Expressway: ತಿಂಗಳೊಳಗೆ ಮೈಸೂರು- ಬೆಂಗಳೂರು ಹೆದ್ದಾರಿ ಪೂರ್ಣ: ಸಂಸದ ಪ್ರತಾಪ ಸಿಂಹ
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಡಬಲ್ ಎಂಜಿನ್ ಸರ್ಕಾರದ ಕೊಡುಗೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರು (ಫೆ.20) : ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಡಬಲ್ ಎಂಜಿನ್ ಸರ್ಕಾರದ ಕೊಡುಗೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸರ್ವಿಸ್ ರಸ್ತೆ ಮಾಡಿ ಬಳಿಕ ಟೋಲ್ ಸಂಗ್ರಹಿಸಿ ಎಂಬ ಡಿ.ಕೆ. ಶಿವಕುಮಾರ್(DK Shivakumar) ಹೇಳಿಕೆಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಹೆದ್ದಾರಿಯಲ್ಲಿ 2 ಪಥದ ಸರ್ವಿಸ್ ರಸ್ತೆ(2 lane service road) ಮಾಡಲಾಗಿದೆ. ಅದನ್ನು ಸಾರ್ವಜನಿಕರ ಸೇವೆಗೆ ನೀಡಿದ ಬಳಿಕವೇ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದರು.
IAS vs IPS:ಡಿ ರೂಪಾ ಬೆಂಬಲಿಸಿದ ಸಂಸದ ಪ್ರತಾಪ್ ಸಿಂಹ: ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ
ಎಲ್ಲರಿಗೂ ರಸ್ತೆ ಅನುಕೂಲ ಆಗಬೇಕು. ನಮಗೆ ಎಲ್ಲರ ಬಗ್ಗೆ ಕಾಳಜಿ ಇದೆ. ನಿಮಗೆ ಬಡವರ ಮೇಲೆ ಕಾಳಜಿ ಇದ್ದರೆ ನಿಮ್ಮ ಸರ್ಕಾರ ಅಧಿಕಾರದಲ್ಲಿರುವಾಗ ನಿರ್ಮಾಣವಾದ ನಂಜನಗೂಡು ರಸ್ತೆ(Nanjanagudu)ಯಲ್ಲಿ ಸರ್ವಿಸ್ ರಸ್ತೆ ಯಾಕಿಲ್ಲ? ಯಾಕೆ ಟೋಲ್ ಸಂಗ್ರಹಿಸುತ್ತಿದ್ದೀರಿ? ಮೊದಲು ಬೆಂಗಳೂರು- ಕನಕಪುರ ರಸ್ತೆ ಪೂರ್ಣಗೊಳಿಸಿ ಬಳಿಕ ಬಿಜೆಪಿ ಟೀಕಿಸಿ ಎಂದು ಅವರು ತಿರುಗೇಟು ನೀಡಿದರು.
ಐಎಎಸ್, ಐಪಿಎಸ್(IAS-IPS) ಅಧಿಕಾರಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಿಯಂತ್ರಣ ಇಲ್ಲ ಎಂಬ ರಣದೀಪ್ ಸಿಂಗ್ ಸುರ್ಜೇವಾಲಾ(Randeep singh surjewala) ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ(MP Pratap simha) ಅವರು, ಹಾಸನದಲ್ಲಿ ಮಹಾಮಸ್ತಕಾಭಿಷೇಕ ಆದಾಗ ಯಾರ ಸರ್ಕಾರವಿತ್ತು? ರೋಹಿಣಿ ಸಿಂಧೂರಿ(Rohini sindhuri) ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಎ. ಮಂಜು ಅವರೊಂದಿಗೆ ಬೀದಿ ರಂಪ ಆಗಿತ್ತು. ಮೈಸೂರಿನ ರಶ್ಮಿ ಮಹೇಶ್(Rashmi mahesh) ಮೇಲೆ ಹಲ್ಲೆ ಮಾಡಿದಾಗ, ಜಿಲ್ಲಾಧಿಕಾರಿ ಶಿಖಾ ಅವರನ್ನು ನಿಂದಿಸಿದಾಗ, ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ರಾಜ್ಯದಲ್ಲಿ ಅಧಿಕಾರಿಗಳ ಸ್ಥಿತಿ ಏನಾಗಿತ್ತು? ಸಿಂಧೂರಿ ಅವರನ್ನು ತಲೆ ಮೇಲೆ ಕೂರಿಸಿಕೊಂಡವರು ಯಾರು ಎಂದು ಪ್ರಶ್ನಿಸಿದರು. ಐಪಿಎಸ್ ಅಧಿಕಾರಿ ಡಿ. ರೂಪ(IPS Officer D Roopa) ಅವರು ಎತ್ತಿರುವ ನೈತಿಕ, ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಪತ್ರಕರ್ತರು ಸತ್ಯಶೋಧ ಮಾಡಬೇಕು ಎಂದರು.
ಮೈವಿವಿ ಕುಲಸಚಿವೆ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ