ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಇಬ್ಬರೂ ಒಂದೇ ಗರಡಿಯಲ್ಲಿ ಬೆಳೆದಿದ್ದು, ಅವರಿಗೆ ಎಲ್ಲವೂ ಗೊತ್ತಿದೆ. ಯಡಿಯೂರಪ್ಪನವರು ಶೆಟ್ಟರ್‌ ಬಗ್ಗೆ ಏನ್‌ ಹೇಳುತ್ತಾರೆ ಅನ್ನೋದೂ ಗೊತ್ತಿದೆ. ಯಡಿಯೂರಪ್ಪಗೆ ಹೀಗೆ ಹೇಳಬೇಕು ಅಂತ ಮೇಲಿಂದ ಒತ್ತಡವಿದೆ, ಅದಕ್ಕೆ ಆ ರೀತಿ ಹೇಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ 

ರೋಣ(ಏ.28): ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಗೆದ್ದೇ ಗೆಲ್ಲುತ್ತಾರೆ, ಯಡಿಯೂರಪ್ಪ ಸೇರಿ ಬಿಜೆಪಿಯ ಯಾರಿಗೂ ಹೆದರೋ ಅಗತ್ಯವಿಲ್ಲ. ಕಾಂಗ್ರೆಸ್‌ ಶೆಟ್ಟರ್‌ ಬೆಂಬಲಕ್ಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಇಬ್ಬರೂ ಒಂದೇ ಗರಡಿಯಲ್ಲಿ ಬೆಳೆದಿದ್ದು, ಅವರಿಗೆ ಎಲ್ಲವೂ ಗೊತ್ತಿದೆ. ಯಡಿಯೂರಪ್ಪನವರು ಶೆಟ್ಟರ್‌ ಬಗ್ಗೆ ಏನ್‌ ಹೇಳುತ್ತಾರೆ ಅನ್ನೋದೂ ಗೊತ್ತಿದೆ. ಯಡಿಯೂರಪ್ಪಗೆ ಹೀಗೆ ಹೇಳಬೇಕು ಅಂತ ಮೇಲಿಂದ ಒತ್ತಡವಿದೆ, ಅದಕ್ಕೆ ಆ ರೀತಿ ಹೇಳುತ್ತಾರೆ. ಶೆಟ್ಟರ್‌ ಅವರನ್ನು ಸೋಲಿಸೋದು ಸಾಧ್ಯನೇ ಇಲ್ಲ, ಅತ್ಯಂತ ಬಹುಮತದಿಂದ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೋದಿ, ಶಾ, ಯೋಗಿ ಯಾರೇ ಇರಲಿ ಪ್ರಜಾಪ್ರಭುತ್ವದ ಪ್ರಕಾರ ಅವರವರ ಐಡಿಯಾಲಜಿ ಹೇಳಲಿ. ಆದರೆ ಹೆದರಿಸುವುದು, ಸಿಐಡಿ, ಇ.ಡಿ. ಮೂಲಕ ಇನ್ನೊಬ್ಬರಿಗೆ ಹಿಂಸೆ ಕೊಡುವುದು ಸರಿಯಲ್ಲ ಎಂದರು.

ಶೆಟ್ಟರ್ ಬೇರೆ ಟೀಂ ಸೇರಿದ್ರೂ ಈ ಸಲವೂ ಕಪ್‌ ನಮ್ದೆ; ಪ್ರಲ್ಹಾದ್ ಜೋಶಿ

ಒಬ್ಬರಿಗೆ ಒಂದು ಕಾನೂನು, ಮತ್ತೊಬ್ಬರಿಗೆ ಇನ್ನೊಂದು ಕಾನೂನು ಸರಿಯಲ್ಲ. ಖರ್ಗೆ ಒಂದು ಕುಟುಂಬವನ್ನು ಹೊಗಳುತ್ತಾರೆ ಎನ್ನುವವರಿಗೆ ನನ್ನ ಐಡಿಯಾಲಜಿ ಅರ್ಥವಾಗಿಲ್ಲ ಅನಿಸುತ್ತೆ. ನಾನು ನನ್ನ ಐಡಿಯಾಲಜಿ ಪ್ರಕಾರ ಕೆಲಸ ಮಾಡುತ್ತೇನೆ. ಬಿಜೆಪಿಯವರು ಮೋದಿಯವರನ್ನು, ಅಮಿತ್‌ ಶಾ ಅವರನ್ನು ಹೊಗಳುವುದಿಲ್ಲವೇ? ಅದರಂತೆ ನಾನು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹೊಗಳಿದರೆ ಒಂದು ಕುಟುಂಬ ಹೊಗಳಿದಂತೆಯೇ ಎಂದು ಪ್ರಶ್ನಿಸಿದ ಅವರು, ಅವರವರ ಐಡಿಯಾಲಜಿ ಪ್ರಕಾರ ಮಾತಾಡುತ್ತಾರೆ. ಅದು ಒಂದು ಕುಟುಂಬ ಹೊಗಳಿದಂತಲ್ಲ ಎಂದರು.