ರೇಷ್ಮೆ​ನ​ಗರಿ ರಾಮನಗರ ಜಿಲ್ಲೆಗೆ ಮೊದಲ ಬಾರಿ ಡಿಸಿಎಂ ಹುದ್ದೆ!

ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆಗೆ 5ನೇ ಬಾರಿ ಮುಖ್ಯ​ಮಂತ್ರಿ ಗಾದಿ ಸಿಗುವ ನಿರೀ​ಕ್ಷೆ​ಗಳು ಹುಸಿ​ಯಾ​ಗಿದ್ದು, ಮೊದಲ ಬಾರಿಗೆ ಉಪ ಮುಖ್ಯ​ಮಂತ್ರಿ ಹುದ್ದೆ ದೊರ​ಕಿದೆ. ಕೆಪಿ​ಸಿ​ಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮೂಲಕ ಐದನೇ ಬಾರಿಗೆ ಮುಖ್ಯ​ಮಂತ್ರಿ ಸಿಎಂ ಗಾದಿ ಒಲಿ​ಯು​ತ್ತಿ​ದೆ ಎಂಬುದು ಎಲ್ಲರ ನಿರೀ​ಕ್ಷೆ​ಯಾ​ಗಿತ್ತು. 

DCM post for the first time for Ramanagara district gvd

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗ​ರ (ಮೇ.19): ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆಗೆ 5ನೇ ಬಾರಿ ಮುಖ್ಯ​ಮಂತ್ರಿ ಗಾದಿ ಸಿಗುವ ನಿರೀ​ಕ್ಷೆ​ಗಳು ಹುಸಿ​ಯಾ​ಗಿದ್ದು, ಮೊದಲ ಬಾರಿಗೆ ಉಪ ಮುಖ್ಯ​ಮಂತ್ರಿ ಹುದ್ದೆ ದೊರ​ಕಿದೆ. ಕೆಪಿ​ಸಿ​ಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮೂಲಕ ಐದನೇ ಬಾರಿಗೆ ಮುಖ್ಯ​ಮಂತ್ರಿ ಸಿಎಂ ಗಾದಿ ಒಲಿ​ಯು​ತ್ತಿ​ದೆ ಎಂಬುದು ಎಲ್ಲರ ನಿರೀ​ಕ್ಷೆ​ಯಾ​ಗಿತ್ತು. ಆದರೆ, ಕಾಂಗ್ರೆಸ್‌ ಹೈಕ​ಮಾಂಡ್‌ ಶಿವ​ಕು​ಮಾರ್‌ ಅವ​ರಿಗೆ ಡಿಸಿಎಂ ಸ್ಥಾನ ನೀಡಿ ಸಮಾ​ಧಾನ ಪಡಿ​ಸಿದೆ. ಡಿ.ಕೆ.​ಶಿ​ವ​ಕು​ಮಾರ್‌ ಕೆಪಿ​ಸಿಸಿ ಅಧ್ಯ​ಕ್ಷ​ರಾಗಿ ವರಿ​ಷ್ಠರು ನೀಡಿದ್ದ ಜವಾ​ಬ್ದಾ​ರಿ​ಯನ್ನು ​ಕಾಂಗ್ರೆಸ್‌ ನ್ನು ಅಧಿ​ಕಾ​ರಕ್ಕೆ ತರುವ ಮೂಲಕ ಪೂರ್ಣ​ ಮಾಡಿದ್ದರು. ಇದಕ್ಕೆ ಪ್ರತಿ​ಯಾಗಿ ಡಿ.ಕೆ.​ಶಿ​ವ​ಕು​ಮಾರ್‌ ಮುಖ್ಯ​ಮಂತ್ರಿ ಹುದ್ದೆ​ಗಾಗಿ ಪಟ್ಟು ಹಿಡಿ​ದಿ​ದ್ದರು. 

ಮತ್ತೊಂದೆಡೆ ಮಾಜಿ ಸಿಎಂ ಸಿದ್ದ​ರಾ​ಮಯ್ಯ ಕೂಡ ಸಿಎಂ ಕುರ್ಚಿಯ ಪ್ರಬಲ ಆಕಾಂಕ್ಷಿ​ಯಾ​ಗಿ​ದ್ದರು. ಈ ಹಿಂದೆ ಅಂದರೆ 1952ರಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟಬಹು​ಮ​ತ​ದೊಂದಿಗೆ ಅಧಿ​ಕಾ​ರಕ್ಕೆ ಬಂದಾಗ ಜಿಲ್ಲೆ​ಯ​ವರೇ ಆದ ಕೆಂಗಲ್‌ ಹನುಮಂತಯ್ಯ ಮುಖ್ಯ​ಮಂತ್ರಿ​ಯಾ​ಗಿ​ದ್ದರು. ಇದಾದ 71 ವರ್ಷ​ಗಳ ತರು​ವಾಯ ಅಂದರೆ 2023ರಲ್ಲಿ ಅಧಿ​ಕಾ​ರಕ್ಕೆ ಬಂದಿ​ರುವ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಮುಖ್ಯ​ಮಂತ್ರಿ ಹುದ್ದೆ ಅಲಂಕ​ರಿ​ಸು​ತ್ತಾರೆ ಎಂಬ ವಿಶ್ವಾಸ ಗಟ್ಟಿ​ಯಾ​ಗಿತ್ತು. ಅಲ್ಲದೆ, 7ನೇ ವಿಧಾ​ನ​ಸ​ಭೆ​ಯಲ್ಲಿ ಕನ​ಕ​ಪುರ ಕ್ಷೇತ್ರ ಶಾಸ​ಕ​ರಾ​ಗಿ​ದ್ದ ರಾಮ​ಕೃಷ್ಣ ಹೆಗಡೆ ಅವರು 10ನೇ ಮುಖ್ಯ​ಮಂತ್ರಿ​ಯಾಗಿದ್ದರು. 

ಗೆದ್ದರೂ, ಸೋತರು ಇದೇ ನನ್ನ ಕರ್ಮಭೂಮಿ: ಸಿ.ಪಿ.ಯೋಗೇಶ್ವರ್‌

ಈ ಹಿಂದೆ ಕಾಂಗ್ರೆಸ್‌ ಮತ್ತು ಮೈತ್ರಿ ಸರ್ಕಾ​ರ​ಗ​ಳಲ್ಲಿ ಹಲವು ಖಾತೆ​ಗ​ಳನ್ನು ಯಶ​ಸ್ವಿ​ಯಾಗಿ ನಿಭಾ​ಯಿ​ಸಿದ ಅನುಭವಿ ರಾಜ​ಕಾ​ರ​ಣಿ​ಯಾದ ​ಶಿ​ವ​ಕು​ಮಾರ್‌ ಅವ​ರಿಗೆ ಅವ​ಕಾಶ ದೊರೆ​ತು 16ನೇ ವಿಧಾ​ನ​ಸ​ಭೆ​ಯಲ್ಲಿ 24ನೇ ಮುಖ್ಯ​ಮಂತ್ರಿ​ಯಾಗಿ ಆಡ​ಳಿತ ನಡೆ​ಸು​ವುದನ್ನು ನೋಡಲು ಜಿಲ್ಲೆಯ ಜನರು ಕಾತು​ರ​​ರಾ​ಗಿ​ದ್ದರು. ಹೀಗಾಗಿ ಮುಖ್ಯ​ಮಂತ್ರಿ ಸ್ಥಾನ​ಕ್ಕಾಗಿ ಸಿದ್ದ​ರಾ​ಮಯ್ಯ ಮತ್ತು ಡಿ.ಕೆ.​ಶಿ​ವ​ಕು​ಮಾರ್‌ ನಡುವಿನ ಕಾದಾಟ ತೀವ್ರ ಕುತೂ​ಹಲ ಮೂಡಿ​ಸಿತ್ತು. ಆದ​ರೀಗ ಕಾಂಗ್ರೆಸ್‌ ಅಧಿ​ನಾ​ಯಕಿ ಸೋನಿ​ಯಾ​ಗಾಂಧಿ​ಯ​ವರು ಸಿದ್ದ​ರಾ​ಮಯ್ಯ ಅವ​ರನ್ನು ಮುಖ್ಯ​ಮಂತ್ರಿ ಹಾಗೂ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಉಪ​ಮು​ಖ್ಯ​ಮಂತ್ರಿ ಹುದ್ದೆಗೆ ಮನ​ವೊ​ಲಿಸಿ ಬಿಕ್ಕಟ್ಟು ಶಮ​ನ​ಗೊ​ಳಿ​ಸಿ​ದ್ದಾರೆ.

ಸಂಭ್ರ​ಮದ ಬದಲು ಬೇಸ​ರ: ಡಿ.ಕೆ.​ಶಿ​ವ​ಕು​ಮಾರ್‌ ಅವರು ಸೋನಿಯಾ ಗಾಂಧಿ​ರ​ವರ ಮಾತಿಗೆ ಮನ್ನಣೆ ನೀಡಿ ಉಪ​ಮು​ಖ್ಯ​ಮಂತ್ರಿ ಹುದ್ದೆ​ಯನ್ನು ಒಪ್ಪಿ​ಕೊಂಡಿ​ದ್ದಾ​ಯಿತು. ಆದರೆ, ಡಿಕೆ​ಶಿ​ರ​ವರ ಈ ನಿರ್ಧಾ​ರ​ದಿಂದ ಅವರ ಅಭಿ​ಮಾ​ನಿ​ಗಳು ಹಾಗೂ ಜಿಲ್ಲೆಯ ಕಾಂಗ್ರೆಸ್‌ ಕಾರ್ಯ​ಕ​ರ್ತ​ರು ಸಂಭ್ರಮ ಪಡು​ವು​ದರ ಬದಲು ಬೇಸರ ವ್ಯಕ್ತ​ಪ​ಡಿ​ಸು​ತ್ತಿ​ದ್ದಾರೆ. ಮುಖ್ಯ​ಮಂತ್ರಿ ಸ್ಥಾನಕ್ಕೆ ಸಿದ್ದ​ರಾ​ಮ​ಯ್ಯ​ರ​ವರು ಹೆಸರು ಘೋಷ​ಣೆ​ಯಾದ ಹಿನ್ನೆ​ಲೆ​ಯಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ತವರು ಜಿಲ್ಲೆ​ಯಲ್ಲಿ ಗಲಾ​ಟೆ​ಗ​ಳಾ​ಗು​ತ್ತವೆ ಎಂಬ ಕಾರ​ಣಕ್ಕೆ ಹೈ ಅಲರ್ಚ್‌ ಆಗಿ​ರಲು ಪೊಲೀಸ್‌ ಇಲಾಖೆ ಉನ್ನತ ಅಧಿ​ಕಾ​ರಿ​ಗಳು ಜಿಲ್ಲೆಯ ಪೊಲೀ​ಸ​ರಿಗೆ ಸೂಚನೆ ನೀಡಿ​ದ್ದರು.

ಡಿಕೆ​ಶಿಗೆ ಮುಖ್ಯ​ಮಂತ್ರಿ ಹುದ್ದೆ ತಪ್ಪಿ​ದರೆ ಗಲಾಟೆ, ಪ್ರತಿ​ಭ​ಟ​ನೆ​ಗಳು ನಡೆ​ಯುವ ಸಾಧ್ಯ​ತೆ​ಗಳ ಹಿನ್ನೆ​ಲೆ​ಯಲ್ಲಿ ಹೆಚ್ಚು​ವರಿ ಪೊಲೀಸ್‌ ತುಕ​ಡಿ​ಯನ್ನು ಮುಂಜಾ​ಗೃ​ತ ಕ್ರಮವಾಗಿ ನಿಯೋ​ಜನೆ ಮಾಡಿ​ದ್ದರು. ಆದರೆ, ಡಿಕೆ ಸಹೋ​ದ​ರರು ಯಾರು ಪ್ರತಿ​ಭ​ಟನೆಗಳನ್ನು ನಡೆ​ಸ​ಬಾ​ರದು. ಪಕ್ಷಕ್ಕೆ ಮುಜು​ಗರ ಆಗು​ವಂತೆ ನಡೆ​ದು​ಕೊ​ಳ್ಳ​ಬಾ​ರ​ದೆಂದು ಪಕ್ಷದ ಮುಖಂಡ​ರಿಗೆ ಸೂಚನೆ ನೀಡಿ​ದ್ದರು. ಈ ಕಾರ​ಣ​ದಿಂದಾಗಿ ಡಿಕೆಶಿ ಅಭಿ​ಮಾ​ನಿ​ಗಳು ಮತ್ತು ಕಾರ್ಯ​ಕ​ರ್ತರು ಪ್ರತಿ​ಭ​ಟ​ನೆ​ಯನ್ನು ವ್ಯಕ್ತ​ಪ​ಡಿ​ಸ​ಲಿಲ್ಲ. ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಮುಖ್ಯ​ಮಂತ್ರಿ ಗಾದಿ ಕೈತ​ಪ್ಪಿ​ರು​ವು​ದ​ರಿಂದ ನೋವಿ​ನ​ಲ್ಲಿ​ರುವ ಅಭಿ​ಮಾ​ನಿ​ಗಳು ಹಾಗೂ ಕಾರ್ಯ​ಕ​ರ್ತರು ಪ್ರತಿ​ಭ​ಟನೆ ನಡೆ​ಸದೆ, ಉಪ​ಮು​ಖ್ಯ​ಮಂತ್ರಿ ಹುದ್ದೆ ಸಿಕ್ಕಿ​ದ್ದಕ್ಕೆ ಸಂಭ್ರ​ಮವೂ ಪಡದೆ ಬೇಸ​ರ​ದ​ಲ್ಲಿ​ದ್ದಾ​ರೆ.

ಸೈನಿಕನನ್ನು ಮಕಾಡೆ ಮಲಗಿಸಿದ ದಳಪತಿ: ಯೋಗೇಶ್ವರ್‌ ವಿರುದ್ಧ ಎರಡನೇ ಬಾರಿ ಗೆದ್ದ ಎಚ್‌ಡಿಕೆ

ರಾಮ​ನ​ಗರ ಜಿಲ್ಲೆಗೆ ಒಲಿದಿದ್ದ ಸಿಎಂ ಗಾದಿ: 1952ರ ಮೊದಲ ವಿಧಾ​ನ​ಸ​ಭೆ​ಯಲ್ಲಿ ಮೈಸೂರು ರಾಜ್ಯದ ಪ್ರಭಾವಿ ನಾಯಕರಾಗಿದ್ದ ಕೆಂಗಲ್‌ ಅವರಿಗೆ ಮುಖ್ಯಮಂತ್ರಿ ಪದವಿ ಒಲಿದು 4 ವರ್ಷ 5 ತಿಂಗಳು ಆಡ​ಳಿತ ನಡೆ​ಸಿ​ದ್ದ​ರು. 1983ರಲ್ಲಿ ರಾಜ್ಯ​ದಲ್ಲಿ ಮೊಟ್ಟದ ಮೊದಲ ಬಾರಿಗೆ ಬಿಜೆಪಿ ಬೆಂಬ​ಲ​ದೊಂದಿಗೆ ರಾಮ​ಕೃಷ್ಣ ಹೆಗಡೆ ನೇತೃ​ತ್ವ​ದಲ್ಲಿ ಜನತಾ ಪಕ್ಷದ ಸರ್ಕಾರ ಅಧಿ​ಕಾ​ರಕ್ಕೆ ಬಂದಿತು. ಆಗ ಹೆಗಡೆಯವರು ಉಭಯ ಸದನಗಳ ಸದಸ್ಯರಾಗಿರ​ಲಿಲ್ಲ. ಅವರಿಗಾಗಿ ಕನಕಪುರದಿಂದ ಚುನಾಯಿತರಾಗಿದ್ದ ಪಿ.ಜಿ.ಆರ್‌.ಸಿಂಧ್ಯಾ ಸ್ಥಾನ ತೆರವು ಮಾಡಿಕೊಟ್ಟರು. ಕನಕಪುರದಲ್ಲಿ ನಡೆದ ಮರು ಚುನಾವಣೆಯಲ್ಲಿ ಹೆಗಡೆ ಗೆಲುವು ಸಾಧಿಸಿ, ಸದನ ಸದಸ್ಯರಾದರು. 1994ರ ಚುನಾವಣೆಯಲ್ಲಿ ರಾಮ​ನ​ಗ​ರ​ದಿಂದಲೇ ಗೆದ್ದ ದೇವೇ​ಗೌ​ಡರು ಮುಖ್ಯಮಂತ್ರಿ ಹುದ್ದೆಗೇರಿ 17 ತಿಂಗಳು ಆಡ​ಳಿತ ನಡೆಸಿದರು. ರಾಮನಗರ ಪ್ರತಿನಿಧಿ ಆಗಿದ್ದಾಗಲೇ ಪ್ರಧಾನಮಂತ್ರಿ ಹುದ್ದೆಯೂ ಒಲಿಯಿತು. 2004ರಲ್ಲಿ ರಾಮನಗರ ಕ್ಷೇತ್ರದಿಂದ ಗೆದ್ದ ಕುಮಾ​ರ​ಸ್ವಾಮಿ ಜೆಡಿ​ಎಸ್‌ - ಬಿಜೆಪಿ ಮೈತ್ರಿ ಸರ್ಕಾ​ರ​ದಲ್ಲಿ 20 ತಿಂಗಳು ಹಾಗೂ 2018ರಲ್ಲಿ ಜೆಡಿ​ಎಸ್‌ - ಕಾಂಗ್ರೆಸ್‌ ​ದೋಸ್ತಿ ಸರ್ಕಾ​ರ​ದಲ್ಲಿ 2ನೇ ಬಾರಿ 14 ತಿಂಗಳು ಸಿಎಂ ಹುದ್ದೆ ನಿಭಾ​ಯಿ​ಸಿ​ದ್ದರು.

Latest Videos
Follow Us:
Download App:
  • android
  • ios