ಮೋದಿ ಕೇವಲ ಗಣ್ಯರಿಗೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಆಹ್ವಾನ ನೀಡಿದ ಪರಿಣಾಮ ಬಿಜೆಪಿ ಅಯೋಧ್ಯೆಯಲ್ಲಿ ಸೋಲುಕಂಡಿದೆ. ಇಂಡಿಯಾ ಕೂಟದ ಸದಸ್ಯರು ಬಹುತೇಕ ಕಡೆ ಒಗ್ಗಟ್ಟಿನಿಂದ ಶ್ರಮಿಸಿ ಗೆಲುವು ಕಂಡಿದ್ದು, ಇನ್ನು ಮುಂದೆಯೂ ಸಹ ನಿರ್ಲಕ್ಷ್ಯ ವಹಿಸದೆ ಜನರ ಏಳಿಗೆಗೆ ಸದಾಕಾಲ ಶ್ರಮಿಸುತ್ತೇವೆ: ರಾಹುಲ್‌ ಗಾಂಧಿ 

ರಾಯ್‌ಬರೇಲಿ(ಜೂ.12): ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾರಾಣಸಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರೆ ಪ್ರಧಾನಿ ಮೋದಿಯೇ 3 ಲಕ್ಷ ಮತಗಳಿಂದ ಪರಾಭವ ಆಗುತ್ತಿದ್ದರು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಯ್‌ಬರೇಲಿಯಲ್ಲಿ ತಮ್ಮನ್ನು ಗೆಲ್ಲಿಸಿದ ಮತ್ತು ಅಮೇಠಿಯಲ್ಲಿ ತಮ್ಮ ಕುಟುಂಬ ಆಪ್ತ ಕಿಶೋರಿ ಲಾಲ್‌ರನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮಂಗಳವಾರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌, ‘ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ. ಆದರೆ ಆಕೆ ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿದ್ದರೆ, ಸ್ವತಃ ಮೋದಿಯೇ 2-3 ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ತಿಳಿಸಿದ್ದಾರೆ. 

ಕುಮಾರಸ್ವಾಮಿ ಉದಾಹರಿಸಿ ಮೋದಿ ಸಂಪುಟ ಬಗ್ಗೆ ರಾಹುಲ್‌ ವ್ಯಂಗ್ಯ

ಮೋದಿ ಕೇವಲ ಗಣ್ಯರಿಗೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಆಹ್ವಾನ ನೀಡಿದ ಪರಿಣಾಮ ಬಿಜೆಪಿ ಅಯೋಧ್ಯೆಯಲ್ಲಿ ಸೋಲುಕಂಡಿದೆ. ಇಂಡಿಯಾ ಕೂಟದ ಸದಸ್ಯರು ಬಹುತೇಕ ಕಡೆ ಒಗ್ಗಟ್ಟಿನಿಂದ ಶ್ರಮಿಸಿ ಗೆಲುವು ಕಂಡಿದ್ದು, ಇನ್ನು ಮುಂದೆಯೂ ಸಹ ನಿರ್ಲಕ್ಷ್ಯ ವಹಿಸದೆ ಜನರ ಏಳಿಗೆಗೆ ಸದಾಕಾಲ ಶ್ರಮಿಸುತ್ತೇವೆ ಎಂದು ತಿಳಿಸಿದರು.