Asianet Suvarna News Asianet Suvarna News

ಪಕ್ಷ ಹೇಳಿದರೆ ಡಿಸಿಎಂ ಪಟ್ಟಬಿಡಲು ನಾವು ರೆಡಿ!

ಪಕ್ಷ ಹೇಳಿದರೆ ಡಿಸಿಎಂ ಪಟ್ಟಬಿಡಲು ನಾವು ರೆಡಿ| ಸ್ಥಾನ ಪಲ್ಲಟವಾದರೆ ಬೇಸರವಿಲ್ಲ: ಅಶ್ವತ್ಥ್| ಪಕ್ಷದ ನಿರ್ಧಾರಕ್ಕೆ ನಾನು ಬದ್ಧ: ಕಾರಜೋಳ

If The Party Wants We Are Ready To Leave The Dy CM Post Says CN Ashwath Narayan
Author
Bangalore, First Published Dec 13, 2019, 7:50 AM IST

ಬೆಂಗಳೂರು[ಡಿ.13]: ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮ ಉಪಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌ ಹಾಗೂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಈಗ ಇರುವ ಉಪಮುಖ್ಯಮಂತ್ರಿ ಹುದ್ದೆ ರದ್ದಾಗುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗೆ ಸಂಬಂಧಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಇಬ್ಬರೂ ಈ ರೀತಿಯಾಗಿ ಉತ್ತರಿಸಿದ್ದಾರೆ.

ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, ಸಚಿವ ಸಂಪುಟ ವೇಳೆ ತಮಗೆ ನೀಡಿ​ರುವ ಉಪ​ಮು​ಖ್ಯ​ಮಂತ್ರಿ ಸ್ಥಾನವನ್ನು ವಾಪಸ್‌ ಪಡೆ​ದರೂ ತಾವು ಬೇಸರ ಮಾಡಿ​ಕೊ​ಳ್ಳು​ವು​ದಿಲ್ಲ. ಪಕ್ಷದ ತೀರ್ಮಾ​ನಕ್ಕೆ ಬದ್ಧ​ನಾ​ಗಿ​ರು​ತ್ತೇನೆ ಎಂದು ತಿಳಿಸಿದರು. ಉಪ​ಚು​ನಾ​ವ​ಣೆಯಲ್ಲಿ 12 ಮಂದಿ ಬಿಜೆಪಿ ಅಭ್ಯ​ರ್ಥಿ​ಗಳು ಆಯ್ಕೆ​ಯಾ​ಗಿ​ದ್ದಾರೆ. ಅವ​ರಿಗೆ ಸಚಿವ ಸ್ಥಾನ ನೀಡುವ ಸಲು​ವಾಗಿ ತಮ್ಮ ಸ್ಥಾನ ಪಲ್ಲ​ಟ​ವಾ​ದರೂ ಬೇಸ​ರ​ವಿಲ್ಲ. ರಾಜ​ಕಾ​ರ​ಣ​ದಲ್ಲಿ ಸೇಫ್‌ ರಿಸ್ಕ್‌ ಏನೂ ಇಲ್ಲ. ಮುಖ್ಯ​ಮಂತ್ರಿ​ಗ​ಳಿಗೆ ಎಲ್ಲಾ ಅಧಿ​ಕಾರ ಇರು​ತ್ತದೆ. ಅವರು ತೆಗೆ​ದು​ಕೊ​ಳ್ಳುವ ನಿರ್ಣ​ಯಕ್ಕೆ ಬದ್ಧ​ನಾ​ಗಿ​ರು​ತ್ತೇನೆ ಎಂದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ ಹುದ್ದೆ ರದ್ದಾಗುವುದರ ಕುರಿತು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಏನೇ ಇದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹೈಕಮಾಂಡ್‌ ಜೊತೆಗೂಡಿಯೇ ನಿರ್ಣಯ ತೆಗೆದುಕೊಳ್ಳುತ್ತಾರೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧರಾಗಿರುತ್ತೇನೆ ಎಂದು ಹೇಳಿದರು.

ಇನ್ನು ಸಚಿವ ಸ್ಥಾನ ಹಂಚಿಕೆ ವೇಳೆ ಎಲ್ಲಾ ಪ್ರದೇಶಕ್ಕೆ ಸಮಾನವಾದ ಪ್ರಾಧಾನ್ಯತೆ ನೀಡಲಾಗುವುದು. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿ ನಿರ್ಣಯ ಮಾಡುತ್ತಾರೆ. ಅಲ್ಲಿಯವರೆಗೆ ಕಾಯಬೇಕು ಎಂದರು.

Follow Us:
Download App:
  • android
  • ios