ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ನಾನಿಲ್ಲ ನಾನು ಗೃಹ ಸಚಿವನಾಗಿಯೇ ಇರುತ್ತೇನೆ  ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

ಮೈಸೂರು (ಜು.15): ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ನಾನಿಲ್ಲ. ನಾನು ಗೃಹ ಸಚಿವನಾಗಿಯೇ ಇರುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಿಎಂ ರೇಸ್‌ನಲ್ಲಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನಗೆ ಪಕ್ಷ ಈ ಜವಾಬ್ದಾರಿ ನೀಡಿದೆ. ನನಗೆ ಇಷ್ಟೇ ಸಾಕು. ಇದೂ ಕೂಡ ಹೈಕಮಾಂಡ್‌ ನೀಡಿರುವ ಜವಾಬ್ದಾರಿ. ನಾನು ಏನೋ ಹೇಳಿ, ನೀವು ಅದಕ್ಕೆ ಮತ್ತೆ ಇನ್ಯಾರದೋ ಪ್ರತಿಕ್ರಿಯೆ ಪಡೆಯುತ್ತೀರಿ’ ಎಂದರು.

ಸಾಲ ಪಡೆದು ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ: ಕೇಂದ್ರದ ಭರವಸೆ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಲೇ ಇದ್ದು ಇದೀಗ ಇದಕ್ಕೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಹುದ್ದೆ ಆಕಾಂಕ್ಷಿ ಅಲ್ಲ ಎಂದಿದ್ದಾರೆ.