ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ, ಎಲ್ಲರಿಗೂ ಮಂತ್ರಿ ಆಗುವ ಆಸೆ ಇರುತ್ತದೆ: ಸವದಿ

ರಾಜಕಾರಣದಲ್ಲಿ ಯಾರೂ ಸನ್ಯಾಸರಲ್ಲ, ಆ ಆಸೆ ಪಡುವುದರಲ್ಲಿ ತಪ್ಪೂ ಏನಿಲ್ಲ. ಆದರೆ, ಅನಿವಾರ್ಯತೆ ಇವತ್ತು 34ಕ್ಕಿಂತ ಹೆಚ್ಚು ಮಂತ್ರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹೀಗಿರುವಾಗ ಸಾಕಷ್ಟುಜನ ಕಾಂಗ್ರೆಸ್‌ ಪಕ್ಷದಲ್ಲಿ ಅನೇಕ ವರ್ಷಗಳಿಂದ ಇದ್ದು, ಪಕ್ಷಕ್ಕೆ ತಮ್ಮ ಕೊಡುಗೆ ನೀಡಿದ ಬಹಳಷ್ಟುಜನ ಆರಿಸಿ ಬಂದಿದ್ದಾರೆ. ಹೀಗಾಗಿ ಹೊಸಬರಿಗೆ ಈಗ ಅವಕಾಶ ಸಿಕ್ಕಿರಲಿಕ್ಕಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

In politics, everyone wants to become a minister says laxman savadi at athani belgum rav

ಬೆಳಗಾವಿ (ಮೇ.29) : ರಾಜಕಾರಣದಲ್ಲಿ ಯಾರೂ ಸನ್ಯಾಸರಲ್ಲ, ಆ ಆಸೆ ಪಡುವುದರಲ್ಲಿ ತಪ್ಪೂ ಏನಿಲ್ಲ. ಆದರೆ, ಅನಿವಾರ್ಯತೆ ಇವತ್ತು 34ಕ್ಕಿಂತ ಹೆಚ್ಚು ಮಂತ್ರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹೀಗಿರುವಾಗ ಸಾಕಷ್ಟುಜನ ಕಾಂಗ್ರೆಸ್‌ ಪಕ್ಷದಲ್ಲಿ ಅನೇಕ ವರ್ಷಗಳಿಂದ ಇದ್ದು, ಪಕ್ಷಕ್ಕೆ ತಮ್ಮ ಕೊಡುಗೆ ನೀಡಿದ ಬಹಳಷ್ಟುಜನ ಆರಿಸಿ ಬಂದಿದ್ದಾರೆ. ಹೀಗಾಗಿ ಹೊಸಬರಿಗೆ ಈಗ ಅವಕಾಶ ಸಿಕ್ಕಿರಲಿಕ್ಕಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಸಚಿವರು ಆಗಬೇಕು ಎಂಬ ಆಸೆ ಇರುತ್ತದೆ. ಮೊದಲು ಶಾಸಕ ಆಗಬೇಕೆಂದು, ಆ ಮೇಲೆ ಮಂತ್ರಿ ಯಾಗಬೇಕೆಂದಿರುತ್ತದೆ. ಮಂತ್ರಿ ಆದ ಮೇಲೆ ಒಳ್ಳೆಯ ಖಾತೆ ಸಿಗಬೇಕೆಂದು ಇರುತ್ತದೆ. ಮಂತ್ರಿ, ಆದಮೇಲೆ ಉಪಮುಖ್ಯಮಂತ್ರಿ ಆಗಬೇಕು. ಬಳಿಕ ಸಿಎಂ ಆಗಬೇಕು ಈ ರೀತಿ ಬಯಕೆ ಸಹಜವಾಗಿ ಎಲ್ಲರಲ್ಲೂ ಮೂಡಿಯೇ ಇರುತ್ತದೆ ಎಂದರು.

ಜನಪರ ಆಡಳಿತ ನೀಡಲು ನಮ್ಮ ಸರ್ಕಾರ ಬದ್ಧ: ಗೃಹಸಚಿವ ಡಾ.ಜಿ.ಪರಮೇಶ್ವರ್

ರಾಜಕಾರಣದಲ್ಲಿ ದೂರದೃಷ್ಟಿ, ತಾಳ್ಮೆ ಎರಡೂ ಇರಬೇಕಾಗುತ್ತದೆ. ಹಿಂದೆ ಇತಿಹಾಸ ಪುಟ ತಿರುವಿ ನೋಡಿದಾಗ ಗೊತ್ತಾಗುತ್ತದೆ. ಅನೇಕ ಜನ ಶಾಸಕರಾಗಬೇಕು ಅಂತಾ ಜೀವನ ಪರ್ಯಂತ ಹೋರಾಟ ಮಾಡಿದರೂ ಆಗಲಿಲ್ಲ. ಎಷ್ಟೋ ಜನ ಶಾಸಕರಾಗುತ್ತಾರೆ. ಮಂತ್ರಿ ಆಗಲು ಆಗುವುದಿಲ್ಲ. ದೈವಾನುಸಾರ, ಸಂದರ್ಭಕ್ಕನುಸಾರ ಶಾಸಕರು ಆಗುತ್ತಾರೆ, ಮಂತ್ರಿಗಳು ಆಗುತ್ತಾರೆ. ನಾನು ಇತ್ತೀಚೆಗೆ ಪಕ್ಷ ಸೇರಿದಂತವರು. ಜನರ ಬಯಕೆ ಹಾಗೂ ಅಭಿಮಾನಿಗಳ ಬಯಕೆ ಸಹಜ. ನಮ್ಮ ನಾಯಕರು ಮಂತ್ರಿ ಆಗಬೇಕು ಅಂತಾ ಎಲ್ಲ ಶಾಸಕರ ಅಭಿಮಾನಿಗಳಲ್ಲೂ ಅಪೇಕ್ಷೆ ಇರುತ್ತದೆ. ಆದರೆ, 34 ಜನರ ಸೀಮಿತ ಮಾಡುವ ಸಂದರ್ಭದಲ್ಲಿ ಅನಿವಾರ್ಯವಾಗಿ ಎಲ್ಲವೂ ಈಡೇರಿಸಲು ಕಷ್ಟಸಾಧ್ಯ ಎಂದು ತಿಳಿಸಿದರು.

ನಾನು ಸಚಿವನಾಗಿಲ್ಲ ಎಂಬ ನಮಗೇನೂ ಕೊರಗು ಇಲ್ಲ. ರಾಷ್ಟ್ರೀಯ ಪಕ್ಷ ಮತ್ತು ಆಡಳಿತ ಪಕ್ಷದ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಲು ಅವಕಾಶ ಇದೆ. ಆ ಅವಕಾಶ ಬಳಸಿಕೊಂಡು ನಮ್ಮ ಕ್ಷೇತ್ರದ ಕೆಲಸ ಮಾಡುತ್ತೇವೆ. ಜನ ನಮಗೆ ಬಹಳ ದೊಡ್ಡ ಪ್ರಮಾಣದಲ್ಲಿ ಮತ ಹಾಕಿ ಆಯ್ಕೆ ಮಾಡಿರುವಂತದ್ದು. ನನ್ನ ಮೇಲೆ ಭರವಸೆ ಮತ್ತು ನಿರೀಕ್ಷೆ ಇದೆ. ಆ ನಿರೀಕ್ಷೆ ಮಟ್ಟದಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್‌Ü ಅಧಿಕಾರಕ್ಕೆ ಬಂದಿದೆ. ಆಡಳಿತ ಪಕ್ಷದ ಶಾಸಕರಾಗಿದ್ದೇವೆ. ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡೋಣ ಎಂದರು.

ರಮೇಶ ಜಾರಕಿಹೊಳಿಗೆ ಟಾಂಗ್‌:

ರಮೇಶ ಜಾರಕಿಹೊಳಿ ಸೈಲೆಂಟ್‌ ಆಗಿದ್ದರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಪರೋಕ್ಷವಾಗಿ ರಮೇಶ ಜಾರಕಿಹೊಳಿಗೆ ಟಾಂಗ್‌ ನೀಡಿದ ಸವದಿ, ನನಗೆ ಕೇಳಿದರೆ ಏನು ಉತ್ತರ ಸಿಗುತ್ತದೆ. ಅವರನ್ನೇ ಕೇಳಬೇಕು. ಚುನಾವಣೆಯಲ್ಲಿ ಬಹಳ ಓಡಾಡುತ್ತೀದೀರಿ, ಈಗ್ಯಾಕೆ ಸೈಲೆಂಟ್‌ ಆಗಿದ್ದಾರೆ ಎಂಬುವುದನ್ನು ಅವರನ್ನೇ ಕೇಳಬೇಕು ಎಂದರು.

ಅಥಣಿಯಲ್ಲಿ ಸರ್ಕಾರಿ ಪ್ರೌಢಶಾಲೆ ಇರದ ಕುರಿತು ಪ್ರತಿಕ್ರಿಯಿಸಿದ ಅವರು, ಬಹಳಷ್ಟುಬಾರಿ ಸರ್ಕಾರಿ ಪ್ರೌಢಾಶಾಲೆ ಇರದ ಒಂದೇ ಪ್ರಶ್ನೆ ಬರುತ್ತದೆ. ಆದರೆ, ನಾವು ಅನೇಕ ಶಿಕ್ಷಣ ಸಂಸ್ಥೆಗಳನ್ನು ತಂದಿದ್ದೇವೆ

ಐಟಿಐ, ಡಿಪ್ಲೊಮಾ, ಪದವಿ ಕಾಲೇಜು, ಪಶುವೈದ್ಯಕೀಯ ಕಾಲೇಜು ತಂದಿದ್ದೇವೆ. ಯಾವ ಗ್ರಾಮದಲ್ಲಿ ಖಾಸಗಿ ಸಂಸ್ಥೆ ಇರುತ್ತದೆಯೋ ಅಲ್ಲಿ 5 ಕಿಮೀ ವ್ಯಾಪ್ತಿಯಲ್ಲಿ ಇನ್ನೊಂದು ಹೈಸ್ಕೂಲ… ನೀಡಬಾರದೆಂಬ ಗೈಡ್‌ಲೈನ್ಸ್‌ ಇದೆ. ಅಥಣಿಯಲ್ಲಿ 20 ರಿಂದ 25 ಖಾಸಗಿ ಸಂಸ್ಥೆಗಳ ಹೈಸ್ಕೂಲ್‌ಗಳು ಇವೆ. ಹೀಗಾಗಿ ಅಥಣಿಯಲ್ಲಿ ಸರ್ಕಾರಿ ಹೈಸ್ಕೂಲ… ಆಗಿಲ್ಲ . ವಿಶೇಷ ಪ್ರಕರಣ ಎಂದು ಕೊಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಸರ್ಕಾರದಲ್ಲಿ ಆ ಹೈಸ್ಕೂಲ… ತರುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಅಮ್ಮಾಜೇಶ್ವರಿ ಏತನೀರಾವರಿ ಯೋಜನೆಗೆ ಸರ್ಕಾರ ಬ್ರೇಕ್‌ ಹಾಕಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಟೆಂಡರ್‌ ಆಗಿ ಫೈನಲ… ಆಗಿಲ್ಲ, ಬ್ರೇಕ್‌ ಹಾಕುವ ಪ್ರಶ್ನೆ ಎಲ್ಲಿ ಬರುತ್ತದೆ. ಒಂದು ಯೋಜನೆಗೆ ಕೇವಲ ಆಡಳಿತಾತ್ಮಕ ಮಂಜೂರು ಮಾಡಿದರೆ ಆಗುವುದಿಲ್ಲ. ಅದಕ್ಕೆ ಹಣ ಕೂಡ ಮೀಸಲು ಇಡಬೇಕಾಗುತ್ತದೆ. ಮುಂದಿನ ಬಜೆಟ್‌ನಲ್ಲಿ ಹಣ ಮೀಸಲು ಇಟ್ಟು ನೀರಾವರಿ ಮಾಡುವುದು ಮೊದಲ ಆದ್ಯತೆ ನೀಡಲಾಗುವುದು. ಡಿ.ಕೆ.ಶಿವಕುಮಾರ ಜಲಸಂಪನ್ಮೂಲ ಸಚಿವರಿರುವುದರಿಂದ ನಮಗೆ ಸಹಾಯ ಆಗುತ್ತದೆ. ಹೊಸದಾಗಿ ಮಂಜೂರಾತಿ ಪಡೆದು ನೀರಾವರಿ ಸಚಿವರ ಕರೆತಂದು ಅದೇ ಭಾಗದಲ್ಲಿ ಪೂಜೆ ಮಾಡುವ ಕೆಲಸ ಮಾಡುತ್ತೇವೆ ಎಂದರು.

ನಾನು, ಸವದಿ ಸಚಿವರಾಗಬೇಕೆಂಬುದು ಜನರ ಆಸೆ: ಜಗದೀಶ ಶೆಟ್ಟರ್‌

ನಾನು ಮೊದಲನೇಯದಾಗಿ ಸಿದ್ದರಾಮಯ್ಯ ಸಂಪುಟಕ್ಕೆ ಶುಭಕೋರುವೆ. ರಾಜ್ಯದಲ್ಲಿ ಹೊಸ ಚಿಂತನೆ ಇಟ್ಟುಕೊಂಡು ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನರ ಬೇಡಿಕೆ ಈಡೇರಿಸಿ ಜನಪ್ರಿಯ ಸರ್ಕಾರವಾಗಲಿ ಎಂಬುವುದು ನಮ್ಮ ಬಯಕೆ.

ಲಕ್ಷ್ಮಣ ಸವದಿ, ಅಥಣಿ ಶಾಸಕ.

Latest Videos
Follow Us:
Download App:
  • android
  • ios