Asianet Suvarna News Asianet Suvarna News

ಆರ್‌ಎಸ್‌ಎಸ್ ಸಿದ್ಧಾಂತದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ: ರಾಹುಲ್ ಗಾಂಧಿ

‘ಬಿಜೆಪಿ ಓರ್ವ ನಾಯಕ ಎನ್ನುವ ಸಿದ್ಧಾಂತಕ್ಕೆ ಜೋತು ಬಿದ್ದಿದೆ. ಯಾಕೆ ದೇಶದಲ್ಲಿ ಹೆಚ್ಚಿನ ನಾಯಕರಿರಬಾರದು..? ಯುವ ಸಮುದಾಯದವರು ಯಾಕೆ ನಾಯಕರಾಗಬಾರದು..? ಸಾಮಾನ್ಯ ಆಟೋ ಚಾಲಕನೋ ..? ಪೊಲೀಸ್ ಅಧಿಕಾರಿಯೋ ಯಾಕೆ ನಾಯಕನಾಗಬಾರದು...? ಒಬ್ಬನೇ ವ್ಯಕ್ತಿ ಯಾಕೆ ನಾಯಕನಾಗಬೇಕು..? ಇದೇ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಇರುವ ವ್ಯತ್ಯಾಸ’ ಎಂದ ರಾಹುಲ ಗಾಂಧಿ

India did not get Freedom from the Ideology of RSS Says Rahul Gandhi grg
Author
First Published Apr 16, 2024, 8:33 AM IST

ವಯನಾಡ್‌(ಕೇರಳ)(ಏ.16): ‘ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿರುವುದು ಸಂಘ ಪರಿವಾರದ ವಸಾಹತುಶಾಹಿ ಸಿದ್ಧಾಂತಕ್ಕೆ ಒಳಗಾಗುವುದಕ್ಕೆ ಅಲ್ಲ’ ಎಂದು ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ವಯನಾಡ್‌ನಲ್ಲಿ ರೋಡ್ ಶೋ ನಡೆಸಿ ಎರಡನೇ ಹಂತದ ಲೋಕಸಭಾ ಚುನಾವಣೆ ಪ್ರಚಾರವನ್ನು ಉದ್ಘಾಟಿಸಿ ಮಾತನಾಡಿದ ರಾಹುಲ್ ‘ಬಿಜೆಪಿ ಮತ್ತು ನರೇಂದ್ರ ಮೋದಿ ಒಂದು ರಾಷ್ಟ್ರ, ಒಂದು ಭಾಷೆ, ಒಂದು ನಾಯಕನನ್ನು ನೋಡುತ್ತಾರೆ. ಇದು ದೇಶದ ಮೂಲಭೂತ ತಪ್ಪು ಗ್ರಹಿಕೆ. ಒಂದೇ ನಾಯಕ ಎನ್ನುವ ಕಲ್ಪನೆ ಯುವ ಸಮುದಾಯಕ್ಕೆ ಅವಮಾನ ಮಾಡಿದಂತಾಗುತ್ತದೆ. ಯಾವುದೇ ವಿಚಾರವನ್ನು ಬಲವಂತದ ಹೇರಿಕೆ ಮಾಡಬಾರದು. ಅದು ವ್ಯಕ್ತಿಯ ಮನಸ್ಸಿನಿಂದ ಬರಬೇಕು. ಭಾರತ ಹೂಗುಚ್ಛದಂತೆ. ಅದರಲ್ಲಿ ಪ್ರತಿ ಹೂವಿಗೂ ಬೆಲೆ ನೀಡಬೇಕು’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ದೇವಾಲಯವಿಲ್ಲ, ಪೂಜಾರಿ ಇಲ್ಲ, ಆದ್ರೂ ಮೋದಿ ಸಮುದ್ರೊಳಗೆ ಪೂಜೆ, ರಾಹುಲ್ ಗಾಂಧಿ ವಿವಾದ!

‘ಬಿಜೆಪಿ ಓರ್ವ ನಾಯಕ ಎನ್ನುವ ಸಿದ್ಧಾಂತಕ್ಕೆ ಜೋತು ಬಿದ್ದಿದೆ. ಯಾಕೆ ದೇಶದಲ್ಲಿ ಹೆಚ್ಚಿನ ನಾಯಕರಿರಬಾರದು..? ಯುವ ಸಮುದಾಯದವರು ಯಾಕೆ ನಾಯಕರಾಗಬಾರದು..? ಸಾಮಾನ್ಯ ಆಟೋ ಚಾಲಕನೋ ..? ಪೊಲೀಸ್ ಅಧಿಕಾರಿಯೋ ಯಾಕೆ ನಾಯಕನಾಗಬಾರದು...? ಒಬ್ಬನೇ ವ್ಯಕ್ತಿ ಯಾಕೆ ನಾಯಕನಾಗಬೇಕು..? ಇದೇ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಇರುವ ವ್ಯತ್ಯಾಸ’ ಎಂದು ರಾಹುಲ್ ಕೇಳಿದರು.

‘ಕಾಂಗ್ರೆಸ್ ದೇಶದ ಜನರ ನಂಬಿಕೆಯನ್ನು ಗೌರವಿಸುತ್ತದೆ. ಅವರ ಭಾಷೆ , ಧರ್ಮವನ್ನು ಪ್ರೀತಿಸುತ್ತದೆ. ಆದರೆ ಬಿಜೆಪಿ ಬಲವಂತಾಗಿ ತಮ್ಮ ಸಿದ್ಧಾಂತವನ್ನು ಹೇರಲು ಬಯಸುತ್ತದೆ. ಆರ್ ಎಸ್ ಎಸ್ ಸಿದ್ಧಾಂತದಿಂದ ದೇಶವನ್ನು ವಸಾಹತುಶಾಹಿಯಾಗಿ ಮಾಡುವುದಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿಲ್ಲ. ಪ್ರತಿಯೊಬ್ಬ ನಾಗರಿಕನು ಭಾರತವನ್ನು ಆಳಬೇಕು’ ಎಂದರು.

Follow Us:
Download App:
  • android
  • ios