Asianet Suvarna News Asianet Suvarna News

ಭಾಷಣ ಕೇಳಲು ಜನರಿಂದ ಡಬಲ್‌ ಶಿಫ್ಟ್‌. ಸಿದ್ದು ಕೋಲಾರದಿಂದ ದೂರ ಹೋಗಿದ್ದಕ್ಕೆ ನಿಜ ಕಾರಣ ಏನು ಗೊತ್ತಾ?

ಕೋಲಾರ ಟಿಕೆಟ್‌ ಬೇಕೇ ಬೇಕು ಎಂದು ಡೆಲ್ಲಿಗೆ ಹೋದವರಿಗೆ ಎದುರಾದವರೊಬ್ಬರು ತಬ್ಬಿಕೊಂಡು ಸಿದ್ದರಾಮಯ್ಯಜೀ ಕೋಲಾರ್‌ ನಕ್ಕೋಜಿ ಅಂದು ಬಿಡುತ್ತಾರೆ. ಹೀಗೆ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಅವರ ಕೋಲಾರದ ಬಯಕೆ ಕರಗಿ ಹೋಗುವಂತೆ ಮಾಡಿದ ಹುಡ್ಗನ ಹೆಸರು- ರಾಹುಲ್‌ ಗಾಂಧಿ!

India Gate Priyanka Gandhi Vadra Rahul Gandhi siddaramaiah Kolar Campaign san
Author
First Published May 1, 2023, 1:09 PM IST

ಒಂದೇ ದಿನ, 2 ಪಕ್ಷಗಳ ಕಾರ್ಯಕ್ರಮಕ್ಕೆ ಹೋಗಿ ಸಂಪಾದನೆ: ಚುನಾವಣಾ ಪ್ರಚಾರದ ಬಿರುಸು ಹೆಚ್ಚುತ್ತಿರುವಂತೆಯೇ ಡಿಮ್ಯಾಂಡ್‌ ಹೆಚ್ಚಾಗಿರುವುದು ಯಾರಿಗೆ ಗೊತ್ತೆ? ನ್ಯಾಚುರಲಿ ಜನರಿಗೆ! ಯಾವುದೇ ಪಕ್ಷದ ಸಭೆ, ಸಮಾರಂಭಗಳಾದರೂ ಜನ ಬೇಕೆ ಬೇಕಲ್ಲ! ಮೊದಲೆಲ್ಲ ದೊಡ್ಡ ಪ್ರಚಾರ ಕಾರ್ಯಕ್ರಮಗಳಿಗೆ ಜನರೇ ಬರುತ್ತಿದ್ದರು. ಆ ಕಾಲ ಹೊರಟು ಹೋಗಿದೆ! ಇದು ಎಲ್ಲರಿಗೂ ಗೊತ್ತು. ಹೀಗಾಗಿಯೇ ಸಭೆ ನಡೆಯುವ ಸ್ಥಳಕ್ಕೆ ಬಂದು ಹೋಗಲು ವಾಹನ, ಮಧ್ಯೆ ಊಟದ ಜೊತೆಗೆ ‘ದಾರಿ ಖರ್ಚು’ ಎಂದು ಕನಿಷ್ಠ 500 ರು. ಆದರೂ ನೀಡಲೇಬೇಕು!
ಕಳೆದ ವಾರ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಕಾರ್ಯಕ್ರಮ ಇತ್ತು. ಇದಕ್ಕೆ ಸಾಕಷ್ಟುಮಂದಿ ಬಂದಿದ್ದರು. ಈ ಕಾರ್ಯಕ್ರಮ ನಂಜನಗೂಡು ರಸ್ತೆಯಲ್ಲಿರುವ ಹೆಳವರಹುಂಡಿಯಲ್ಲಿ ನಡೆಯಿತು.
ಅದೇ ದಿನ ಈ ಕಾರ್ಯಕ್ರಮದ ನಂತರ ತಿರಮಕೂಡಲು ವೃತ್ತದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ವರುಣ ಕ್ಷೇತ್ರದ ಅಹಿಂದ ಸಮಾವೇಶವನ್ನು ಜೆಡಿಎಸ್‌ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಭಾಗವಹಿಸುವವರಿದ್ದರು.
ಪ್ರಿಯಾಂಕಾ ವಾದ್ರಾ ಅವರು ಸಭೆಯಲ್ಲಿ ಭಾಷಣ ಮಾಡಿ, ಚಾಮರಾಜನಗರ ಜಿಲ್ಲೆಯ ಹನೂರು ಕಾರ್ಯಕ್ರಮಕ್ಕೆ ತೆರಳಿದರು. ಇದಾದ ಕೂಡಲೇ ಅಲ್ಲಿಗೆ ಬಂದಿದ್ದ ‘ಸಭಿಕರು’ ಸಂಘಟಕರಿಂದ ‘ದಾರಿ ಖರ್ಚು’ ಸ್ವೀಕರಿಸಿ, ಅದೇ ವಾಹನದಲ್ಲಿ ಹತ್ತಿ ಜೆಡಿಎಸ್‌ನ ಅಹಿಂದ ಸಮಾವೇಶ ನಡೆಯುತ್ತಿದ್ದ ಆದಿಚುಂಚನಗಿರಿ ಸಮುದಾಯ ಭವನ ತಲುಪಿದರು. ಅಲ್ಲಿ ಕೂಡ ಸಂಘಟಕರಿಂದ ‘ದಾರಿ ಖರ್ಚು’ ಸಿಕ್ಕಿತ್ತು.

---------------------------
ಸೋ, ಒಂದೇ ವಿಸಿಟ್‌, ಡಬಲ್‌ ಪೇಮೆಂಟ್‌! ಜೈ ಪ್ರಜಾಪ್ರಭುತ್ವ!:
ಚುನಾವಣೆ ಬಿಸಿ ಜೋರಾಗಿ, ಸಿದ್ದರಾಮಯ್ಯ ಅವರು ವರುಣದಲ್ಲಿ ಸ್ಪರ್ಧಿಸುವ ವಿಚಾರ ಹಳೆಯದಾಗಿರಬಹುದು. ಆದರೆ, ಅವರ ಆಪ್ತರನ್ನು ಇನ್ನೂ ಕಾಡುತ್ತಿರುವ ಪ್ರಶ್ನೆ ‘ಹುಲಿಯಾ’ ಕೋಲಾರ ಬಿಟ್ಟುಕೊಟ್ಟಿದ್ದು ಏಕೆ ಎಂಬುದು.
ಸಕಲ ಸಿದ್ಧತೆ ಮಾಡಿಕೊಂಡು, ಸ್ಪರ್ಧೆ ಇನ್ನೇನು ಖಚಿತ ಅನ್ನುವ ಟೈಮಿಗೆ ಸಿದ್ದರಾಮಯ್ಯ ಅವರು ಪಥ ಬದಲಿಸಿದ್ದು ಆಪ್ತರಿಗೂ ಅಚ್ಚರಿ. ಹೈಕಮಾಂಡ್‌ ಹೇಳಿತೆ? ತಮಗೆ ಬೇಡ ಅನಿಸಿತೆ? ಗ್ರಹ ಗತಿ ಕೂಡಿ ಬರಲಿಲ್ಲವೇ? ಇಂತಹ ಹತ್ತಾರು ಪ್ರಶ್ನೆ ಕಾಡಿದಾಗ, ಸುಮ್ನಿರಲಾಗದೇ ಸಿದ್ದರಾಮಯ್ಯ ಅವರನ್ನು ಕೇಳಿದವರಿಗೆ, ಏ ಹೋಗೋ, ನಾನು ಕೋಲಾರ ಕೇಳೇ ಇರಲಿಲ್ಲ ಎಂದು ಬೈಸಿಕೊಂಡವರು ಹಲವರು.
ಆದರೆ, ಇಲ್ಲೊಬ್ಬ ಸಿದ್ದರಾಮಯ್ಯ ಅವರ ಆಪ್ತರು ‘ಹುಲಿಯಾ’ರ ಮೂಡ್‌ ಚೆನ್ನಾಗಿದ್ದಾಗ ಏಕೆ ಹೀಗಾಯ್ತು ಎಂದು ಕೇಳಿದರಂತೆ.
ಅದಕ್ಕೆ ಸಿದ್ದರಾಮಯ್ಯ ಅವರು, ಏಯ್‌ ಏನ್ಮಾಡೋದಯ್ಯ... ಈ ಬಾರಿ ಬೇಕಾದ್‌ ಆಗಲಿ ಕೋಲಾರದಿಂದಲೂ ಸ್ಪರ್ಧಿಸುತ್ತೇನೆ ಅಂತ ಪಟ್ಟು ಹಿಡಿಯೋಣ ಅಂತ ಅಂದುಕೊಂಡು ಡೆಲ್ಲಿಗೆ ಹೋಗಿದ್ದೆ. ಆದರೆ, ಅಲ್ಲಿ ಆ ಹುಡ್ಗ ಎದುರಾದವರೆ ತಬ್ಬಿಕೊಂಡು ಸಿದ್ದರಾಮಯ್ಯಜೀ ಕೋಲಾರ್‌ ನಕ್ಕೋಜಿ ಅಂದು ಬಿಡುತ್ತಾರೆ. ನಂಗೆ ಏನ್‌ ಹೇಳೋಕೆ ಗೊತ್ತಾಗಲ್ಲ ಅಂದ್ರಂತೆ. ಹೀಗೆ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಅವರ ಕೋಲಾರದ ಬಯಕೆ ಕರಗಿ ಹೋಗುವಂತೆ ಮಾಡಿದ ಹುಡ್ಗನ ಹೆಸರು- ರಾಹುಲ್‌ ಗಾಂಧಿ!
--------------------

ಕೆಂಪು ನಾಯಕನ ಗ್ರೀನ್‌ ಫ್ಲ್ಯಾಗ್‌: ವಿಮಾನಯಾನ ಕಂಪನಿಯ ವಿರುದ್ಧ ಬಹಿರಂಗವಾಗಿ ಬಹಿಷ್ಕಾರವನ್ನು ಘೋಷಿಸಿದ ದೇಶದ ಏಕೈಕ ರಾಜಕೀಯ ನಾಯಕ ಬಹುಶಃ ಇವರಾಗಿರಬಹುದು. ಇಂಡಿಗೋ ಏರ್‌ಲೈನ್ಸ್ ವಿರುದ್ಧ ಸಿಪಿಎಂ ನಾಯಕ ಇ ಪಿ ಜಯರಾಜನ್ ಅವರ ನಿಲುವು ಕಣ್ಣೂರಿನಿಂದ ತಿರುವನಂತಪುರಕ್ಕೆ ವಿಮಾನದಲ್ಲಿ ನಡೆದ ಗಲಾಟೆಯ ನಂತರ ಅವರ ಮೇಲೆ ವಿಧಿಸಲಾದ ಅಲ್ಪಾವಧಿಯ ನಿಷೇಧಕ್ಕೆ ಕಿಡ್-ಪ್ರೋ-ಕೋ ಆಗಿತ್ತು.
ಆದರೆ ಇಪಿ ನಂತರ ತಿರುವನಂತಪುರಂ ಮತ್ತು ತನ್ನ ತವರೂರು ಕಣ್ಣೂರು ನಡುವೆ ಬೇರೆ ಯಾವುದೇ ವಿಮಾನಯಾನ ಸಂಸ್ಥೆ ಇಲ್ಲ ಎಂದು ಅರಿತುಕೊಂಡಿರು. ಮಧ್ಯೆ, ಅವರು ಸಮಸ್ಯೆಯನ್ನು ಪರಿಹರಿಸಲು ಕೆಲವು ಟ್ರ್ಯಾಕ್ 2 ಚಾನಲ್‌ಗಳನ್ನು ಪ್ರಯತ್ನಿಸಿದರು. ಆದರೆ ಅದ್ಯಾವುದೂ ಪರಿಹಾರವನ್ನು ಹೊರಹಾಕಲು ಸಹಾಯ ಮಾಡಲಿಲ್ಲ. ಇದರ ನಡುವೆ ವಂದೇ ಭಾರತ್‌ ರೈಲು ಸೇವೆ ಆರಂಭವಾಯಿತು. ಸುಮಾರು ಆರು ಗಂಟೆಗಳಲ್ಲಿ ಕಣ್ಣೂರು ತಲುಪಲು ಈ ರೈಲು ಸಹಾಯ ಮಾಡಲಿದೆ. ಸಿಪಿಎಂ ಇನ್ನೂ ವಂದೇ ಭಾರತ್‌ಗೆ ತನ್ನ ಸ್ವಾಗತವನ್ನು ವ್ಯಕ್ತಪಡಿಸದಿದ್ದರೂ, ಇಪಿ ಲೋಕೋ ಪೈಲಟ್‌ಗಳನ್ನು ಗೌರವಿಸಲು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಆದರೆ ಇಪಿಯ ಹತ್ತಿರದ ಮೂಲಗಳು ವಂದೇ ಭಾರತ್ ಸ್ವೀಕರಿಸಲು ನಿಜವಾಗಿಯೂ ಸಂತೋಷವಾಗಿದೆ ಮತ್ತು ಹೆಚ್ಚಿನ ಜೋಡಿ ರೈಲುಗಳಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ``ಇಲ್ಲಿಯವರೆಗೂ ಕಣ್ಣೂರು ತಲುಪಲು ರಾತ್ರಿಯ ರೈಲುಗಳನ್ನು ಹಿಡಿಯಬೇಕಾಗುತ್ತಿತ್ತು. ಲಾಂಗ್ ಡ್ರೈವ್‌ಗಳನ್ನು ತಪ್ಪಿಸಲು ಸಾರಿಗೆ ವಿರಾಮವನ್ನು ತೆಗೆದುಕೊಳ್ಳಬೇಕಾಗುತ್ತಿತ್ತು. ಆದರೆ,  ವಂದೇ ಭಾರತ್ ಅವರಿಗೆ ವೇಗವಾಗಿ ಕಣ್ಣೂರು ತಲುಪಲು ಸಹಾಯ ಮಾಡುತ್ತಿದೆ' ಎಂದು ಹೇಳಿದ್ದಾರೆ. ವಂದೇ ಭಾರತ್‌ಗೆ ಇಪಿಯ ಪಕ್ಷ ರೆಡ್‌ ಫ್ಲ್ಯಾಗ್‌ ತೋರಿದರೂ, ಅವರು ಮಾತ್ರ ಗ್ರೀನ್‌ ಫ್ಲ್ಯಾಗ್‌ ತೋರಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ.

From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್‌ ಡ್ಯೂಟಿಯದ್ದೇ ದೊಡ್ಡ ಚಿಂತೆ!

ಮಿಸ್‌ ಆದ ನಾಯಕರು: 12ರಷ್ಟು ಮೀಸಲಾತಿಗೆ ಆಗ್ರಹಿಸಿ ಭರತ್‌ಪುರ ಜಿಲ್ಲೆಯಲ್ಲಿ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿ ತಡೆದ ಮಾಲಿ, ಮೌರ್ಯ ಮತ್ತು ಕುಶ್ವಾಹಾ ಸೇರಿದಂತೆ ಆರು ಸಮುದಾಯಗಳ ಸದಸ್ಯರು ಅನಾಥರಾಗಿದ್ದಾರೆ. ಏಕೆಂದರೆ, ಅವರ ನಾಯಕರು ರಾತ್ರೋರಾತ್ರಿ ಕಣ್ಮರೆಯಾಗಿದ್ದಾರೆ. ರಸ್ತೆ ತಡೆಗಳನ್ನು ತೆಗೆದುಹಾಕುವಂತೆ ತಮ್ಮ ನಾಯಕರ ಮನವಿಯನ್ನು ಸದಸ್ಯರು ಕೇಳಲು ನಿರಾಕರಿಸಿದ ನಂತರ, ಈ ನಾಯಕರುಗಳು ನಾಪತ್ತೆಯಾಗಿದ್ದಾರೆ. ಮುಖ್ಯಮಂತ್ರಿ ಜತೆಗಿನ ಸಭೆಯ ನಂತರ ಮುಖಂಡರು ನೀಡಿದ ಮೌಖಿಕ ಭರವಸೆಗಳು ಯಾರಿಗೂ ಮನವರಿಕೆಯಾಗಲಿಲ್ಲ. ರಸ್ತೆ ತಡೆ ಕೊನೆಗೊಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಈ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬೆದರಿಕೆಯೊಡ್ಡುವ ಸಿಎಂ ಮತ್ತು ಕಿವಿಗೊಡದ ಕಾರ್ಯಕರ್ತರ ನಡುವೆ ಸಿಕ್ಕಿಬಿದ್ದ ನಾಯಕರಿಗೆ ಪಲಾಯನ ಮಾಡೋದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.

From the India Gate: ವಂದೇ ಭಾರತ್‌ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್‌ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!

ಭೂತ ಬಂಗಲೆ:ಯುಪಿ ಸರ್ಕಾರದ ಮಂತ್ರಿಗಳು ಬಳಸುತ್ತಿದ್ದ ಬಂಗಲೆಗಳಲ್ಲಿ ಒಂದಕ್ಕೆ ಮಾಟ ಮಾಡಲಾಗಿದೆ ಎನ್ನಲಾಗಿದೆ. ತನ್ನ ರಾಜಕೀಯ ಗ್ರಾಫ್ ಕುಸಿಯಲು ತನ್ನ ಮನೆಯೇ ಕಾರಣ ಎಂದು ಅದರ ಅಧಿಕಾರಸ್ಥರು ನಂಬಲಾರಂಭಿಸಿದ್ದಾರೆ. ಅವರನ್ನು ಕಡೆಗಣಿಸಲಾಗುತ್ತಿದೆ ಮತ್ತು ಅನೇಕ ನಿರ್ಧಾರಗಳನ್ನು ಅವರಿಗೆ ತಿಳಿಸಲಾಗುತ್ತಿಲ್ಲ. ಪ್ರಯಾಗ್‌ರಾಜ್‌ನಿಂದ ನಾಗರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಪತ್ನಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಈ ಕಟ್ಟಡವೇ ಕಾರಣ ಎಂದು ಈಗ ಆರೋಪಿಸಲಾಗಿದೆ. ಒಂದು ವೇಳೆ ಸ್ಪರ್ಧಿಸಿದರೆ ಮೇಯರ್ ಆಗಬಹುದಿತ್ತು ಎಂದು ಸಚಿವರು ನಂಬಿದ್ದಾರೆ. ಇಲ್ಲಿ ವಾಸ ಮಾಡಿದ್ದ ಹಿಂದಿನ ಅನೇಕರಿಗೆ ದುರಾದೃಷ್ಟ ತಾಕಿದ್ದರಿಂದ ಸಚಿವರು ಇಲ್ಲಿ ವಾಸ ಮಾಡಬೇಕೇ ಅಥವಾ ಬಿಡಬೇಕೇ ಎನ್ನುವ ಗೊಂದಲದಲ್ಲಿದ್ದಾರೆ.

Follow Us:
Download App:
  • android
  • ios