ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತನ್ನ ಗೇರ್ ಬದಲಾಯಿಸಿದೆ. ಭಾರತ ಜಾತ್ಯಾತೀತ ರಾಷ್ಟ್ರ. ಆರ್‌ಎಸ್ಎಸ್ ಅಜೆಂಡಾವಾಗಿರುವ ಹಿಂದೂ ರಾಷ್ಟ್ರ ಮಾಡಲು ಬಿಡಲ್ಲ ಅನ್ನೋ ನಿಲುವು ಹೊಂದಿರುವ ಕಾಂಗ್ರೆಸ್ ಇದೀಗ ವರಸೆ ಬದಲಾಯಿಸಿದೆ. ಶೇಕಡಾ 82 ರಷ್ಟು ಹಿಂದುಗಳಿರುವ ಭಾರತ ಈಗಾಗಲೇ ಹಿಂದೂ ರಾಷ್ಟ್ರ ಎಂದಿದೆ.
ಇಂದೋರ್(ಆ.08) ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಈಗಾಗಲೇ ವಿಪಕ್ಷಗಳ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಕೇಂದ್ರದಲ್ಲಿ ಬಿಜೆಪಿ ಮಣಿಸಲು ಅತೀ ದೊಡ್ಡ ಪ್ಲಾನ್ ಮಾಡಿದೆ. ಇದಕ್ಕೂ ಮೊದಲು ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಸತತ ಪ್ರಯತ್ನದಲ್ಲಿದೆ. ಇದಕ್ಕಾಗಿ ಕಾಂಗ್ರೆಸ್ ತನ್ನ ವರಸೆಯನ್ನೇ ಬದಲಿಸಿದೆ. ಭಾರತ ಈಗಾಗಲೇ ಹಿಂದೂ ರಾಷ್ಟ್ರ ಎಂದಿದೆ. ಶೇಕಡಾ 82 ರಷ್ಟು ಹಿಂದುಗಳಿರುವ ಭಾರತ ಅಂಕಿ ಅಂಶಗಳ ಪ್ರಕಾರ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ ಎಂದು ಮಧ್ಯ ಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಹೇಳಿದ್ದಾರೆ.
ಭಾಗೇಶ್ವರಧಾಮದ ಗುರೂಜಿ ಧೀರೇಂದ್ರ ಶಾಸ್ತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಮಲ್ ನಾಥ್, ಈ ಹೇಳಿಕೆ ನೀಡಿ ಕಾಂಗ್ರೆಸ್ ನಿಲುವನ್ನೇ ಬದಲಿಸಿದ್ದಾರೆ. ಧೀರೇಂದ್ರ ಶಾಸ್ತ್ರಿ ಈಗಾಗಲೇ ಹಲವು ವೇದಿಕೆಗಳಲ್ಲಿ ಹಿಂದೂ ರಾಷ್ಟ್ರದ ಮಾತುಗಳನ್ನಾಡಿದ್ದಾರೆ. ಈ ವಿಚಾರ ಪ್ರಸ್ತಾಪಿಸಿದ ಕಮಲ್ ನಾಥ್, ಭಾರತದಲ್ಲಿ ಶೇಕಡಾ 82 ರಷ್ಟು ಹಿಂದೂಗಳಿದ್ದಾರೆ. ಹೀಗಾಗಿ ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ.
ಮಾಜಿ ಸಿಎಂ ಫೋನ್ ಹ್ಯಾಕ್ ಮಾಡಿ ಕಾಂಗ್ರೆಸ್ ನಾಯಕರಿಗೆ ತಲಾ 10 ಲಕ್ಷ ರೂಗೆ ಡಿಮಾಂಡ್!
ಆರ್‌ಜೆಡಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬೆನ್ನಲ್ಲೇ ಇದೀಗ ಕಮಲ್ ನಾಥ್ ಈ ಹೇಳಿಕೆ ನೀಡಿದ್ದಾರೆ. ಕಮಲ್ ನಾಥ್ ಪುತ್ರ ನಕುಲ್ ಕಮಲ್ ನಾಥ್, ಧಿರೇಂದ್ರ ಶಾಸ್ತ್ರಿಯನ್ನು ಚಿಂದ್‌ವಾರಾ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಇದು ಆರ್‌ಜೆಡಿ ನಾಯಕರನ್ನು ಕೆರಳಿಸಿತ್ತು. ಆರ್‌ಜೆಡಿ ಹಾಗೂ ಕಾಂಗ್ರೆಸ್ ಈಗಾಗಲೇ ವಿಪಕ್ಷಗಳ ಮೈತ್ರಿಯಲ್ಲಿರುವ ಪ್ರಮುಖ ಪಕ್ಷಗಳಾಗಿದೆ. ಆದರೆ ಆತಂರಿಕ ಭಿನ್ನಭಿಪ್ರಾಯ ಶುರುವಾಗಿದೆ.
ಧಿರೇಂದ್ರ ಶಾಸ್ತ್ರಿಯ ಹಿಂದುತ್ವ ಅಜೆಂಡಾವನ್ನು ನಾವು ವಿರೋಧಿಸುತ್ತೇವೆ. ಕಾಂಗ್ರೆಸ್ ಕೂಡ ಇದೇ ನಿಲುವು ಹೊಂದಿದೆ. ಆದರೆ ಇದೀಗ ಕಮಲ್ ನಾಥ್ ಹಾಗೂ ನಕಲು ಕಮಲ್ ನಾಥ್ ಧಿರೇಂದ್ರ ಶಾಸ್ತ್ರಿ ಕಾರ್ಯಕ್ರಮದಲ್ಲಿ ಹಿಂದುತ್ವ ಪ್ರತಿಪಾದಿಸುತ್ತಿದ್ದಾರೆ. ಇದು ನಿಮ್ಮ ನಿಲುವಿಗೆ ವಿರುದ್ಧವಾಗಿದೆ ಎಂದು ಆರ್‌ಜೆಡಿ ನಾಯಕ ತಿವಾರಿ ಹೇಳಿದ್ದಾರೆ.
ಕಮಲ್ ನಾಥ್ ಹಿಂದುತ್ವ ಹೇಳಿಕೆ ಇದೀಗ ಕಾಂಗ್ರೆಸ್ ನಿಲುವನ್ನೇ ಪ್ರಶ್ನಿಸುತ್ತಿದೆ. ಆದರೆ ಹಿಂದುತ್ವ ಮತ ಕ್ರೋಢಿಕರೀಸಲು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಾರಿ ಕಸರತ್ತು ನಡೆಸುತ್ತಿದೆ. ಇದರ ಹಿಂದೆ ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು ರಣತಂತ್ರವಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದ ಸುನಿಲ್ ಕನುಗೋಲು ಅವರನ್ನು ಮಧ್ಯ ಪ್ರದೇಶ ಚುನಾವಣೆ ತಂತ್ರ ರೂಪಿಸಲು ಈಗಾಗಲೇ ನೇಮಕ ಮಾಡಲಾಗಿದೆ.
400 ಕಾರಿನ ಬೆಂಗಾವಲು ಪಡೆ ಜತೆ 300 ಕಿ.ಮೀ. ಪ್ರಯಾಣ ಮಾಡಿ ಬಿಜೆಪಿಯಿಂದ ಮರಳಿ ಕಾಂಗ್ರೆಸ್ ಸೇರಿದ ನಾಯಕ
ಕನುಗೋಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ರಣನೀತಿ ರೂಪಿಸಿದ ಪ್ರಶಾಂತ ಕಿಶೋರ್ ತಂಡದಲ್ಲಿದ್ದರು. ನಂತರ ಪ್ರತ್ಯೇಕಗೊಂಡು 2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಪರ ರಣನೀತಿ ರೂಪಿಸಿದ್ದರು. ಈಗ 2023ರಲ್ಲಿ ಅವರು ಕರ್ನಾಟಕ ಕಾಂಗ್ರೆಸ್ ಪರ ರಣನೀತಿ ರೂಪಿಸಿ ಯಶಸ್ಸು ಕಂಡಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಪೇಸಿಎಂ ಅಭಿಯಾನ, ಕ್ರೈ ಸಿಎಂ ಆಭಿಯಾನ ಹಾಗೂ ಚುನಾವಣೆಯ ಕೊನೆಗೆ ಕಾಂಗ್ರೆಸ್ ಪ್ರಕಟಿಸಿದ ‘ಬಿಜೆಪಿ ಭ್ರಷ್ಟಾಚಾರ ರೇಟ್ ಕಾರ್ಡ್’ ಹಿಂದಿನ ಪ್ರೇರಣೆಯೇ ಕನುಗೋಲು ಎಂದು ಮೂಲಗಳು ಹೇಳಿವೆ.
