ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ್ರೆ, ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಪ್ರತಾಪ್ ಸಿಂಹ!
ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಿ. ನೀವು ಒಂದು ಸ್ವಲ್ಪ ಮೈಮರೆತರೂ ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರು (ಫೆ.24): ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಆದ್ದರಿಂದ ಮತ್ತೊಮ್ಮೆ ಬಿಜೆಪಿ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರವನ್ನು ತರಲು ಪ್ರಯತ್ನ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಗುರುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡುವ ವೇಳೆ ಪ್ರತಾಪ್ ಸಿಂಹ ಈ ಮಾತು ಹೇಳಿದ್ದಾರೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮದುವೆ, ಮುಂಜಿ, ಬೀಗರ ಊಟ ಅನೇಕ ಕಾರ್ಯಕ್ರಮಕ್ಕೆ ಮೈಸೂರಿಗೆ ಬರುತ್ತಿದ್ದರು. ಆದರೆ, ದುಷ್ಕರ್ಮಿಗಳಿಂದ ಹತ್ಯೆಯಾದ ಕ್ಯಾತಮಾರನಹಳ್ಳಿಯ ರಾಜುವಿನ ಮನೆಗೆ ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ಪಿಎಫ್ಐ, ಕೆಎಫ್ ಡಿಯ 175 ಸದಸ್ಯರ ಮೇಲಿದ್ದ ಪ್ರಕರಣವನ್ನು ಸಿದ್ದರಾಮಯ್ಯ ವಾಪಸ್ ಪಡೆದರು. ಇದರ ಪರಿಣಾಮದಿಂದಾಗಿ ಅವರು ಸಿಎಂ ಆಗಿದ್ದ ಔಏಳೆ ಎರಡು ಡಜನ್ ಹಿಂದು ಕಾರ್ಯಕರ್ತರ ಹತ್ಯೆ ನಡೆಯಲು ಕಾರಣವಾಯಿತು. ಈಗ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಿದ್ಧರಾಮಯ್ಯ ಯೋಚನೆ ಮಾಡುತ್ತಿದ್ದಾರೆ. ಒಂದು ವೇಳೆ ನಮ್ಮ ಕಾರ್ಯಕರ್ಯರು ಈ ವೇಳೆ ಮೈ ಮರೆತರೆ, ರಾಜ್ಯದಲ್ಲಿ ಮತ್ತೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ತಾಲಿಬಾನ್ ಸರ್ಕಾರದ ಹೇಳಿಕೆ ವಿಚಾರ ವಿವಾದವಾಗುತ್ತಿದ್ದಂತೆ ಸ್ವತಃ ಪ್ರತಾಪ್ ಸಿಂಹ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 'ಹೌದು, ನಾನು ಕಾಂಗ್ರೆಸ್ ಕುರಿತು ಹೇಳಿಕೆ ನೀಡಿದ್ದೇನೆ. ಸಿದ್ದರಾಮಯ್ಯ ಕೆಎಫ್‌ಡಿ, ಪಿಎಫ್‌ಐ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು. ಅವರ ಮೇಲಿದ್ದ 175 ಕೇಸ್‌ಗಳನ್ನು ವಾಪಾಸ್ ತೆಗೆದುಕೊಂಡರು. ಇದರ ಪರಿಣಾಮವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆಯಾಗಿದ್ದನ್ನು ಎಲ್ಲರೂ ನೋಡಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಬರುತ್ತೆ. ಕಪಾಲಿ ಬೆಟ್ಟವನ್ನು ಯೇಸು ಬೆಟ್ಟ ಮಾಡುತ್ತಾರೆ. ಇದೆಲ್ಲವನ್ನೂ ನೋಡಿಯೇ ಈ ಹೇಳಿಕೆ ನೀಡಿದ್ದೇನೆ' ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೋದಿ ನನ್ನ ಪಾಲಿನ ದೇವರು: ರಾಜ್ಯ ರಾಜಕಾರಣಕ್ಕೆ ಬರುವ ವಿಚಾರದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ನಾನು 2029 ರವರೆಗೆ ಮಾತ್ರ ರಾಜಕೀಯ ಯೋಚನೆ ಮಾಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಕೈ ಕೆಳಗೆ ಕೆಲಸ ಮಾಡಲು ನನಗೆ ಇಷ್ಟ. ಮೋದಿಯವರು ನನ್ನ ಪಾಲಿನ ದೇವರು. 15 ವರ್ಷದಲ್ಲಿ ಒಬ್ಬ ಸಂಸದನಾಗಿ ಎಷ್ಟು ಕೆಲಸ ಮಾಡಬಹುದು ಅದನ್ನ ಮಾಡುತ್ತೇನೆ. ನಾನು ಲಾಂಗ್ ಟರ್ಮ್ ಪಾಲಿಟೆಕ್ಸ್ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ರಾಜಕಾರಣದಲ್ಲಿ ಇರಬೇಕಾ ಬೇಡ್ವಾ ಎನ್ನುವ ಯೋಚನೆ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.
Expressway: ತಿಂಗಳೊಳಗೆ ಮೈಸೂರು- ಬೆಂಗಳೂರು ಹೆದ್ದಾರಿ ಪೂರ್ಣ: ಸಂಸದ ಪ್ರತಾಪ ಸಿಂಹ
ಸಕ್ರಿಯ ರಾಜಕಾರಣದಲ್ಲಿ ಯಡಿಯೂರಪ್ಪ ಇರ್ತಾರೆ: ಯಡಿಯೂರಪ್ಪ ಚುನಾವಣ ರಾಜಕೀಯ ನಿವೃತ್ತಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಕ್ರಿಯ ರಾಜಕಾರಣದಲ್ಲಿ ಯಡಿಯೂರಪ್ಪ ಇರ್ತಾರೆ. ಸಿದ್ದರಾಮಯ್ಯ ಹಾಗೂ ಉಳಿದವರ ರಾಜಕಾರಣವನ್ನೆಲ್ಲ ಮುಗಿಸುತ್ತಾರೆ. ನಂತರ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ಏರಿಸಲು ಸಹಾಯ ಮಾಡ್ತಾರೆ ಎಂದು ಹೇಳಿದರು.
IAS vs IPS:ಡಿ ರೂಪಾ ಬೆಂಬಲಿಸಿದ ಸಂಸದ ಪ್ರತಾಪ್ ಸಿಂಹ: ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ
ಮೈಸೂರು ವಿಮಾನ ನಿಲ್ದಾಣ ಮೇಲ್ದರ್ಜೆ ಕಾಮಗಾರಿಗೆ ಶೀರ್ಘ ಭೂಮಿ ಪೂಜೆ: ವಿಮಾನ ನಿಲ್ದಾಣಕ್ಕಾಗಿ 150 ಕೋಟಿ ರೂ. ಮೊದಲ ಹಂತದ ಅನುದಾನ ಬಿಡುಗಡೆ ಆಗಿದೆ. ಒಟ್ಟು 160 ಎಕರೆ ಜಾಗ ಬೇಕು. 47 ಎಕರೆ ನೋಟಿಫಿಕೇಷನ್ ಆಗಿದೆ. ಶೀರ್ಘದಲ್ಲೇ ಭೂಮಿ ಪೂಜೆ ಮಾಡುತ್ತೇವೆ. ಅದರೊಂದಿಗೆ ಮೈಸೂರು- ನಂಜನಗೂಡು ಹೆದ್ದಾರಿಯನ್ನು ಡೈವರ್ಟ್ ಮಾಡಲಾಗುವುದು ಎಂದಿದ್ದಾರೆ.