ಬಾದಾಮಿ: 'ಸಿದ್ದರಾಮಯ್ಯ ಸ್ಪರ್ಧಿಸಿದರೇ ನಾವು ಮತಕ್ಷೇತ್ರದ ಆಕಾಂಕ್ಷಿಗಳಲ್ಲ'
ಬಾದಾಮಿ ಮತಕ್ಷೇತ್ರದಿಂದ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಾರೆ ಅಥವಾ ಸ್ಪರ್ಧಿಸುವುದಿಲ್ಲ ಎಂಬ ಖಚಿತವಾಗಿ ತಿಳಿಸಿಲ್ಲ. ಹಾಗಾಗಿ ನಾನೂ ಕೂಡ ಬಾದಾಮಿ ಮತಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದೇನೆ. ಸಿದ್ದರಾಮಯ್ಯನವರು ಬದಾಮಿಯಿಂದಲೇ ಸ್ಪರ್ಧಿಸಬೇಕು ಎನ್ನುವುದು ನನ್ನ ಅಭಿಲಾಷೆಯೂ ಕೂಡ: ಅನೀಲ ದಡ್ಡಿ
ಬಾಗಲಕೋಟೆ(ಜ.06): ಮುಂಬರುವ ಚುನಾವಣೆಗೆ ಬಾದಾಮಿ ಮತಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸದಿದ್ದರೇ ಬಾದಾಮಿ ಕ್ಷೇತ್ರಕ್ಕೆ ಸ್ಪರ್ಧಿಸಲು ನನಗೆ ಟಿಕೆಟ್ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕ ಅನೀಲ ದಡ್ಡಿ ಮನವಿ ಮಾಡಿದ್ದಾರೆ.
2023ರ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇವರು ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಬಾದಾಮಿ ಮತಕ್ಷೇತ್ರದಿಂದ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಾರೆ ಅಥವಾ ಸ್ಪರ್ಧಿಸುವುದಿಲ್ಲ ಎಂಬ ಖಚಿತವಾಗಿ ತಿಳಿಸಿಲ್ಲ. ಹಾಗಾಗಿ ನಾನೂ ಕೂಡ ಬಾದಾಮಿ ಮತಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದೇನೆ. ಸಿದ್ದರಾಮಯ್ಯನವರು ಬದಾಮಿಯಿಂದಲೇ ಸ್ಪರ್ಧಿಸಬೇಕು ಎನ್ನುವುದು ನನ್ನ ಅಭಿಲಾಷೆಯೂ ಕೂಡ. ಈ ಬಗ್ಗೆ ನನ್ನ ಅಭಿಪ್ರಾಯವನ್ನು ಜಿಲ್ಲಾ ಚುನಾವಣೆ ಸಮಿತಿ ಸಭೆಯಲ್ಲಿ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲೆಗೆ ಆಗಮಿಸಿದ್ದ ವೀಕ್ಷಕರ ಮುಂದೆ ತಿಳಿಸಿದ್ದೇನೆ ಎಂದರು.
ಆರೋಪ ಪ್ರೂವ್ ಮಾಡಿದ್ರೆ ನಾನು ಇವತ್ತೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಕೂಡಲ ಶ್ರೀಗೆ ಸಚಿವ ನಿರಾಣಿ ಸವಾಲ್
ಪಕ್ಷಕ್ಕಾಗಿ 30 ವರ್ಷಗಳ ಕಾಲ ಕೆಳ ಹಂತದಿಂದ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್‌ನ ವಿವಿಧ ಪದಾಧಿಕಾರಿಯಾಗಿ ಈಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕ ನಾಗಿ ಪಕ್ಷಕ್ಕೆ ನಿಷ್ಠೆಯಿಂದ ತನು ಮನ ಧನದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಬಾದಾಮಿಯಲ್ಲಿ ಯಾರೂ ಮಾಜಿ ಅಥವಾ ಹಾಲಿ ಶಾಸಕರು ಆಕಾಂಕ್ಷಿಗಳಿಲ್ಲ. ಎಲ್ಲರೂ ಕೂಡ ಪ್ರಥಮ ಬಾರಿಗೆ ವಿಧಾನ ಸಭೆ ಪ್ರವೇಶಿಸುವ ಪ್ರಯತ್ನದ ಮೊದಲ ಹಂತದಲ್ಲಿ ಇದ್ದೇವೆ. ಬಾದಾಮಿಯ ಅಭ್ಯರ್ಥಿ ಆಯ್ಕೆ ಮಾಡುವಾಗ 5 ಜನ ಆಕಾಂಕ್ಷಿಗಳನ್ನು ಸ್ವತಃ ಸಿದ್ದರಾಮಯ್ಯನವರು ಮಾತನಾಡಿಸಿ ಅವರ ಅಭಿಪ್ರಾಯ ತಿಳಿದುಕೊಂಡು ತಮ್ಮ ನಿರ್ಧಾರ ಪ್ರಕಟಿಸಬೇಕು ಎಂದು ಪ್ರಕಟಣೆ ಮೂಲತ ತಿಳಿಸಿದ್ದಾರೆ.