ಜೆಡಿಎಸ್ ಗೆದ್ದರೆ ಸಕ್ಕರೆ ಕಾರ್ಖಾನೆ ಸ್ಥಾಪನೆ: ಎಚ್.ಡಿ.ಕುಮಾರಸ್ವಾಮಿ
ಕಾಳಗಿ ತಾಲೂಕು ಕೇಂದ್ರದಲ್ಲಿ ವಿವಿಧ ಇಲಾಖೆಗಳು ಪ್ರಾರಂಭಿಸುತ್ತೇವೆ. ಜೆಡಿಸ್ ಬಲಪಡಿಸಿ ಈ ಭಾಗದ ರೈತರ ಅಭಿವೃದ್ಧಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಾಳಗಿ (ಜ.12): ಕಾಳಗಿ ತಾಲೂಕು ಕೇಂದ್ರದಲ್ಲಿ ವಿವಿಧ ಇಲಾಖೆಗಳು ಪ್ರಾರಂಭಿಸುತ್ತೇವೆ. ಜೆಡಿಸ್ ಬಲಪಡಿಸಿ ಈ ಭಾಗದ ರೈತರ ಅಭಿವೃದ್ಧಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಕಾಳಗಿ ಪಟ್ಟಣದ ಬಸ್‌ನಿಲ್ದಾಣದಲ್ಲಿ ಕರ್ನಾಟಕ ರಾಜ್ಯದ ಜೆಡಿಎಸ್ ಅಧಿಕಾರದ ಸಾಧನೆ, ಪಂಚರತ್ನ ರಥ ಯಾತ್ರೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬಡವರಿಗೆ ವಸತಿಯ ಆಸರೆ, ಪ್ರತಿ ಗ್ರಾಪಂಗೆ ಹೈಟೆಕ್ ಆಸ್ಪತ್ರೆ, ಆಧುನಿಕ ತಂತ್ರಜ್ಞಾನದ ಕೃಷಿ ಚೈತನ್ಯ, ಯುವ ಜನತೆಗೆ ನವಮಾರ್ಗ ಮತ್ತು ಮಹಿಳೆಯರಿಗೆ ಉದ್ಯೋಗಕ್ಕಾಗಿ ಜೆಡಿಎಸ್ ಪಂಚರತ್ನ ಯೋಜನೆ ರೂಪಿಸಿದೆ.
ರಾಜ್ಯ ಸರ್ಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ. ಕಾರ್ಯಕ್ರಮದ ಹೆಸರಿನಲ್ಲಿ ಜನರ ಹಣ ಲೂಟಿ ಆಗುತ್ತಿದೆ. ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ. ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ, ಜೆಡಿಎಸ್ ಅಧಿಕಾರಕ್ಕೆ ಬಂದರೇ ಬಡವರ, ರೈತರ ಕಲ್ಯಾಣವೇ ನನ್ನ ಗುರಿ ಎಂದರು. ಜೆಡಿಎಎಸ್ ಮುಖಂಡ ಸಂಜಿವನ ಯಾಕಾಪೂರ ಮತನಾಡಿ, ಚಿಂಚೋಳಿ ಕ್ಷೇತ್ರದ ಜನತೆ ಬದಲಾವಣೆ ಬಯಸುತ್ತಿದೆ. ಒಂದು ಬಾರಿಯಾದರೂ ಚಿಂಚೋಳಿ ಕ್ಷೇತ್ರದಲ್ಲಿ ಸಸ್ಥಳೀಯರಿಗೆ ಅವಕಾಶ ನೀಡಿ ಎಂದು ಹೇಳಿದರು.
ಜ.16ರಂದು ಕುಮಾರಸ್ವಾಮಿ 'ರೈತ ಸಂಕ್ರಾಂತಿ': ರಾಜ್ಯದ ರೈತರ ಜತೆ ಅನ್‌ಲೈನ್ ಸಂವಾದ
ಸಮ್ಮಿಶ್ರ ಸರಕಾರದ ಅವದಿಯಲ್ಲಿ ಗೋಟುರ ಗ್ರಾಮದ ಅಂಗವಿಕಲ ಮಹಿಳೆಗೆ ನಮ್ಮ ಮೆಟ್ರೊ ಇಲಾಖೆಯಲ್ಲಿ ಉದ್ಯೋಗ ಕೊಡಿದ್ದೇವೆ, ನನ್ನ ಪಕ್ಕದಲ್ಲಿರುವ ಮಾಹಾತಾಯನ್ನು ಕೇಳಬಹುದು. ನಮ್ಮ ಅವಧಿಯಲ್ಲಿ ಅಭಿವೃದ್ಧಿಯ ಕೈಗನ್ನಡಿ ಸಾಕ್ಷಿಯಾಗಿದೆ ಎಂದರು. ಇದಕ್ಕೂ ಮೊದಲು ಪಂಚರತ್ನ ರಥಯಾತ್ರೆಯನ್ನು ಗೋಟುರ ಗ್ರಾಮದಲ್ಲಿ ಭವ್ಯವಾಗಿ ಸ್ವಾಗತಿಸಿದರು. ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಗೆ ಹೂಮಳೆ ಸುರಿಸಿ, ಬಾಜಾ ಭಜಂತ್ರಿ ಮೂಲಕ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮದಿಂದ ಕುಪ್ಪಳಿಸಿದರು.
ಕಾಳಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಗೌರಿಶಂಕರ ಸೂರವಾರ, ರವಿಶಂಕರ ರೆಡ್ಡಿ, ಶರಣಗೌಡ ಹೊಸಳ್ಳಿ, ಶಾಂತಕುಮಾರ ಕೋರವಾರ, ಸಿದ್ದು ಬುಬಲಿ, ಜಾವೀದ ಟೆಂಗಳಿ, ಪ್ರಶಾಂತ ಭರತನೂರ,ಸಂಜುರೆಡ್ಡಿ ಭರತನೂರ, ಹಣಮಂತ ರೆಡ್ಡಿ ದೋಟಿಕೋಳ, ಹೊನ್ನಕಾಂತ ರೆಡ್ಡಿ, ಚಿತ್ರಶೇಖರ,ಶಾಮ ಗೊಟುರ, ಸತೀಶ ಕೋರವಿ, ಶ್ರೀನಿವಾಸ ರೆಡ್ಡಿ, ರೇವಣಸಿದ್ದ ಪೂಜಾರಿ,ನಾಗಯ್ಯ ಸ್ವಾಮಿ, ಗುಣಶೇಖರ ಸಾಲಹಳ್ಳಿ, ಉದಯ ಭದ್ರಶೆಟ್ಟಿ, ಕೃಷ್ಣ ಚಿಂತಕೋಟಿ, ಮತಿವಂತ ಕಾಳಗಿ, ಬೀರಪ್ಪ ಪೂಜಾರಿ, ಸಂತೋಷ ಹೊಸಳ್ಳಿ, ಮಾಣಿಕ ಕಾಳಗಿ, ವಿಷ್ಣುಕಾಂತ ಮೂಲಗೆ, ಶರಣು ರಾಕಾ ಚಿಂಚೋಳಿ, ಶ್ರೀನಿವಾಸ ರೆಡ್ಡಿ ರಾಜಾಪೂರ, ಹಣಮಂತ ರೆಡ್ಡಿ ದೊಟಿಕೋಳ, ಸಂತೋಷ ಮಾಳಗೆ, ಸೂರ್ಯಕಾಂತ ಚಿನ್ನ, ದನರಾಜ ನಾಟಿಕಾರ, ಶೇಕಪ್ಪ ತೇಗಲತಿಪ್ಪಿ, ವೀರೇಶ ದೂಳಗುಂಡಿ ಸೇರಿ ಅನೇಕರು ಇದ್ದರು.
ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇಲ್ಲ: ಕಾಳಗಿಯಲ್ಲಿ ಇಬ್ಬರು ರೈತರು ಸೇರಿದಂತೆ ಕಲಬುರಗಿ ಜಿಲ್ಲಾದ್ಯಂತ ತೊಗರಿ ಬೆಳೆ ನೆಟೆ ರೋಗಕ್ಕೆ ಹಾನಿಯಾಗಿ 7 ರೈತರು ಸಾವನ್ನಪ್ಪಿದ್ದರೂ ಬಿಜೆಪಿ ಸರ್ಕಾರ ಮೌನವಾಗಿದೆ. ರೈತ ಕುಟುಂಬಗಳ ನೋವು- ಯಾತನೆ ಆಲಿಸಲಿಕ್ಕೂ ಬಂದಿಲ್ಲ. ಇಂತಹ ರಾವಣ ರಾಜ್ಯ ಇದ್ದರೆಷ್ಟು, ಬಿಟ್ಟರೆಷ್ಟುಎಂದು ರೈತರೇ ಹೇಳುತ್ತಿದ್ದಾರೆಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಂಚೋಳಿ ಹಾಗೂ ಕಾಳಗಿಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ವೇಳೆ ರೈತರೊಂದಿಗೆ ಬಹಿರಂಗ ಸಭೆಗಳಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಸರ್ಕಾರಕ್ಕೆ ಯಾವುದೇ ಕಾಳಜಿ ಹುಟ್ಟು ಹಾಕಿಲ್ಲವೆಂದು ಕುಟುಕಿದರು.
ಲೂಟಿ ಗ್ಯಾಂಗ್ ಓಡಿಸಲು ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್.ಡಿ.ಕುಮಾರಸ್ವಾಮಿ
ತಾವು ಹಿಂದೆ ಜೇವರ್ಗಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ಖುದ್ದು ಹೋಗಿ ರೈತರನ್ನು ಕಂಡು ಭೇಟಿ ಮಾಡಿ 60ರಿಂದ 70 ಕುಟುಂಬಗಳಿಗೆ ಸಾಂತ್ವನ ಹೇಳಿ ನೆರವು ನೀಡಿದ್ದನ್ನು ಸ್ಮರಿಸಿದ ಕುಮಾರಸ್ವಾಮಿ ಇಂದಿನ ಸಚಿವರು, ಶಾಸಕರು, ಸರ್ಕಾರ ರೈತರ ಮನೆಗಳಿಗೂ ಹೋಗಿಲ್ಲ, ಮಾನವೀಯತೆ ಇವರಿಗೆ ಇಲ್ಲವೇ ಇಲ್ಲವೆಂದು ಜರಿದರು. ರೈತರ ಸಂಕಷ್ಟಇವರಿಗೆ ಕಾಣೋದಿಲ್ಲ, ಬಿಜೆಪಿ, ಸಂಘ ಪರಿವಾರದವರಿಗೆ ರಾಹುಲ್ ಗೆ 21 ನೇ ಶತಮಾನದ ಕೌರವ ಎಂದು ಹೇಳಿ ದೊಡ್ಡ ಚರ್ಚೆ ಮಾಡುತ್ತಿದ್ದಾರೆ. ಕೌರವರು ಪಾಂಡವರು ಒಂದು ಕಡೆ ಇಟ್ಟುಕೊಳ್ಳೋಣ, ದೇಶ ರಾಜ್ಯ ನಡೆಸುವವರು ಜನರಿಗೆ ನಿವು ಪಾಂಡವರು ಅಥವಾ ಕೌರವರು ಆಗಿದ್ದಿರಾ ಅದನ್ನ ಹೇಳಬೇಕಲ್ಲ, ಬಿಜೆಪಿ ಸರ್ಕಾರದಲ್ಲಿ ಬಡವರ ಬಗ್ಗೆ ಏನು ಮಾಡಿದ್ದೀರಿ ಹೇಳಬೇಕಲ್ಲ, ಕೌರವರು ಪಾಂಡವರ ಬಿರುದು ಆಮೇಲೆ ಕೊಟ್ಟುಕೊಳ್ಳೋಣಾ. ಈ ರಾವಣ ರಾಜ್ಯ ಹೇಗೆ ಸರಿ ಪಡಿಸಿಕೊಳ್ಳಬೇಕು ನೋಡಿಕೊಳ್ಳಿ ಎಂದರು.