ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್ ಕುಮಾರಸ್ವಾಮಿ
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಾಲಮನ್ನಾ, ವರ್ಷಕ್ಕೆ ಒಂದು ಕುಟುಂಬಕ್ಕೆ ಉಚಿತವಾಗಿ 5 ಗ್ಯಾಸ್ ಸಿಲಿಂಡರ್ ವಿತರಣೆ, ಪದವಿ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕಲ್ ಸ್ಕೂಟರ್ ವಿತರಿಸುವ ಘೋಷಣೆ ಮಾಡಲಾಗಿದೆ ಎಂದರು.
ರಾಮನಗರ (ಏ.30): ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ ಕಾರ್ಯ ಮುಂದುವರೆದಿದೆ. ನಗರದ ಕೆಂಪೇಗೌಡ ಸರ್ಕಲ್ ನಲ್ಲಿರುವ ಕಚೇರಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಮೌಳೇಶ್ವರ ಟ್ರಸ್ವ್ ಅಧ್ಯಕ್ಷ ಗೋವಿಂದರಾಜು, ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ನಯನಶ್ರೀ ಸೇರಿದಂತೆ ಹಲವು ಪ್ರಮುಖರು ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ನಿಖಿಲ್, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಮನೆ ಮಗನಂತೆ ಸಾಕಿ ಸಲುಹುದ್ದೀರಿ. ಅವರಂತೆ ನನಗೂ ಆಶೀರ್ವಾದ ಮಾಡಿ, ಗೋವಿಂದರಾಜು ಅವರು ನನಗೆ ಶಕ್ತಿ ತುಂಬುವ ಕೆಲಸ ಮಾಡಲು ಒಳ್ಳೆಯ ತೀರ್ಮಾನ ಮಾಡಿದ್ದಾರೆ ಎಂದು ಸಂತಸ ವ್ಯಕ್ತಡಿಸಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಾಲಮನ್ನಾ, ವರ್ಷಕ್ಕೆ ಒಂದು ಕುಟುಂಬಕ್ಕೆ ಉಚಿತವಾಗಿ 5 ಗ್ಯಾಸ್ ಸಿಲಿಂಡರ್ ವಿತರಣೆ, ಪದವಿ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕಲ್ ಸ್ಕೂಟರ್ ವಿತರಿಸುವ ಘೋಷಣೆ ಮಾಡಲಾಗಿದೆ ಎಂದರು.
ನನ್ನನ್ನು ಸೋಲಿಸಲು ಕಾಂಗ್ರೆಸ್-ಬಿಜೆಪಿ ಷಡ್ಯಂತ್ರ: ನಿಖಿಲ್ ಕುಮಾರಸ್ವಾಮಿ
ಮುಖಂಡ ಗೋವಿಂದರಾಜು ಮಾತನಾಡಿ, ನಾನು ನನ್ನ ಮನೆಗೆ ಮರಳಿ ನಾನು ವಾಪಸ್ಸು ಬಂದಿದ್ದೇನೆ. ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ, ರಾಮನಗರದಲ್ಲಿ ನಿಖಿಲ… ಅವರನ್ನು ಗೆಲ್ಲಿಸುವುದು ನನ್ನ ಗುರುಯಾಗಿದೆ. ಜೆಡಿಎಸ್ ನ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಜೆಡಿಎಸ್ ಸೇರಿದವರು: ಚಂದ್ರಮೌಳೇಶ್ವರ ಟ್ರಸ್ವ್ ಅಧ್ಯಕ್ಷ ಗೋವಿಂದರಾಜು, ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ನಯನಶ್ರೀ, ಶಬರಿ, ಪುಟ್ಟರಾಜು, ಮೋಹನ್ , ಚಂದ್ರು, ಮಣಿ, ರಾಜು, ಮೋಹನ್ ಕುಮಾರ್, ವಿನೋದ್, ಯಶ್ವಂತ್, ವೆಂಕಟೇಶ್, ಅರುಣ್ ಕುಮಾರ್, ವೆಂಕಟೇಶ್, ಕೆಂಡಣ್ಣ, ಕಲಾವತಿ, ಯಶಸ್ವಿನಿ, ರಾಜೇಶ್ ಮತ್ತಿತರರು ಪಕ್ಷ ಸೇರ್ಪಡೆಯಾದರು. ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ವಕ್ತಾರರಾದ ಬಿ.ಉಮೇಶ್, ವಿ.ನರಸಿಂಹಮೂರ್ತಿ, ಮುಖಂಡ ರೈಡ್ ನಾಗರಾಜು, ಉಮೇಶ್, ಜಿ.ಟಿ.ಕೃಷ್ಣ ಹಾಜರಿದ್ದರು.
ಜೆಡಿಎಸ್‌ಗೆ ಪೂರ್ಣ ಬಹುಮತಕ್ಕೆ ಪ್ರಾರ್ಥಿಸಿ ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್
ನಿಖಿಲ್ ಪರ ಸಿ.ಎಂ.ಇಬ್ರಾಹಿಂ ಪ್ರಚಾರ: ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಮತಯಾಚನೆ ಮಾಡಿದರು. ನಗರದ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರು ನಂತರ ಬೈಕ್ ರ್ಯಾಲಿ ನಡೆಸಿದರು. ಇದಕ್ಕು ಮುನ್ನಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಗರದಲ್ಲಿ ಸಂಜೆ ಆರಂಭವಾದ ಬೈಕ್ ರಾರಯಲಿ ವಿವಿಧ ಬಡಾವಣೆಯಲ್ಲಿ ಸಂಚಾರ ನಡೆಸಿತು. ಈ ವೇಳೆ ನಗರಸಭೆಯ ಜೆಡಿಎಸ್ ಸದಸ್ಯರು ಹಾಗೂ ಮುಖಂಡರು ಸಾಥ್ ನೀಡಿದರು.