ಹಿಂದೂಗಳ ನಂಬಿಕೆ, ಪ್ರಧಾನಿ ಮೋದಿ ಭಕ್ತಿಯನ್ನು ರಾಹುಲ್ ಗಾಂಧಿ ತಮಾಷೆ ಮಾಡಿ ಅವಮಾನಿಸಿದ್ದಾರೆ ಅನ್ನೋ ಆಕ್ರೋಶಗಳು ಕೇಳಿಬರುತ್ತಿದೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆ. ದ್ವಾರಕದಲ್ಲಿ ಸಮುದ್ರದೊಳಗಿಳಿದು ಶ್ರೀಕೃಷ್ಣನ ಪೂಜೆ ಮಾಡಿದ ಮೋದಿಯನ್ನು ಟೀಕಿಸುವ ಭರದಲ್ಲಿ ಹಿಂದೂಗಳ ನಂಬಿಕೆಯನ್ನು ಅವಮಾನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಕ್ರೋಶ ಹೊರಹಾಕಿದ್ದಾರೆ.

ಮಹಾರಾಷ್ಟ್ರ(ಏ.15) ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಇದರೊಂದಿಗೆ ನಾಯಕರ ವಾಕ್ಸಮರ, ಪ್ರತಿಕ್ರಿಯೆಗಳು ವಿವಾದಕ್ಕೂ ಕಾರಣವಾಗುತ್ತಿದೆ. ಇದೀಗ ರಾಹುಲ್ ಗಾಂಧಿ ಹೇಳಿಕೆ ಭಾರಿ ಆಕ್ರೋಶ ಹಾಗೂ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ ಹಿಂದೂಗಳ ನಂಬಿಕೆಯನ್ನು ತಮಾಷೆ ಮಾಡಿದ್ದಾರೆ. ದೇವಾಲಯವೇ ಇಲ್ಲ, ಪೂಜಾರಿಯೂ ಇಲ್ಲ. ಆದರೂ ಪ್ರಧಾನಿ ಮೋದಿ ಸಮುದ್ರದೊಳಕ್ಕಿಳಿದು ಪೂಜೆ ಮಾಡುತ್ತಾರೆ ಎಂದು ರಾಹುಲ್ ಗಾಂಧಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಾಹುಲ್ ಆಡಿರುವ ಮಾತುಗಳು ಹಿಂದೂಗಳ ನಂಬಿಕೆಯನ್ನು ಅಪಹಾಸ್ಯ ಮಾಡುವಂತಿದೆ ಅನ್ನೋ ಆಕ್ರೋಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ದ್ವಾರಕ ಭೇಟಿ ನೀಡಿ ಸಮುದ್ರದೊಳಗಿರುವ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದ ಘಟನೆಯನ್ನು ಉಲ್ಲೇಖಿಸುತ್ತಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದ ಭಂಡಾರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಗಾಂಧಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಶ್ರೀಕೃಷ್ಣ ಭಕ್ತರು, ಹಿಂದೂಗಳ ನಂಬಿಕೆಗೆ ಮಾಡಿದ ಅವಮಾನವಾಗಿದೆ ಅನ್ನೋ ಆಕ್ರೋಶಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ. ಹಿಂದೂಗಳ ನಂಬಿಕೆಯನ್ನು ರಾಹುಲ್ ಗಾಂಧಿ ಅಪಹಾಸ್ಯ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹಿಂದೂಗಳ ಪೂಜೆ, ಭಕ್ತಿಯ ಟಾರ್ಗೆಟ್ ಯಾಕೆ ಎಂದು ಹಲವರು ಪ್ರಶ್ನಿಸಿದ್ದರೆ.

Scroll to load tweet…

ಅಂಬೇಡ್ಕರ್‌ ಅವರೇ ಬಂದ್ರೂ ದೇಶದ ಸಂವಿಧಾನ ಬದಲಾಯಿಸೋಕೆ ಆಗಲ್ಲ, ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ!

ಫೆಬ್ರವರಿ 25ರಂದು ಪ್ರಧಾನಿ ಮೋದಿ ಗುಜರಾತ್‌ನ ದ್ವಾರಕ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಮುದ್ರದೊಳಗೆ ಮುಳುಗಿರುವ ಶ್ರೀಕೃಷ್ಣನ ನಗರಕ್ಕೆ ಸ್ಕೂಬಾ ಡೈವಿಂಗ್ ಮೂಲಕ ತೆರಳಿದ ಪ್ರಧಾನಿ ಮೋದಿ ನವಿಲು ಗರಿ ಅರ್ಪಿಸಿ ಪೂಜೆ ಸಲ್ಲಿಸಿದ್ದರು. ಬಳಿಕ ಈ ಕುರಿತು ತಮ್ಮ ದಿವ್ಯ ಅನುಭವವನ್ನು ಹಂಚಿಕೊಂಡಿದ್ದರು. ನೀರಿನಲ್ಲಿ ಮುಳುಗಿರುವ ದ್ವಾರಕ ನಗರದಲ್ಲಿ ಪ್ರಾರ್ಥನೆ ಮಾಡುವುದು ನನಗೆ ಅತ್ಯಂತ ದಿವ್ಯ ಅನುಭವ ನೀಡಿತ್ತು. ಈ ಪೂಜೆಯಲ್ಲಿ ನಾನು ಆಧ್ಯಾತ್ಮಿಕ ಭವ್ಯತೆ ಹಗೂ ಪ್ರಾಚೀನ ಯುಗದ ಸಂಪರ್ಕದಲ್ಲಿರುವಂತೆ ಭಾಸವಾಗಿತ್ತು. ಭಗವಾನ್ ಶ್ರೀಕೃಷ್ಣ ನಮ್ಮೆಲ್ಲರನ್ನು ಈಶೀರ್ವದಿಸಲಿ ಎಂದು ಮೋದಿ ಟ್ವೀಟ್ ಮಾಡಿದ್ದರು. 

ಮೋದಿ ದ್ವಾರಕ ಭೇಟಿ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ವ್ಯಂಗ್ಯವಾಡಿದ್ದರು. ನವಿಲುಗರಿ ಸಮುದ್ರದ ಆಳದಲ್ಲಿ ಹೋಗಿ ಹಾಕಿದ್ರೆ ಅದು ಮತ್ತೆ ಅಲ್ಲಿ ಬೆಳೆಯುತ್ತೆ ಏನೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಅಲ್ಲಿ ಬೆಳೆಯುತ್ತಾ ನೀವೇ ಹೇಳಿ ನೋಡೋಣ? ಎಂದು ಫೆಬ್ರವರಿ ತಿಂಗಳಲ್ಲಿ ಖರ್ಗೆ ಪ್ರಶ್ನಿಸಿದ್ದರು. ದ್ವಾರಕೆ ಸಮುದ್ರದಾಳದಲ್ಲಿ ಹೋಗಿ ನವಿಲು ಗರಿ ಇಟ್ಟು ಬಂದರೆ ಏನು ಫಲ? ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಅಲ್ಲಿ ಬೆಳೆಯುತ್ತಾ? ನಿಸರ್ಗದ ನಿಯಮದಲ್ಲಿ ನಾನು ನಂಬಿಕೆ ಇಟ್ಟಿರೋನು, ಆ ಪ್ರಕಾರವೇ ನಡೆಯಬೇಕು. ನಿಸರ್ಗದ ವಿರುದ್ಧ ಯಾರಿಗೂ ಕೂಡ ಯಶಸ್ವಿ ಸಿಗೋದಿಲ್ಲ. ಇದೇ ಬುದ್ಧನ ತತ್ವ ಎಂದು ಡಾ. ಖರ್ಗೆ ಕಲಬುರಗಿಯಲ್ಲಿ ಹೇಳಿದ್ದರು.

Lok Sabha Election 2024: ಏ.17ಕ್ಕೆ ಮಂಡ್ಯ, ಕೋಲಾರದಲ್ಲಿ ರಾಹುಲ್‌ ಗಾಂಧಿ ಪ್ರಚಾರ