿಜೆಪಿ ಶೇ.40, ಕಾಂಗ್ರೆಸ್ ಶೇ.19 ಮತ್ತು ಇತರರು ಶೇ.41ರಷ್ಟು ಮತ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ 1 ಸ್ಥಾನ, ಕಾಂಗ್ರೆಸ್‌ 19 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಲಿವೆ.

ಇಂಡಿಯಾ ಟುಡೇ ಸಮೀಕ್ಷೆ

ಮೈತ್ರಿಕೂಟ  ಗೆಲ್ಲಲಿರುವ ಸ್ಥಾನ
ಎನ್‌ಡಿಎ  335
ಇಂಡಿಯಾ 166
ಇತರರು 42

 

Follow Us:
Download App:
  • android
  • ios