ನನ್ನ ವಿರುದ್ಧ ಭ್ರಷ್ಟ​ತೆ ಸಾಬೀ​ತಾದ್ರೆ 1 ಕೋಟಿ ರು. ಬಹು​ಮಾ​ನ: ಹರತಾಳು ಹಾಲಪ್ಪ ಸವಾಲು

ತಮ್ಮ ಕುರಿತು ಭ್ರಷ್ಟಾಚಾರ ಆರೋಪ ಮಾಡುವವರು ಆಧಾರಯುತವಾಗಿ ಹೇಳಿದರೆ ಅವರಿಗೆ ನನ್ನ ಆಸ್ತಿ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಿಜೆಪಿಯ ಅಭ್ಯರ್ಥಿಯೂ ಆಗಿರುವ ಶಾಸಕ ಎಚ್‌.ಹಾಲಪ್ಪ ಘೋಷಿಸಿದರು.

If corruption is proved against me Crore Rs. Prize Harathalu Halappa Challenge at sagar rav

ಸಾಗರ (ಏ.15) : ತಮ್ಮ ಕುರಿತು ಭ್ರಷ್ಟಾಚಾರ ಆರೋಪ ಮಾಡುವವರು ಆಧಾರಯುತವಾಗಿ ಹೇಳಿದರೆ ಅವರಿಗೆ ನನ್ನ ಆಸ್ತಿ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಿಜೆಪಿಯ ಅಭ್ಯರ್ಥಿಯೂ ಆಗಿರುವ ಶಾಸಕ ಎಚ್‌.ಹಾಲಪ್ಪ(Haratalu halappa MLA) ಘೋಷಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯ ಆಗದಿರುವ ವಿರೋಧಿಗಳು ನನ್ನ ಕುರಿತು ಭ್ರಷ್ಟಾಚಾರದ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಒಂದೇ ಒಂದು ಆರೋಪ ಸಾಬೀತುಪಡಿಸಿದರೂ ಅವರಿಗೆ .1 ಕೋಟಿ ಬಹುಮಾನ ನೀಡುತ್ತೇನೆ ಎಂದರು.

ಗಣಪತಿ ಕೆರೆ ಮೇಲೆ ಧ್ವಜ ಹಾರಿಸಿದ್ದೇ ಸಾಧನೆ: ಹರತಾಳು ಹಾಲಪ್ಪ ವಿರುದ್ಧ ಕಾಗೋಡು ತಿಮ್ಮಪ್ಪ ಕಿಡಿ

ಕಳೆದ ಐದು ವರ್ಷಗಳ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡುವ ಬದಲು ನನ್ನ ವರ್ತನೆ, ನಡವಳಿಕೆ ಹೀಗೆ ಇಲ್ಲದ ಮತ್ತು ಅಲ್ಲದ ಆರೋಪಗಳನ್ನು ಜನರ ಮುಂದೆ ಹೇಳುವ ಮೂಲಕ ತಪ್ಪುಗ್ರಹಿಕೆ ತರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕ್ಷೇತ್ರದ ಜನತೆಗೆ ನಮ್ಮ ಕಾರ್ಯದಕ್ಷತೆ ಕುರಿತು ಹಾಗೂ ಬಿಜೆಪಿ ಆಡಳಿತದ ಕುರಿತು ಸ್ಪಷ್ಟಅರಿವಿದೆ. ಹಾಗಾಗಿ ವಿರೋಧಿಗಳ ಯಾವ ಪ್ರಯತ್ನಗಳು ಸಫಲ ಆಗುವುದಿಲ್ಲ ಎಂದರು.

ಕ್ಷೇತ್ರದ 828 ಹಳ್ಳಿಗಳಲ್ಲಿ ಒಂದಿಲ್ಲೊಂದು ಅಭಿವೃದ್ಧಿ ಕೆಲಸಗಳಾಗಿವೆ. ಈ ಹಿಂದೆ ಯಾರ ಆಡ​ಳಿತ ಕಾಲದಲ್ಲಿಯೂ ಆಗದ ಕೆಲಸಗಳು ಕಳೆದ ಅವಧಿಯಲ್ಲಿ ಆಗಿದ್ದು ಈ ಬಗ್ಗೆ ಅಲ್ಲಿನ ಜನರಿಗೆ ಸಮಾಧಾನ ತಂದಿದೆ. ಈಗ ಚುನಾವಣೆಗಾಗಿ ಹಳ್ಳಿಭಾಗದಲ್ಲಿ ಓಡಾಡುವ ಸಂದರ್ಭದಲ್ಲಿ ಜನ ಆಗಿರುವ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ. ಜೊತೆಗೆ ಮತ್ತೊಮ್ಮೆ ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆ. ಇದನ್ನು ಸಹಿಸದೇ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.

ಬೂತ್‌ಮಟ್ಟದ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ, ಜಿಲ್ಲೆ ಹಾಗೂ ರಾಜ್ಯದ ಮುಖಂಡರವರೆಗೆ ಎಲ್ಲರೂ ನಾನು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಆಗುವುದಕ್ಕೆ ಸೂಕ್ತ ಎನ್ನುವುದನ್ನು ಕೇಂದ್ರ ಪ್ರಮುಖರಿಗೆ ತಿಳಿಸುವ ಮೂಲಕ ನನಗೆ ‘ಬಿ’ ಫಾರಂ ದೊರೆಯುವಂತಾಗಿದೆ. ಹಾಗಾಗಿ, ಬೂತ್‌ಮಟ್ಟದ ಕಾರ್ಯಕರ್ತರಿಂದ ರಾಜ್ಯದವರೆಗಿನ ಎಲ್ಲರಿಗೂ ಅಭಾರಿ ಆಗಿದ್ದೇನೆ. ಪಕ್ಷದ ಮಾರ್ಗದರ್ಶನ ಜನರ ಆಕಾಂಕ್ಷೆ ರೀತಿಯಲ್ಲಿಯೇ ಕ್ಷೇತ್ರದಲ್ಲಿ ಮತ್ತೆ ಕೆಲಸ ಮಾಡುವುದಕ್ಕೆ ಬದ್ಧನಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆ.ಆರ್‌.ಗಣೇಶ್‌ ಪ್ರಸಾದ್‌, ಮಧುರಾ ಶಿವಾನಂದ, ಅರವಿಂದ ರಾಯ್ಕರ್‌, ಹು.ಬಾ.ಅಶೋಕ್‌, ಸಂತೋಷ್‌ ಶೇಟ್‌, ಸತೀಶ್‌ ಮೊಗವೀರ, ರೇವಪ್ಪ, ರಮೇಶ್‌ ಹಾರೆಗೊಪ್ಪ, ಪ್ರೇಮಾಸಿಂಗ್‌, ಭಾಷಾ ಸಾಬ್‌, ಪ್ರದೀಪ್‌, ಚಂದ್ರಕಾಂತ್‌ ಇದ್ದರು.

- - -

ಬಾಕ್ಸ್‌

ಇಂದು ನಾಮಪತ್ರ ಸಲ್ಲಿ​ಕೆ: ಹಾಲ​ಪ್ಪ

ಏ.15ರ ಬೆಳಗ್ಗೆ ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅನಂತರ ಮೆರವಣಿಗೆಯ ಮೂಲಕ ಸಾಗಿ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ. ಅನಂತರ ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ಕೂಡ ಏರ್ಪಡಿಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಬಿಜೆಪಿಯ ಜಿಲ್ಲಾ ಹಿರಿಯ ಹಾಗೂ ಕಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಅಭ್ಯ​ರ್ಥಿ ಹಾಲಪ್ಪ ಹೇಳಿ​ದ​ರು.

ಸಮಾಜವಾದಿ ಸಿದ್ಧಾಂತದಲ್ಲಿ ನಡೆದ ಅನೇಕರು ಮತ್ತು ಅವರ ಮಕ್ಕಳು ಈ ದೇಶದ ಒಳಿತಿಗಾಗಿ ಮತ್ತು ನರೇಂದ್ರ ಮೋದಿಯವರ ಆಡಳಿತದಿಂದ ಪ್ರಭಾವಿತರಾಗಿ ಬಿಜೆಪಿಗೆ ಸೇರಿದ ಅನೇಕ ಉದಾಹರಣೆ ಇದೆ. ಹಿಂದೆ ಜಾಜ್‌ರ್‍ ಫರ್ನಾಂಡೀಸ್‌ ವಾಜಪೇಯಿ ಅವರ ಸರ್ಕಾರದಲ್ಲಿ ಭಾಗಿಯಾಗಿದ್ದರು. ಈಗ ಹಿರಿಯ ಕಾಂಗ್ರೆಸ್ಸಿಗ ಎ.ಕೆ.ಆಂಟನಿ ಪುತ್ರ ಬಿಜೆಪಿಗೆ ಸೇರಿದ್ದಾರೆ ಎಂದರು.

 

ಬ್ರಾಹ್ಮಣರ ಮೇಲೆ ಹರತಾಳು ಹಾಲಪ್ಪನ ದಬ್ಬಾ​ಳಿಕೆ ಇನ್ಮುಂದೆ ಸಹಿ​ಸಲ್ಲ: ಬ್ರಾಹ್ಮಣ ಮಹಾ​ಸ​ಭಾ

ತಮ್ಮ ತಂದೆ ಕಾಗೋಡು ತಿಮ್ಮಪ್ಪ ಅವ​ರನ್ನು ಕಾಂಗ್ರೆಸ್‌ ನಡೆಸಿಕೊಂಡ ಕುರಿತು ಬೇಸರ ಹೊಂದಿರುವ ಡಾ.ರಾಜನಂದಿನಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಮ್ಮ ಪಕ್ಷ ಅವರನ್ನು ಮತ್ತು ಇದೀಗ ಬರುತ್ತಿರುವ ಎಲ್ಲರನ್ನೂ ಗೌರವದಿಂದ ನೋಡಿಕೊಳ್ಳಲಿದೆ. ಕಾಲ ಬಂದಾಗ ಸೂಕ್ತ ಸ್ಥಾನಮಾನ ಕಲ್ಪಿಸಲಿದೆ. ಕ್ಷೇತ್ರದಲ್ಲಿ ಬಿಜೆಪಿ ಆಡಳಿತ ಮೆಚ್ಚಿ ನೂರಾರು ಜನರು ಪಕ್ಷಕ್ಕೆ ಸೇರುತ್ತಿದ್ದಾರೆ. ಈಗಾಗಲೇ ಪಕ್ಷ ಸೇರಿರುವ ಹಾಗೂ ಮುಂದೆ ಸೇರಲಿರುವ ಎಲ್ಲರನ್ನು ಸ್ವಾಗತಿಸುವುದಾಗಿ ಹೇಳಿದರು.

Latest Videos
Follow Us:
Download App:
  • android
  • ios